ಶಿವಮೊಗ್ಗ: ವಿಜಯೇಂದ್ರ ಮೊನ್ನೆ ಮೊನ್ನೆ ಯಡಿಯೂರಪ್ಪ ಪರ ಮತ ಕೇಳಿರಬೇಕು. ನಾನು ಆಗಲೇ ನಿಮ್ಮ ತಂದೆಯವರ ಪರ ಪ್ರಚಾರ ಮಾಡಿದ್ದೆ. ವಿಜಯೇಂದ್ರಗೆ ಒಂದು ಕಿವಿ ಮಾತು ಹೇಳುತ್ತೇನೆ. 2004 ರಲ್ಲಿ ಮೊದಲ ಚುನಾವಣೆಗೆ ನಿಂತಿದ್ದೆ. ನಾನು ನಾಮಪತ್ರ ಬೆಳಗ್ಗೆ ಸಲ್ಲಿಸಿ ಸಂಜೆ ಯಡಿಯೂರಪ್ಪ ನವರ ನಾಮಪತ್ರ ಸಲ್ಲಿಸಲು ಹೋಗಿದ್ದೆ. 1999 ಯಡಿಯೂರಪ್ಪ ನವರು ಸೋತಿದ್ದಾಗ ಬಂಗಾರಪ್ಪನವರು ಬಿಜೆಪಿಗೆ ಹೋಗಿದ್ದರು. ಅವತ್ತು ಒಂದು ಸಭೆ ನಡೆದಿತ್ತು. ಆ ಸಭೆಯಲ್ಲಿ ವಿಜಯೇಂದ್ರ ಇರಲಿಲ್ಲ ಅವರು ಹೊರಗಡೆ ಇದ್ದರು. ಯಡಿಯೂರಪ್ಪನವರು ರಾಜ್ಯ ಸುತ್ತಬೇಕು ಕಣಪ್ಪ ಅಂದ್ರೂ. ಆಗ ನಮ್ಮ ನಾಯಕ ಯಡಿಯೂರಪ್ಪ ಆಗಿದ್ದರು. ನನ್ನ ಪರವಾಗಿ ಚುನಾವಣೆ ಪ್ರಚಾರ ಮಾಡಬೇಕು ಅಂದಿದ್ದರು. ಯತ್ನಾಳ್ ಆರೋಪಕ್ಕೆ ಮೊದಲ ಉತ್ತರ ಕೊಡಿ ವಿಜಯೇಂದ್ರ ಅವರೇ. ಆಮೇಲೆ ನನ್ನ ರಾಜೀನಾಮೆ ಕೇಳಿ. ಕೇಲವು ಪಟಿಂಗರಿಗೆ ದುಡ್ಡು ಕೊಟ್ಟು ಟ್ವೀಟ್ ಮಾಡುವುದು, ಕೆಲಸ ಇಲ್ಲದ ಬಡಗಿ ಏನು ಮಾಡಿದನಂತೆ….. ತಂದೆಯವರಿಗೆ ನಾನು ಯಾವುದೇ ಕೇಸ್ ಹಾಕಿಸಿಲ್ಲ. ನೀವು ಮಾಡಿದ್ದೀರೆಂದು ನಾನು ಹೇಳುತ್ತಿಲ್ಲ. ನನ್ನ ರಾಜೀನಾಮೆ ಕೇಳಲು ನೀವು ಯಾರು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀವು ಟ್ಟೀಟ್ ಮಾಡಿದ ಮೇಲೆ ಜನ ನೂರು ಕೋಟಿ ಕೊಡಲು ಬಂದರು. ನನ್ನ ಬಳಿ ನಾನು ದುಡಿದಿರುವ ದುಡ್ಡು ಇದೆ. ನನ್ನ ತಟ್ಟೆ ತುಂಬಾ ಕ್ಲಿನ್ ಇದೆ. ವಿಜಯೇಂದ್ರ ಅವರೇ ನಿಮ್ಮ ತಟ್ಟೆಯಲ್ಲಿ ಸತ್ತು ಹೋಗಿರುವ ಹೆಗ್ಗಣವಿದೆ. ನನ್ನ ವಿಚಾರಕ್ಕೆ ಬರಬೇಡಿ ನಾನು ಹೊಟ್ಟೆಗೆ ಅನ್ನ ತಿನ್ನುತ್ತೇನೆ ಎಂದರು.
ಖಾಸಗಿ ವಿಚಾರವನ್ನು ಬೇರೆಯವರಿಗೆ ಆಹಾರ ಮಾಡಬೇಡಿ. ಬಂಗಾರಪ್ಪರ ಕ್ಲೀನ್ ಹ್ಯಾಂಡ್ ಆಗಿದ್ದರು. ಖಾಸಗಿ ವಿಚಾರಗಳಿಗೆ ಕೈ ಹಾಕಿದಾಗ ವಿಚಾರಿಸಬೇಕು. ಬಿಜೆಪಿಯವರಿಗೆ ಮಾಡಲು ಕೆಲಸ ಇಲ್ಲ. ನನ್ನ ಬಗ್ಗೆ ಬಿಜೆಪಿಯ ವಿಜಯೇಂದ್ರ, ನಳೀನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ. ರವಿಕುಮಾರ್ ನನ್ನ ಬಗ್ಗೆ ಮಾತಾಡಿ ರಾಜೀನಾಮೆ ಕೇಳಿದ್ದಾರೆ. ರವಿಕುಮಾರ್ ಯೂಸ್ ಲೆಸ್ ನಾಯಕ. ಗ್ರಾಮ ಪಂಚಾಯತ್ ಸಹ ಗೆಲ್ಲಲು ಆಗದೇ ಇರುವವನು ಅವನು. ನಾನು ಎಂಟು ಬಾರಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ರವಿಕುಮಾರ್ ನನ್ನ ರಾಜೀನಾಮೆ ಕೇಳುತ್ತಾರೆ. ಆರ್.ಅಶೋಕ್ ಅವರ ಮೇಲೆ ಭ್ರಷ್ಟಾಚಾರದ ಹೊರೆ ಇದೆ. ನಿಮ್ಮ ಪಕ್ಷದ ನಾಯಕನೇ ಆರೋಪ ಮಾಡಿದ್ದಾರೆ. ಸಾವಲ್ಲಿ ಭ್ರಷ್ಟಾಚಾರ ಮಾಡಿದವರು ನೀವು. ನನ್ನ ರಾಜೀನಾಮೆ ಕೇಳಲು ನಿಮಗೆ ಏನು ನೈತಿಕ ಹೊಣೆಯಿದೆ? ಆರ್.ಅಶೋಕ್ ಅವರಿಗೆ ಮಾನ ಮರ್ಯಾದೆ, ಗೌರವವಿದ್ದರೆ ನೀವು ರಾಜೀನಾಮೆ ನೀಡಬೇಕು. ಬಂಗಾರಪ್ಪ ಕಾಲೋನಿಯಲ್ಲಿ ಇವರ ಭ್ರಷ್ಟಾಚಾರವಿದೆ. ಆಶ್ರಯದ ಸೈಟು ನೀಡುವಲ್ಲಿ ಇವರ ಭ್ರಷ್ಟಾಚಾರವಿದೆ. ಮಾನಾ ಮರ್ಯಾದೆಯಿದ್ದರೆ ರಾಜೀನಾಮೆ ನೀಡಿ ಎಂದರು.
ನಳಿನ್ ಕುಮಾರ್ ಕಟೀಲ್ ಬಿಜೆಪಿ ಸೋಲಿಗೆ ಕಾರಣನಾದ ನಾಯಕ. ಬಂಗಾರಪ್ಪ ಬಿಜೆಪಿಗೆ ಸೇರದೆ ಇದ್ದರೆ ಇವರು ಯಾರು ಅಡ್ರೆಸ್ ಗೆ ಇರುತ್ತಿರಲಿಲ್ಲ. ಸಾವಿನಲ್ಲಿ ರಾಜಕೀಯ ಮಾಡುತ್ತಿರುವನು ನಳಿನ್ ಕುಮಾರ್ ಕಟೀಲ್. ಪ್ರವೀಣ್ ನೆಟ್ಟಾರ್ ಪ್ರಕರಣದಲ್ಲಿ ರಾಜಕೀಯ ಮಾಡಿದರು. ಅವರ ಕಾರಿನ ಟೈರ್ ಪಂಚರ್ ಮಾಡಿದ್ದು ಅವರದ್ದೇ ಕಾರ್ಯಕರ್ತರು ಅಲ್ವಾ. ಲೋಕಸಭೆಗೆ ನಿಮಗೆ ಟಿಕೆಟ್ ಸಿಕ್ಕರೆ ನಾನೇ ಅಲ್ಲಿಗೆ ಬರುತ್ತೇನೆ. ಪರೇಶ್ ಮೆಸ್ತಾ ಅವರ ಸಾವಲ್ಲಿ ಮತ ಕೇಳಿದವರು ಇವರು. ಅದರಿಂದಾಗಿ ಚುನಾವಣೆಯಲ್ಲಿ ಗೆದ್ದಿದ್ದರು. ಇನ್ನೂ ನಾಲ್ಕು ತಿಂಗಳು ಸರ್ಕಾರಿ ಸಂಬಳ ಬರುತ್ತದೆ. ಬಿಜೆಪಿ ಸೋಲಿಗೆ ಕಾರಣ ಆದವರು ನೀವು. 113 ತಗೊಂಡು ಸ್ವತಃ ಶಕ್ತಿಯಲ್ಲಿ ನೀವು ಬಂದಿಲ್ಲ ಎಂದು ಟೀಕಿಸಿದರು.
ಶಿಕಾರಿಪುರದಲ್ಲಿ ನೀರಾವರಿ ಆಗಿದ್ದು ನನ್ನಿಂದ. ಬರಗಾಲದಲ್ಲಿ ಬಂಗಾರಪ್ಪ ಅಕ್ಕಿ, ಭತ್ತ ಹಂಚಿದ ಋಣದಲ್ಲಿ ನೀವು ಇದ್ದಿರಾ. ಸರ್ಕಾರ ದಿವಾಳಿ ಆಗಿದೆ ಅಂತ ಹೇಳುತ್ತಿದ್ದಿರಾ. ಶಕ್ತಿ ಯೋಜನೆಯಲ್ಲಿ ಬಿಜೆಪಿ ಕಾರ್ಯಕರ್ತರು ಓಡಾಡಿದ್ದಾರೆ. ಗೃಹ ಲಕ್ಷ್ಮೀ ಯೋಜನೆಯಲ್ಲಿ ನಿಮ್ಮ ಬಿಜೆಪಿಯವರು ಎಷ್ಟು ತೆಗೊಂಡಿದ್ದಾರೆ ಲೆಕ್ಕ ಹಾಕಿ. ನಮಗೆ ತಾಕತ್ತಿದ್ದರೆ ನಿಮ್ಮ ಪಕ್ಷದವರಿಗೆ ಇದನ್ನು ತಗೆದುಕೊಳ್ಳಬೇಡಿ ಎಂದು ಹೇಳಿ ನೋಡೊಣ. ನಾನು ಪ್ರಣಾಳಿಕೆಯ ಉಪಾಧ್ಯಕ್ಷನಾಗಿದ್ದವನು. ಸುಳ್ಳು ಘೋಷಣೆ ಮಾಡಿಲ್ಲ ನಾವು. ಶಾಲಾ ಮಕ್ಕಳ ಕೈಗೆ ಪೊರಕೆ ಕೊಟ್ಟವರು ಬಿಜೆಪಿಯವರು. ಪೊರಕೆ ಇಳಿಸುತ್ತಿರುವವರು ನಾವು. ಆರ್ಥಿಕ ಸ್ಥಿತಿ ಚೆನ್ನಾಗಿರುವುದರಿಂದ ಎರಡು ಮೊಟ್ಟೆ ಕೊಡುತ್ತಿದ್ದೇವೆ. ಪರ್ಮನೆಂಟಾಗಿ ಬಿಜೆಪಿ ವಿರೋಧ ಪಕ್ಷದಲ್ಲೇ ಇರುವಂತೆ ಮಾಡುತ್ತೇವೆ ಎಂದು ಮಧು ಬಂಗಾರಪ್ಪ ಹೇಳಿದರು.
ತಮ್ಮ ಕಳ್ಳನಾದರೆ..: ಪ್ರತಾಪ್ ಸಿಂಹನಿಗೆ ಮಾನ ಮರ್ಯಾದೆ ಇದೆಯಾ. ಅವರೊಬ್ಬ ಬರಹಗಾರ ಹಾಗೆಲ್ಲ ಮಾತನಾಡಬಾರದು. ಮಧು ಬಂಗಾರಪ್ಪ ಪ್ರಕರಣ ಡೈವರ್ಟ್ ಮಾಡಲು ನನ್ನ ತಮ್ಮನನ್ನು ಅರೆಸ್ಟ್ ಮಾಡಿದ್ದಾರೆ ಎನ್ನುತ್ತಾರೆ. ಅವನ ತಮ್ಮ ಕಳ್ಳನಾದರೇ ನನ್ನ ಹೆಸರು ಯಾಕೆ ಹೇಳುತ್ತೀರಿ ಎಂದರು.
ರಾಮ ಎಲ್ಲಿದ್ದರೇನು ಅದೇ ರಾಮ ಅಲ್ವಾ. ಅವ್ಯವಹಾರದ ರಾಮ ಮಂದಿರ ಆಗಬಾರದು. ರಾಮನನ್ನು ಬೀದಿಪಾಲು ಮಾಡಬೇಡಿ. ರಾಮ ಎಲ್ಲರಿಗೂ ಸೇರಿದವನು ಕೇವಲ ಬಿಜೆಪಿಯವರಿಗೆ ಸೇರಿವನಲ್ಲ. ಧಾರ್ಮಿಕ ಭಾವನೆ ಮೇಲೆ ಬಿಜೆಪಿಯವರಿಗೆ ಇನ್ನು ಮುಂದೆ ಮತ ಬರಲ್ಲ ಎಂದರು.