Advertisement

ಮಧ್ವರ ತತ್ವ,ಸಿದ್ಧಾಂತ ತಿಳಿಸುವ ಕಾರ್ಯ ಆಗಲಿ: ಪಾಟೀಲ್‌

03:45 AM Feb 03, 2017 | |

ಉಡುಪಿ: ಮಧ್ವಾಚಾರ್ಯರ ತಣ್ತೀಸಿದ್ಧಾಂತಗಳನ್ನು ಯುವ ಜನರು ಸರಿಯಾಗಿ ಅರ್ಥೈಸಿಕೊಂಡಿಲ್ಲ. ವಿದ್ವಾಂಸರು ಅದನ್ನು ತಿಳಿಸಿಕೊಡುವ ಕಾರ್ಯ ಮಾಡಬೇಕು ಎಂದು ಸಚಿವ ಎಚ್‌.ಕೆ. ಪಾಟೀಲ್‌ ಹೇಳಿದರು.
 
ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಶ್ರೀ ಮಧ್ವ ಸಪ್ತ ಶತಮಾನೋತ್ಸವದ ಅಂಗವಾಗಿ ಗುರುವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ಸಮಾಜದಲ್ಲಿ ಅಶುದ್ಧವಾದುದನ್ನು ಶುದ್ಧಗೊಳಿಸುವ ಕೆಲಸ ಆಗಬೇಕು. ಅಂತಹ ಕಾರ್ಯಗಳನ್ನು ಪೇಜಾವರ ಶ್ರೀ ಮಾಡು
ತ್ತಿದ್ದಾರೆ. ತನ್ನ ವಿರುದ್ಧ ಮನಸ್ಸಿಗೆ ನೋವುಂಟಾಗುವ ಕೆಲಸ ನಡೆದರೂ ಎದೆಗುಂದದೆ ಅಸೃಶ್ಯತೆ ಹೊಗಲಾಡಿಸಲು ಪ್ರಯತ್ನಿಸುತ್ತಿದ್ದಾರೆ. ಸಾಮಾಜಿಕ ಬದಲಾವಣೆಗೆ ಸ್ಪಂದಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.

ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಶ್ರೀ ಕೃಷ್ಣಾಪುರ ಮಠದ ವಿದ್ಯಾಸಾಗರತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.

ಮಧ್ವಾಚಾರ್ಯರು ಸಂಸ್ಕೃತ ಭಾಷೆ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಬನ್ನಂಜೆ ಗೋವಿಂದಾಚಾರ್ಯ ಹೇಳಿದರು.

ಇದೇ ವೇಳೆ ಶ್ರೀಪಾದರು ನಾಡಗೀತೆಯಲ್ಲಿ ಮಧ್ವರ ಹೆಸರು ಇರುವ ಬಗ್ಗೆ ವಿವಾದವೆದ್ದಾಗ ಎಸ್‌.ಎಂ. ಕೃಷ್ಣ ಸರಕಾರದಲ್ಲಿ ಸಚಿವರಾಗಿದ್ದ ಎಚ್‌.ಕೆ. ಪಾಟೀಲ್‌ ಮಧ್ಯ ಪ್ರವೇಶಿಸಿ ಮತ್ತೆ ನಾಡಗೀತೆಯಲ್ಲಿ ಮಧ್ವರ ಹೆಸರು ಸೇರ್ಪಡೆಗೊಳಿಸಿದನ್ನು ಸ್ಮರಿಸಿದರು. ಧಾರ್ಮಿಕ ಸಭೆ ಉದ್ದೇಶಿಸಿ ಪೇಜಾವರ ಶ್ರೀ ಮಾತನಾಡಿದರು.

Advertisement

“ಕರುನಾಡಿನ ದೊಡ್ಡ 
ದಾರ್ಶನಿಕರು’

ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಆರ್ಶೀವಚನ ನೀಡಿ, ಮಧ್ವಚಾರ್ಯರು ಕರುನಾಡಿನಲ್ಲಿ ಅವತರಿಸಿದ ದೊಡ್ಡ ದಾರ್ಶನಿಕರು. ಆಧ್ಯಾತ್ಮಿಕ ಚಿಂತನೆಗಳಿಂದ ನಾಡಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಪ್ರಪಂಚ ಮಾತ್ರ ಸತ್ಯ ಎನ್ನುವುದು ದೊಡ್ಡ ದುರಂತ. ಕಣ್ಣಿಗೆ ಕಾಣದಿರುವ ಅತೀಂದ್ರಿಯ ಶಕ್ತಿಗಳ ಬಗ್ಗೆಯೂ ನಂಬಿಕೆ ಇರಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next