Advertisement

ಮಧುಗಿರಿ : ನಮ್ಮ ಕಾಲೇಜಿನಲ್ಲಿ ಸಮವಸ್ತ್ರ ಇಲ್ಲ, ಹಿಜಾಬ್ ಧರಿಸಲು ಅವಕಾಶ ನೀಡಿ

07:02 PM Mar 16, 2022 | Team Udayavani |

ಮಧುಗಿರಿ: ಪದವಿ ಪೂರ್ವ ಕಾಲೇಜಿನಲ್ಲಿ ಸಮವಸ್ತ್ರ ಇಲ್ಲಾ ನಮಗೆ ಹಿಜಾಬ್ ಬೇಕು ಎಜುಕೇಷನ್ ಬೇಕು ಎಂದು ಪ್ರಥಮ ಪಿಯುಸಿ ಕೆಲ ವಿದ್ಯಾರ್ಥಿ ನಿಯರು ಕಾಲೇಜು ಬಹಿಷ್ಕರಿಸಿರುವ ಘಟನೆ ನಡೆದಿದೆ.

Advertisement

ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಮುಸ್ಲಿಂ ವಿದ್ಯಾರ್ಥಿನಿಯರ ತಂಡವೊಂದು ಎಂದಿನಂತೆ ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದರು.

ಇತ್ತೀಚೆಗೆ ಹೈಕೋರ್ಟ್ ಹಿಜಾಬ್ ಧರಿಸದಂತೆ ಮಹತ್ವ ಆದೇಶ ನೀಡಿದ್ದರು ಈ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದರು ಇದನ್ನು ಕಾಲೇಜಿನ ಪ್ರಾಚಾರ್ಯ ಹಾಗೂ ಉಪನ್ಯಾಸಕರು ಹಿಜಾಬ್ ತೆಗೆದು ಕಾಲೇಜಿಗೆ ಪ್ರವೇಶಿಸುವಂತೆ ತಿಳಿ ಹೇಳಿದರು ಈ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಪೋಸ್ಟರ್ ಗಳನ್ನು ಹಿಡಿದು ಉಪನ್ಯಾಸಕರು ಹಾಗೂ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.

ಈ ಬಗ್ಗೆ ವಿದ್ಯಾರ್ಥಿನಿ ಹಾಜೀರಾ ಪ್ರತಿಕ್ರಿಯಿಸಿ ನಾವು ಮೊದಲಿನಿಂದಲೂ ಹಿಜಾಬ್ ಧರಿಸುತ್ತಿದ್ದೇವೆ ನಾವು ಹಿಜಾಬ್ ನ್ನು ಧರಿಸುತ್ತೇವೆ ಏನು ಇವಾಗ. ಇದೂ ಈಗ ಹೊಸತೇನಲ್ಲಾ ಈ ಕಾಲೇಜಿನಲ್ಲಿ ಸಮವಸ್ತ್ರ ಇಲ್ಲಾ ಹಾಗೂ ಕೆಲವರು ಬಿಂದಿಗಳನ್ನು ಧರಿಸಿ ಕೊಂಡು ಬರುತ್ತಾರೆ ಅದನ್ನು ತೆಗೆಸಿ ನಾವುಗಳು ಹಿಜಾಬ್ ಬಿಚ್ಚುವುದಿಲ್ಲ ಬೂರ್ಕಾ ಬಿಚ್ಚುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ : ಸಂಕೀಘಟ್ಟ ಮಾದರಿ ಪಬ್ಲಿಕ್ ಶಾಲೆ ಲೋಕಾರ್ಪಣೆ ಮಾಡಿದ ಅಶ್ವತ್ಥನಾರಾಯಣ

Advertisement

ಮತ್ತೊಬ್ಬ ವಿದ್ಯಾರ್ಥಿನಿ ಮಾತನಾಡಿ ನ್ಯಾಯಾಲಯದ ಆದೇಶವಿರುವುದು ಸಮವಸ್ತ್ರ ನಿಗಧಿ ಪಡಿಸಿರುವ ಕಾಲೇಜಿಗೆ ಮಾತ್ರ ಹಿಜಾಬ್ ಅನ್ವಯ ವಾಗುತ್ತದೆ ಆದರೆ ನಮ್ಮ ಕಾಲೇಜಿನಲ್ಲಿ ಸಮವಸ್ತ್ರ ವೇ ಇಲ್ಲಾ ,ಈ ಕಾಲೇಜಿನಲ್ಲಿ ಸರಿಯಾಗಿ ಪಾಠಗಳನ್ನು ಮಾಡುತ್ತಿಲ್ಲ ನಮಗೆ ಹಾಜರಾತಿಯೂ ನೀಡುತ್ತಿಲ್ಲಾ, ಪ್ರಯೋಗಿಕ ಪರೀಕ್ಷೆಗಳನ್ನು ನೀಡಿವುದಿಲ್ಲ ಎಂದು ಕಾಲೇಜಿನವರು ಹೇಳುತ್ತಿದ್ದಾರೆ.

ನಮಗೆ ನಮ್ಮ ಪೋಷಕರ ಬೆಂಬಲವಿದೆ ನಮಗೆ ಹಿಜಾಬ್ ಬೇಕು ಎಜುಕೇಷನ್ ಬೇಕು ಅದೂ ನಮ್ಮ ಹಕ್ಕು ಅದನ್ನು ಪಡೆದೆ ಪಡೆದುಕೊಳ್ಳುತ್ತೇವೆ ಎಂದು ಪ್ರತಿಕ್ರಿಯೆ ವ್ಯಕ್ತ ಪಡಿಸಿ ತರಗತಿಗಳಿಗೆ ಹಾಜರಾಗದೆ ಮನೆಗಳಿಗೆ ಹಿಂದಿರುಗಿದ್ದಾರೆ.

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪೋಷಕರೊಂದಿಗೆ ಶಾಂತಿ ಸಭೆಯನ್ನು ಸಹ ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next