Advertisement

ಮಧ್ಯಪ್ರದೇಶ;ಕ್ರಿಮಿನಲ್ ಆರೋಪ ಹೊತ್ತ ಶಾಸಕರ ಸಂಖ್ಯೆ ಎಷ್ಟು ಗೊತ್ತಾ?

11:29 AM Dec 15, 2018 | Sharanya Alva |

ನವದೆಹಲಿ: ಮಧ್ಯಪ್ರದೇಶದ 230 ಸದಸ್ಯ ಬಲದ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾದ ಸುಮಾರು 94 ಜನಪ್ರತಿನಿಧಿಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಿದ್ದು, ಇದರಲ್ಲಿ 47 ಶಾಸಕರ ಮೇಲೆ ಕೊಲೆ, ಕೊಲೆ ಯತ್ನ ಪ್ರಕರಣ ಹಾಗೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ ಗಂಭೀರ ಪ್ರಕರಣಗಳು ದಾಖಲಾಗಿರುವುದಾಗಿ ಘೋಷಿಸಿಕೊಂಡಿದ್ದಾರೆ!

Advertisement

ಅಸೋಸಿಯೇಷನ್ ಆಫ್ ಡೆಮೊಕ್ರಟಿಕ್ ರಿಫಾರ್ಮ್ಸ್(ಎಡಿಆರ್)ನ ವರದಿ ಪ್ರಕಾರ, ಕೊಲೆ ಯತ್ನದ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಆರು ಶಾಸಕರು ಘೋಷಿಸಿಕೊಂಡಿದ್ದು, ಒಬ್ಬ ಶಾಸಕರು ಕೊಲೆ ಆರೋಪ ಎದುರಿಸುತ್ತಿದ್ದಾರೆ. ಸುಖ್ ದೇವ್ ಪಾನ್ಸೆ ಕೊಲೆ ಪ್ರಕರಣ ಆರೋಪ ಹೊತ್ತ ಶಾಸಕರಾಗಿದ್ದು, ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮುಲ್ ಟೈ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

ಮೂವರು ಶಾಸಕರ ವಿರುದ್ಧ ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಪ್ರಕರಣ ದಾಖಲಾಗಿದೆ. ಚುನಾವಣೆಗೂ ಮುನ್ನ ಅಭ್ಯರ್ಥಿಗಳಾಗಿದ್ದ ವೇಳೆ ಸಲ್ಲಿಸಿದ್ದ ಅಫಿಡವಿಟ್ ನಲ್ಲಿ ಕಾಂಗ್ರೆಸ್ ಪಕ್ಷದ 114 ಶಾಸಕರಲ್ಲಿ, 56 ಮಂದಿ (ಶೇ.49ರಷ್ಟು) ತಮ್ಮ ಮೇಲೆ ಕ್ರಿಮಿನಲ್ ಕೇಸ್ ಇರುವುದಾಗಿ ಘೋಷಿಸಿಕೊಂಡಿದ್ದರು. 109 ಬಿಜೆಪಿ ಶಾಸಕರುಗಳ ಪೈಕಿ 34 (ಶೇ.31%) ಮಂದಿ ತಮ್ಮ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿರುವುದಾಗಿ ಮಾಹಿತಿ ನೀಡಿರುವುದಾಗಿ ವರದಿ ವಿವರಿಸಿದೆ.

Advertisement

ಇಬ್ಬರು ಬಿಎಸ್ಪಿ ಹಾಗೂ ಓರ್ವ ಸಮಾಜವಾದಿ ಪಕ್ಷದ ಶಾಸಕರು ಕೂಡಾ ತಮ್ಮ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿರುವುದಾಗಿ ಅಫಿಡವಿಟ್ ನಲ್ಲಿ ಮಾಹಿತಿ ನೀಡಿದ್ದಾರೆ.

230 ಸದಸ್ಯ ಬಲದ ವಿಧಾನಸಭೆಯಲ್ಲಿ ಗಂಭೀರ ಅಪರಾಧ ಎದುರಿಸುತ್ತಿರುವವರ ಪಟ್ಟಿಯಲ್ಲಿ 28 ಮಂದಿ(ಶೇ.25%) ಕಾಂಗ್ರೆಸ್ ಶಾಸಕರು, 15 (ಶೇ.14) ಬಿಜೆಪಿ ಶಾಸಕರು, ಇಬ್ಬರು ಬಿಎಸ್ಪಿ, ಒಬ್ಬರು ಸಮಾಜವಾದಿ ಪಕ್ಷದ ಶಾಸಕರು ಹಾಗೂ ನಾಲ್ಕು ಪಕ್ಷೇತರ ಶಾಸಕರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next