Advertisement

ಮಧ್ಯಪ್ರದೇಶ; CM ಶಿವರಾಜ್ ಸಿಂಗ್ ಬಾವ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

05:06 PM Nov 03, 2018 | Team Udayavani |

ಭೋಪಾಲ್: ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಸಂಬಂಧಿ ಸಂಜಯ್ ಸಿಂಗ್ ಮಸಾನಿ ಶನಿವಾರ ನವದೆಹಲಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

Advertisement

ನವೆಂಬರ್ 28ರಂದು ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದೆ. ಏತನ್ಮಧ್ಯೆ ಸಿಎಂ ಶಿವರಾಜ್ ಸಿಂಗ್ ಅವರ ಬಾವ (ಹೆಂಡತಿ ಅಣ್ಣ) ಮಸಾನಿ ಅವರು ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯ ವಾರ್ಸೋನಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು.

ಆದರೆ ಬಿಜೆಪಿ ಸಂಜಯ್ ಸಿಂಗ್ ಮಸಾನಿಗೆ ಟಿಕೆಟ್ ನೀಡಲು ನಿರಾಕರಿಸಿ, ಹಾಲಿ ಶಾಸಕ ಯೋಗೇಂದ್ರ ನಿರ್ಮಲ್ ಅವರಿಗೆ ಟಿಕೆಟ್ ನೀಡುವುದಾಗಿ ತಿಳಿಸಿತ್ತು. ಮಸಾನಿ ಶಿವರಾಜ್ ಸಿಂಗ್ ಚೌಹಾಣ್ ಅವರ ಪತ್ನಿ ಸಾಧನಾ ಅವರ ಅಣ್ಣ.

ಬಿಜೆಪಿ ಈಗ ವಂಶಪಾರಂಪರ್ಯ ಪಕ್ಷವಾಗುತ್ತಿದೆ. ಅಲ್ಲದೇ ಸ್ವಜನ ಪಕ್ಷಪಾತ ಹೆಚ್ಚುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಶಾಸಕ ಅಥವಾ ಸಂಸದರ ಮಕ್ಕಳು, ಪುತ್ರಿಯರಿಗೆ ಟಿಕೆಟ್ ನೀಡಿದೆ. ಯಾರು ಪಕ್ಷಕ್ಕಾಗಿ ದುಡಿದಿದ್ದಾರೋ ಅವರನ್ನು ಪಕ್ಷ ಕಡೆಗಣಿಸಿದೆ ಎಂದು ಮಸಾನಿ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next