Advertisement

Koppal; ಹೀಗೆ ಮಾತನಾಡಿದರೆ 67ರಿಂದ 37ಕ್ಕೆ ಇಳಿಯುತ್ತದೆ: BJPವಿರುದ್ಧ ಮಧು ಬಂಗಾರಪ್ಪ ಟೀಕೆ

06:27 PM Oct 21, 2023 | Team Udayavani |

ಕೊಪ್ಪಳ: ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ 67ಕ್ಕೆ ಇಳಿದಿದೆ. ಯಾಕೆ ಅಷ್ಟು ಸ್ಥಾನಕ್ಕಿಳಿಯುತು? ಹೀಗೆ ಮಾತನಾಡಿದರೆ ಮುಂದೆ 37ಕ್ಕೆ ಇಳಿಯುತ್ತೆ ಎನ್ನುವ ಮೂಲಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಎಂಪಿ ಚುನಾವಣೆ ಬಳಿಕ ಸರ್ಕಾರ ಪತನವಾಗುತ್ತೆ ಎನ್ನುವ ಬಿಜೆಪಿಗರ ಹೇಳಿಕೆಗೆ ಟಾಂಗ್ ನೀಡಿದರು.

Advertisement

ಕುಕನೂರು ತಾಲೂಕಿನ ಮಸಬಂಚಿನಾಳ ಗ್ರಾಮದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಅವರು ಹೀಗೆ ಮಾತನಾಡಿಯೇ 67 ಸ್ಥಾನಕ್ಕೆ ಇಳಿದಿದ್ದಾರೆ. ಇದಕ್ಕೆ ಮೊದಲು ಉತ್ತರ ಕೊಡಲಿ. ಬಿಜೆಪಿಗರು ಸೋಲಿನ ಹತಾಶೆಯಿಂದ ಹೀಗೆ ಬಸ್ ನಿಲ್ದಾಣದಲ್ಲಿ ನಿಂತು ನಮ್ಮ ಬಗ್ಗೆ ಜ್ಯೋತಿಷ್ಯ ಹೇಳುವ ಕೆಲಸಕ್ಕೆ ನಿಂತಿದ್ದಾರೆ. ನಮ್ಮ ಸರ್ಕಾರ ಐದು ವರ್ಷ ಆಡಳಿತ ಪೂರೈಸುತ್ತದೆ. ಯಾವುದೇ ಸಂದೇಹವಿಲ್ಲ ಎಂದರು.

ಜಾರಕಿಹೊಳಿ ಅವರ ಅಸಮಧಾನದ ವಿಚಾರ ನನಗೆ ಗೊತ್ತಿಲ್ಲ. ಅವರ ಹೇಳಿಕೆಯನ್ನು ವಿಶ್ಲೇಷಣೆ ಮಾಡಲ್ಲ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ನಾಲ್ಕುವರೆ ವರ್ಷ ಆಡಳಿತ ಪೂರೈಸುತ್ತೇವೆ. ಸಿಎಂ ಬದಲಾವಣೆಯ ವಿಚಾರ ಹೈಕಮಾಂಡ್ ಮಟ್ಟದಲ್ಲಿ ನಡೆಯುತ್ತೆ. ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತದೆಯೋ ಆ ಆದೇಶ ನಾವು ಪಾಲಿಸಬೇಕು ಎಂದರು.

ಶಿಕ್ಷಕರ ನೇಮಕಾತಿ ಗೊಂದಲ ಪರಿಹಾರ ಶೀಘ್ರ: ಶಿಕ್ಷಕರ ನೇಮಕಾತಿಯಲ್ಲಿನ ಗೊಂದಲಗಳನ್ನು ಶೀಘ್ರ ಪರಿಹಾರ ಮಾಡಲಾಗುವುದು. ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೂ ಕಾನೂನು ಸಲಹೆ ಪಡೆದು ಆದೇಶ ಪ್ರತಿ ನೀಡಲು ಪ್ರಯತ್ನಿಸುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಕುಕನೂರು ತಾಲೂಕಿನ ಮಸಬ ಹಂಚಿನಾಳ ಗ್ರಾಮದಲ್ಲಿ ಶನಿವಾರ ಪಿಯು ಕಾಲೇಜು ಉದ್ಘಾಟನೆ ಮಾಡಿ ಮಾತನಾಡಿದರು.

Advertisement

ರಾಜ್ಯದಲ್ಲಿ ಶಿಕ್ಷಕರ ನೇಮಕಾತಿ ಪ್ರಕರಣ ನ್ಯಾಯಾಲಯದಲ್ಲಿದೆ. ಈಚೆಗೆ ಆದೇಶ ಬಂದ ನಂತರ ಕಕ ಜಿಲ್ಲೆಗಳನ್ನು ಹೊರತುಪಡಿಸಿ ಬಾಕಿ ಜಿಲ್ಲೆಗಳ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲಾಗುತ್ತಿದೆ. ನಮಗೆ ನ್ಯಾಯಾಂಗ ಪ್ರಶ್ನಿಸುವ ಅಧಿಕಾರವಿಲ್ಲ. ಸರ್ಕಾರ ನಿಮ್ಮ ಪರವಾಗಿದೆ. ಕಾನೂನು ತೊಡಕು ಸರಿಪಡಿಸಿಕೊಂಡು ಆದೇಶ ಕೊಡಲಾಗುವುದು. ಅಡ್ವಕೇಟ್ ಜನರಲ್ ಹೊರ ದೇಶದಲ್ಲಿದ್ದಾರೆ. ಅವರು ಹಾಗೂ ಶಿಕ್ಷಕರ ಪರವಾಗಿ ವಾದ ಮಂಡಿಸಿದ ವಕೀಲರ ಅಭಿಪ್ರಾಯ ಪಡೆಯಲಾಗುವುದು. ಕಕ ಭಾಗದ 4 ಸಾವಿರ ಅಭ್ಯರ್ಥಿಗಳಿಗೆ ಖಂಡಿತವಾಗಿ ನೇಮಕಾತಿ ಮಾಡಿಕೊಳ್ಳುತ್ತೇವೆ. ಅ.25 ರಂದು ಅಧಿಕಾರಿಗಳ ಸಭೆ ಕರೆದಿರುವೆ. ಈ ಬಗ್ಗೆ ಸಂಪೂರ್ಣ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ರಾಜ್ಯದಲ್ಲಿ 40 ಸಾವಿರ ಶಿಕ್ಷರ ಕೊರತೆ ಇದೆ. ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. ಸಿಎಂ ಬಳಿ ಚರ್ಚಿಸಿ ಮುಂದಿನ ವರ್ಷ 20 ಸಾವಿರ ಶಿಕ್ಷಕರ ನೇಮಕಕ್ಕೆ ಕ್ರಮವಹಿಸಲಾಗುವುದು. ದೈಹಿಕ ಶಿಕ್ಷಕರ ನೇಮಕಕ್ಕೂ ಆದ್ಯತೆ ನೀಡುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next