Advertisement
ಕುಮಾರಧಾರಾ ಸ್ನಾನಘಟ್ಟದಿಂದ ರಾಜರಸ್ತೆ, ರಥಬೀದಿಯ ಮೂಲಕ ದೇವಸ್ಥಾನದ ತನಕ ಸುಮಾರು 2 ಕಿ.ಮೀ. ದೂರ ಕಠಿಣವಾದ ಉರುಳು ಸೇವೆ ಷಷ್ಠಿಯ ಮಹಾರಥೋತ್ಸವದ ತನಕ ನಡೆಯುತ್ತದೆ. ಜಾತ್ರೆಯ ಪ್ರಧಾನ ದಿನವಾದ ಚೌತಿ, ಪಂಚಮಿಯಂದು ಅಧಿಕ ಸಂಖ್ಯೆಯಲ್ಲಿ ಈ ಸೇವೆ ನೆರವೇರುತ್ತದೆ.
ಈ ಬಾರಿ ಕಾಂಕ್ರೀಟ್ ರಸ್ತೆಯಲ್ಲಿ ಉರುಳು ಸೇವೆ ಮಾಡಬೇಕಾದ ಕಾರಣ ಭಕ್ತರು ಸಂಜೆ 5ರಿಂದ ಬೆಳಗ್ಗೆ 6 ಗಂಟೆಯ ಒಳಗೆ ಸೇವೆಯನ್ನು ಆರಂಭಿಸಿ ಸಹಕರಿಸಬೇಕು ಎಂದು ದೇಗುಲದ ಆಡಳಿತಾಧಿಕಾರಿಗಳು ವಿನಂತಿಸಿದ್ದಾರೆ. ಪ್ರತ್ಯೇಕ ಪಥ
ಈ ಸೇವೆಗೆ ಯಾವುದೇ ರಶೀದಿ ಇಲ್ಲದಿದ್ದರೂ ಭಕ್ತರಿಗೆ ದೇವಸ್ಥಾನದ ವತಿಯಿಂದ ಸಕಲ ಅನುಕೂಲತೆಗಳನ್ನು ಕಲ್ಪಿಸಲಾಗಿದೆ. ಕುಮಾರಧಾರೆಯಿಂದ ಚತುಷ್ಪಥ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದ್ದು, ಒಂದು ಭಾಗವನ್ನು ಉರುಳು ಸೇವೆಗಾಗಿಯೇ ಮೀಸಲಿಡಲಾಗಿದೆ. ಇಲ್ಲಿ ವಾಹನ ಸಂಚಾರಕ್ಕೆ ಅವಕಾವಿಲ್ಲ. ಪ್ರತಿನಿತ್ಯ ರಸ್ತೆಯನ್ನು ಗುಡಿಸಿ ಸ್ವತ್ಛ ಮಾಡಲಾಗುತ್ತಿದೆ.