Advertisement

Madhya Pradesh; ಶ್ಲೋಕ ಹೇಳಲು ನಿರ್ಬಂಧ:ಪ್ರಾಂಶುಪಾಲನ ವಿರುದ್ಧ ಕೇಸ್‌

12:22 AM Jul 26, 2024 | Team Udayavani |

ಗುಣಾ: ಶಾಲೆಯಲ್ಲಿ ವಿದ್ಯಾರ್ಥಿಗಳು ಸಂಸ್ಕೃತ ಶ್ಲೋಕ ಹೇಳದಂತೆ ನಿರ್ಬಂಧಿಸಿದ ಕಾರಣಕ್ಕೆ ಮಧ್ಯಪ್ರದೇಶದ ಗುಣಾದಲ್ಲಿನ ಖಾಸಗಿ ಶಾಲೆಯ ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಾಂಶುಪಾ ಲರು ಈಗಾಗಲೇ ಈ ವಿಚಾರವಾಗಿ ಕ್ಷಮೆಯಾಚಿಸಿದ್ದಾರೆ ಎನ್ನಲಾಗಿದೆ. ಜು.15ರಂದು ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ಬೆಳಗ್ಗಿನ ಅಸೆಂಬ್ಲಿಯಲ್ಲಿ “ಸರ್ವೇ ಭವಂತು ಸುಖೀನಃ, ಸರ್ವೇ ಭವಂತು ಸುಖಮಯ’ ಎಂಬ ಶ್ಲೋಕ ಹೇಳುತ್ತಿದ್ದರು. ಈ ವೇಳೆ ಪ್ರಾಂಶುಪಾಲರಾದ ಸಿಸ್ಟರ್‌ ಕ್ಯಾಥರೀನ್‌ ವಿದ್ಯಾರ್ಥಿಗಳಿಂದ ಮೈಕ್‌ ಕಸಿದುಕೊಂಡು ಇಂಥವುಗಳನ್ನೆಲ್ಲ ಶಾಲೆಯಲ್ಲಿ ಹೇಳುವಂತಿಲ್ಲ ಎಂದು ತಾಕೀತು ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಎಬಿವಿಪಿ ಸದಸ್ಯರು ಶಾಲೆಯೆದುರು ಪ್ರತಿಭಟನೆ ನಡೆಸಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next