Advertisement
ಕೆಪಿಟಿಸಿಎಲ್ ಸುಪರಿಟೆಂಡೆಂಟ್ ಎಂಜಿನಿ ಯರ್ ರವಿಕಾಂತ್ ಕಾಮತ್ ಕಾಮಗಾರಿ ಕುರಿತಂತೆ ಮಾಹಿತಿ ನೀಡಿ ಆಗಸ್ಟ್‌ನಲ್ಲಿ ಸಬ್‌ಸ್ಟೇಶನ್ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು. ನೆಟ್ಲಮುಟ್ನೂರಿನಿಂದ ಕಬಕ ಮೂಲಕ ಮಾಡಾವಿಗೆ 110 ಕೆ.ವಿ. ವಿದ್ಯುತ್ ಸರಬರಾಜು ಮಾಡುವ ಯೋಜನೆ ಇದಾಗಿದೆ. ಬೊಳಿಕಲದಲ್ಲಿ ಸುಮಾರು 4 ಎಕ್ರೆ ಪ್ರದೇಶದಲ್ಲಿ ಸಬ್‌ಸ್ಟೇಷನ್ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದೆ.
ನೆಟ್ಲಮುಟ್ನೂರಿನಿಂದ ಮಾಡಾವಿಗೆ 110 ಕೆ.ವಿ. ವಿದ್ಯುತ್ ಲೈನ್ ಎಳೆಯುವ ಮೂಲಕ ಮಾಡಾವಿನಲ್ಲಿ ಸಬ್ ಸ್ಟೇಷನ್ ಆರಂಭವಾಗುತ್ತದೆ. ಮಾಡಾವಿ ನಿಂದ ಸುಳ್ಯಕ್ಕೆ- ಕಡಬ, ಆಲಂಕಾ ರಿಗೆ ವಿದ್ಯುತ್ ಸರಬರಾಜು ಮಾಡುವ ಬೃಹತ್ ಯೋಜನೆ ಇದಾಗಿದೆ. ಕಬಕದಿಂದ ಮಾಡಾವು ತನಕ ಒಟ್ಟು 27 ಕಿ.ಮೀ. ದೂರದಲ್ಲಿ ಲೈನ್ ಎಳೆಯುವ ಕಾಮಗಾರಿ ನಡೆಯುತ್ತಿದೆ. ಒಟ್ಟು 107 ವಿದ್ಯುತ್ ಲೈನ್ ಟವರ್‌ಗಳ ನಿರ್ಮಾಣ ಪ್ರಗತಿಯಲ್ಲಿದೆ. ದಿನಪೂರ್ತಿ ವಿದ್ಯುತ್
ಮಾಡಾವಿನಲ್ಲಿ ಸಬ್ ಸ್ಟೇಷನ್ ಆರಂಭ ವಾದಲ್ಲಿ ಸುಳ್ಯ, ಆಲಂಕಾರು, ಕುಂಬ್ರ ಮತ್ತು ಕಡಬ ಭಾಗದಲ್ಲಿ ವಿದ್ಯುತ್ ವಿತರಣೆಗೆ ಮುಕ್ತ ಅವಕಾಶ ದೊರೆಯುತ್ತದೆ. ಬಳಿಕ ದಿನದ 24 ಗಂಟೆಯೂ ವಿದ್ಯುತ್ ಪೂರೈಸಲು ಇದು ಸಹಕಾರಿಯಾಗಲಿದೆ. 110 ಕೆ.ವಿ. ಲೈನ್ ಆಗಿರುವ ಕಾರಣ ಬೃಹತ್ ಆಕಾರದ ಟವರ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಒಂದೊಂದು ಟವರ್‌ಗೆ 7ರಿಂದ 10 ಸೆಂಟ್ಸ್ ಭೂಮಿ ಬಳಕೆಯಾಗುತ್ತದೆ. 27 ಕಿ.ಮೀ.ನಲ್ಲಿ ಒಟ್ಟು 107 ಟವರ್‌ಗಳ ನಿರ್ಮಾಣ ಕಾಮಗಾರಿ ಬಹುತೇಕ ಮಗಿದಿದೆ ಎಂದು ಕೆಪಿಟಿಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದರು.
Related Articles
Advertisement
ಕಾಮಗಾರಿ ಕುರಿತಂತೆ ಕೆಪಿಟಿಸಿಎಲ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಗಂಗಾಧರ, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಸತೀಶ್, ಅಸಿಸ್ಟೆಂಟ್ ಎಂಜಿನಿಯರ್ ಬಸವರಾಜು, ಪ್ರಾಜೆಕ್ಟ್ ಎಂಜಿನಿಯರ್ ವಿಜೇಂದ್ರ ಅವರು ಶಾಸಕರಿಗೆ ಮಾಹಿತಿ ನೀಡಿದರು.
ಜಿಲ್ಲಾ ಬಿಜೆಪಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಸುಳ್ಯ ಕಿಸಾನ್ ಸಂಘದ ಪ್ರಮುಖರಾದ ಪಿಜಿಎಸ್‌ಎನ್ ಪ್ರಸಾದ್, ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಇಂದಿರಾ ಬಿ.ಕೆ., ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಅಧ್ಯಕ್ಷ ಗಣೇಶ್ ನಿಡ್ವಣ್ಣಾಯ, ಉಪಾಧ್ಯಕ್ಷ ತಾರಾನಾಥ ಕಾಯರ್ಗ, ಬಾಳಿಲ ಗ್ರಾ.ಪಂ. ಸದಸ್ಯ ರಾಧಾಕೃಷ್ಣ ರಾವ್ ಮತ್ತಿತರರು ಉಪಸ್ಥಿತರಿದ್ದರು.