ಭೋಪಾಲ್: ಕೆಲವರು ರಸ್ತೆ ಬದಿ ಭಿಕ್ಷೆ ಬೇಡಿಕೊಂಡು ನಿಂತುಕೊಂಡಿರುವವರನ್ನು ನೋಡಿದರೆ ಆಯ್ಯೋ ಪಾಪ ಅನ್ನಿಸಿ ಚಿಲ್ಲರೆ ಹಣವನ್ನು ಹಾಕುತ್ತಾರೆ. ಆದರೆ ಅದೇ ಭಿಕ್ಷೆಯಿಂದ ಇಲ್ಲೊಬ್ಬ ಮಹಿಳೆ ಲಕ್ಷ ಲಕ್ಷ ಗಳಿಸಿದ್ದಾರೆ.!
ಹೌದು, ಕೇಳಲು ಅಚ್ಚರಿಯಾದರೂ ಮಧ್ಯ ಪ್ರದೇಶದ ಇಂದೋರ್ ನಲ್ಲಿ ಇಂಥದ್ದೊಂದು ಸನ್ನಿವೇಶ ಬೆಳಕಿಗೆ ಬಂದಿದೆ. ಇಂದಿರಾ ಬಾಯಿ ಎನ್ನುವ ಮಹಿಳೆ ದಿನನಿತ್ಯ ರಸ್ತೆಬದಿಯಲ್ಲಿ ಭಿಕ್ಷೆ ಬೇಡಿಕೊಂಡೇ ಲಕ್ಷ ಲಕ್ಷ ಗಳಿಸಿದ್ದಾರೆ.!
ಫೆ.12 ರಂದು ಇಂದೋರ್ ನ ಲವ್ ಕುಶ್ ಸ್ಕ್ವೇರ್ ಪ್ರದೇಶಕ್ಕೆ ಸರ್ಕಾರೇತರ ಸಂಸ್ಥೆ (ಎನ್‌ಜಿಒ) ಯೊಂದು ಭೇಟಿ ನೀಡಿದ್ದಾರೆ. ಈ ವೇಳೆ 8 ವರ್ಷದ ಮಗುವಿನೊಂದಿಗೆ ಭಿಕ್ಷೆ ಬೇಡುತ್ತಿರುವುದನ್ನು ನೋಡಿದ್ದಾರೆ. ಎನ್ ಜಿಎ ಸದಸ್ಯರು ಮಹಿಳೆಯ ಬಳಿಗೆ ಹೋಗಿ ಮಗುವಿನೊಂದಿಗೆ ಭಿಕ್ಷೆ ಬೇಡುತ್ತಿರುವುದು ತಪ್ಪೆಂದು ಹೇಳಿ ಆಕೆಯೊಂದಿಗೆ ಮಾತನಾಡಿದ್ದಾರೆ.
ನನ್ನ ಇತರ ಇಬ್ಬರು ಮಕ್ಕಳು ರಾಜಸ್ಥಾನದ ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ ಎಂದು ಪ್ರಶ್ನೆಗಳಿಗೆ ಉತ್ತರಿಸಿದ ಮಹಿಳೆ, “ನನ್ನ ಮೂವರು ಮಕ್ಕಳು ಮತ್ತು ತನ್ನ ಕುಟುಂಬದ ಇತರ ಸದಸ್ಯರೊಂದಿಗೆ ಇಂದೋರ್‌ನ ಬೀದಿಗಳಲ್ಲಿ ಭಿಕ್ಷೆ ಬೇಡುತ್ತೇನೆ” ಎಂದು ಹೇಳಿದ್ದಾರೆ.
ಇನ್ನು ಮುಂದುವರೆದು ಪ್ರಶ್ನೆ ಕೇಳಿದಾಗ, ಭಿಕ್ಷಾಟನೆಯ ಮೂಲಕ ಏಳು ದಿನಗಳಲ್ಲಿ 19,000 ರೂ.ಗಿಂತ ಹೆಚ್ಚು ಸಂಪಾದಿಸಿದ್ದೇನೆ. ನಾನು ದಿನಕ್ಕೆ ಭಿಕ್ಷೆ ಬೇಡಿ 3000 ರೂಪಾಯಿಯನ್ನು ಗಳಿಸುತ್ತೇನೆ. ಭಿಕ್ಷೆಯ ಹಣದಿಂದ ಒಂದು ಕಾಂಕ್ರೀಟ್ ಮನೆ, ಹಳ್ಳಿಯಲ್ಲಿ ಜಮೀನು ಮತ್ತು ಬೈಕ್ ಖರೀದಿಸಿದ್ದೇನೆ. 45 ದಿನಗಳಲ್ಲಿ 2.5 ಲಕ್ಷ ರೂ.ಗಿಂತ ಹೆಚ್ಚು ಸಂಪಾದಿಸಿದ್ದೇನೆ. ಅದರಲ್ಲಿ 1 ಲಕ್ಷ ರೂ.ಗಳನ್ನು ತನ್ನ ಅತ್ತೆಯ ಖಾತಗೆ ವರ್ಗಾಯಿಸಿದ್ದೇನೆ. 50,000 ರೂ.ಗಳನ್ನು ಬ್ಯಾಂಕ್‌ನಲ್ಲಿ ಠೇವಣಿ ಇರಿಸಿದ್ದು, ತನ್ನ ಮಗುವಿನ ಹೆಸರಿನಲ್ಲಿ ಇನ್ನೂ 50,000 ರೂ.ವನ್ನು ಇಟ್ಟಿದ್ದೇನೆ ಎಂದು ಹೇಳಿದ್ದಾರೆ.
ಮಕ್ಕಳನ್ನು ಮುಂದಿಟ್ಟು ಭಿಕ್ಷೆ ಬೇಡಿಸಿದ ಆರೋಪದ ಮೇಲೆ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಯ 8 ವರ್ಷದ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಗೆ (CWC) ಹಸ್ತಾಂತರಿಸಲಾಗಿದೆ.
ಎನ್ ಜಿಒ ಸದಸ್ಯರು ಮಹಿಳೆಯ ಮನೆಗೆ ಭೇಟಿ ನೀಡಿದ ವೇಳೆ ಅಲ್ಲಿಂದ ಕುಟುಂಬಸ್ಥರು ಬಂಧನದ ವಿಚಾರ ತಿಳಿದು ಆದಾಗಲೇ ಪರಾರಿ ಆಗಿದ್ದಾರೆ ಎಂದು ವರದಿ ತಿಳಿಸಿದೆ.