Advertisement
ಪಿಯುಸಿಯಲ್ಲಿ ಕನಿಷ್ಠ ಅಂಕ ಪಡೆದ, ಬಡ ವಿದ್ಯಾರ್ಥಿಗಳಿಗೆ ಅವಕಾಶ ನೀಡುವುದರೊಂದಿಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ವೈಯಕ್ತಿಕ ನಿಗಾ ಇರಿಸಿ, ಸಾಮಾಜಿಕ ಜವಾಬ್ದಾರಿಯಿಂದ ಸ್ವಾವಲಂಬಿ ವ್ಯಕ್ತಿಯನ್ನಾಗಿ ರೂಪಿಸುವುದು ಸಂಸ್ಥೆಯ ಗುರಿ. ಬಿಎ ಪದವಿ (ಪತ್ರಿಕೋದ್ಯಮ, ಅರ್ಥಶಾಸ್ತ್ರ, ಸಮಾಜಶಾಸ್ತ್ರ), ಬಿಕಾಂ (ಸಾಮಾನ್ಯ), ಬಿಬಿಎ, ಬಿಸಿಎ ಪದವಿ ಕೋರ್ಸುಗಳು ಇಲ್ಲಿ ಲಭ್ಯವಿವೆ.
ಯುಜಿಸಿ ಆ್ಯಕ್ಟ್ 1956 ಅನ್ವಯದ ಸೆಕ್ಷನ್ 2(ಎಫ್) ಮತ್ತು 12 (ಬಿ)ಯ ಮಾನ್ಯತೆ, ರಾಷ್ಟ್ರೀಯ ಆಂತರಿಕ ಮೌಲ್ಯಮಾಪನ ಸಮಿತಿ (ನ್ಯಾಕ್) ಯಿಂದ “ಉತ್ತಮ ಕಾಲೇಜು’ ಎಂಬ ಮಾನ್ಯತೆ ಪಡೆದಿದ್ದಲ್ಲದೆ, ಶಾಶ್ವತ ಸಂಯೋಜನೆ ಹೊಂದಿದೆ. ಶಿಕ್ಷಣ ಗುಣಮಟ್ಟ ಅಭಿವೃದ್ಧಿ, ತಜ್ಞ ಬೋಧಕ ವರ್ಗ, ಪ್ರಾರ್ಥನೆ, ವಸ್ತ್ರ ಸಂಹಿತೆ, ಆಂತರಿಕ ಮೌಲ್ಯಮಾಪನ, ರಕ್ಷಕ ಶಿಕ್ಷಕ ವಿದ್ಯಾರ್ಥಿಗಳ ಸಮಾವೇಶ, ಪಠ್ಯೇತರ ಚಟುವಟಿಕೆಗಳು, ತಂತ್ರಜ್ಞಾನದ ನೆರವು, ಆಧುನಿಕ ಸೌಲಭ್ಯವುಳ್ಳ ಧ್ವನಿ ದೃಶ್ಯ ಸಂವಹನ ಉಪಕರಣಗಳು, ಗಣಕ ವಿಜ್ಞಾನ ಪ್ರಯೋಗಾಲಯಗಳು, ಗ್ರಂಥಾಲಯ ಹೊಂದಿದೆ. ಇಲ್ಲಿ ಪ್ರತಿ ವರ್ಷ ಹಲವಾರು ವಿದ್ಯಾರ್ಥಿಗಳು ಕಾಂಪಸ್ ಮೂಲಕ ಪ್ರಸಿದ್ಧ ಕಂಪೆನಿಗಳಲ್ಲಿ ಉದ್ಯೋಗಾವಕಾಶ ಪಡೆಯುತ್ತಿದ್ದಾರೆ. ಆರೋಗ್ಯ ಶುಚಿತ್ವದ ಅರಿವು, ರಕ್ತದಾನ, ಏಡ್ಸ್ ಜನಜಾಗೃತಿ, ಪರಿಸರ ಜಾಗೃತಿ, ಮಹಿಳಾ ಸಬಲೀಕರಣ, ಮದ್ಯಪಾನ ವಿರೋಧಿ ಆಂದೋಲನ, ಕಾನೂನು ಅರಿವು, ಎನ್‌ಎಸ್‌ಎಸ್, ಆಟೋಟ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ.
Related Articles
Advertisement
ಶಿಕ್ಷಣ ಪ್ರಗತಿಗೆ ಸೂಕ್ತ ಸಲಹೆ, ಪೂರಕ ಮಾರ್ಗದರ್ಶನದೊಂದಿಗೆ ವಿದ್ಯಾರ್ಥಿಗಳು/ಅಧ್ಯಾಪಕರನ್ನು ಪ್ರೇರೇಪಿಸುತ್ತ, ಶಿಸ್ತು ಪರಿಪಾಲನೆಗೆ ವೈಯಕ್ತಿಕ ನಿಗಾವನ್ನು ಇರಿಸುತ್ತಿದ್ದಾರೆ ಪ್ರಸ್ತುತ ಆಡಳಿತಾಧಿಕಾರಿ ಪ್ರೊಣ ಪಿ. ದಯಾನಂದ ಶೆಟ್ಟಿ, ಪ್ರಾಂಶುಪಾಲೆ ಪ್ರೊ. ಟಿ. ರಾಧಿಕಾ ಪೈ ಅವರು. ಈಗಾಗಲೇ ಪ್ರವೇಶಾತಿ ಆರಂಭಗೊಂಡಿದ್ದು, ಹೆಚ್ಚಿನ ಮಾಹಿತಿಗೆ ಕಾಲೇಜನ್ನು ಸಂಪರ್ಕಿಸಬಹುದೆಂದು ಪ್ರಕಟನೆ ತಿಳಿಸಿದೆ.