Advertisement

ನನ್ನ ಹೇರ್ ಕಟಿಂಗ್ ಮಾಡುವವರಿಗೆ ಬಿಡುವಿಲ್ಲ.. ವಿಜಯೇಂದ್ರ ವಿರುದ್ಧ ಗುಡುಗಿದ ಶಿಕ್ಷಣ ಸಚಿವರು

12:30 PM May 27, 2024 | Team Udayavani |

ಚಿತ್ರದುರ್ಗ: ನನ್ನ ಹೇರ್ ಕಟಿಂಗ್ ಮಾಡುವವರು ಬಿಡುವಾಗಿಲ್ಲ. ಅವರಿಗೆ ಬಿಡುವಿದ್ದರೆ ಬಂದು ಮಾಡಲು ಹೇಳಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಗುಡುಗಿದರು.

Advertisement

ಇತ್ತೀಚೆಗೆ ಚಿತ್ರದುರ್ಗದಲ್ಲಿ ಮಾತನಾಡಿದ್ದ ಬಿ.ವೈ.ವಿಜಯೇಂದ್ರ, ಶಿಕ್ಷಣ ಸಚಿವರಿಗೆ‌ ನೀಟಾಗಿ ಕಟಿಂಗ್ ಮಾಡಿಸಿಕೊಂಡು, ಎಣ್ಣೆ ಹಚ್ಚಿ ತಲೆ ಬಾಚಿಕೊಂಡು ಬನ್ನಿ ಎಂದು ಹೇಳುವ ಸ್ಥಿತಿ ನಿರ್ಮಾಣವಾಗಿದೆ ಎಂದಿದ್ದರು.

ಇಂದು ಚಿತ್ರದುರ್ಗದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಧು ಬಂಗಾರಪ್ಪ, ಸುದ್ದಿಗಾರರು ಈ ಪ್ರಶ್ನೆ ಕೇಳುತ್ತಿದ್ದಂತೆ ವಿಜಯೇಂದ್ರ ವಿರುದ್ಧ ಗರಂ ಆದರು. ಮಧು ಬಂಗಾರಪ್ಪ ಇನ್ನೂ ಚಿತ್ರರಂಗದಲ್ಲಿರುವ ಭ್ರಮೆಯಲ್ಲಿದ್ದಾರೆ ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿ, ವಿಜಯೇಂದ್ರ ಕೂಡಾ ಭ್ರಮೆ‌ ಕಳೆದುಕೊಳ್ಳಬೇಕು. ಚಿತ್ರರಂಗದ ಬಗ್ಗೆ ಮಾತನಾಡುವ ಅಗತ್ಯ ಇಲ್ಲ. ಅವರಪ್ಪ ಮುಖ್ಯಮಂತ್ರಿ ಎಂಬ ಭ್ರಮೆಯಲ್ಲಿದ್ದಾರಾ. ರಾಷ್ಟ್ರೀಯ ಪಕ್ಷದ ಅಧ್ಯಕ್ಷರು ಎನ್ನುವ ಜವಾಬ್ದಾರಿ ಇರಲಿ ಎಂದರು.
ಇಷ್ಟು ದಿನ ಶಿಕ್ಷಣ ಕ್ಷೇತ್ರ ಹೊಲಸು ಮಾಡಿದ್ದು ಬಿಜೆಪಿಯವರು. ಶಿಕ್ಷಣದ ಪವಿತ್ರತೆ ಕಾಪಾಡುವ ಕೆಲಸ ನಾವು ಮಾಡಿದ್ದೇವೆ ಎಂದು ಸಿ.ಟಿ.ರವಿ ಹೇಳಿಕೆಗೆ ತಿರುಗೇಟು.

ಚನ್ನಗಿರಿ ಗಲಭೆ ಪ್ರಕರಣದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವ ಪ್ರಶ್ನೆ ಇಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತೆ. ಬಿಜೆಪಿ ವಿರೋಧಕ್ಕಾಗಿ ವಿರೋಧ ಮಾಡುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ನಮ್ಮ ಇಲಾಖೆಯಲ್ಲೂ ಕೊರತೆಗಳಿವೆ. ಹಂತಹಂತವಾಗಿ ಸರಿಪಡಿಸುತ್ತೇವೆ.

Advertisement

ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ ಆಗಿಲ್ಲ. ಫಲಿತಾಂಶದ ಗುಣಮಟ್ಟ ಹೆಚ್ಚು‌ಕಡಿಮೆ ಆಗಿದೆ‌ . 9 ವರ್ಷದಿಂದ ಶಿಕ್ಷಕರ ನೇಮಕ ಆಗಿಲ್ಲ. ಆದಷ್ಟು ಬೇಗ ಎಷ್ಟು ಸಾಧ್ಯವೋ ಅಷ್ಟು ನೇಮಕ ಮಾಡಿಕೊಳ್ಳುತ್ತೇವೆ ಮುಖ್ಯಮಂತ್ರಿ ಒಪ್ಪಿದ್ದಾರೆ ಎಂದರು‌.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ಪೀರ್ ಇತರರಿದ್ದರು.

ಇದನ್ನೂ ಓದಿ: Panaji: ಕುಡಿದ ಅಮಲು: ಗುಡಿಸಲಿನಲ್ಲಿ ಮಲಗಿದ್ದವರ ಮೇಲೆ ಹರಿದ ಬಸ್… 4 ಮೃತ್ಯು, 5 ಗಂಭೀರ

Advertisement

Udayavani is now on Telegram. Click here to join our channel and stay updated with the latest news.

Next