ನವದೆಹಲಿ: ಭಾರತ ಸರ್ಕಾರ ಹಾಗೂ ದೇಶಿಯ ಸ್ಟೀಲ್ ಇಂಡಸ್ಟ್ರಿ ಜಂಟಿಯಾಗಿ ಕಾರ್ಯನಿರ್ವಹಿಸುವ ಮೂಲಕ ಶೀಘ್ರದಲ್ಲೇ ಮೇಡ್ ಇನ್ ಇಂಡಿಯಾ ಸ್ಟೀಲ್ ಉತ್ಪನ್ನಗಳು ಜಾಗತಿಕ ಮಾರುಕಟ್ಟೆ ಪ್ರವೇಶಿಸಲಿದೆ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ.
ಇದನ್ನೂ ಓದಿ:Israel War: ಇಸ್ರೇಲ್ ವೈಮಾನಿಕ ದಾಳಿಗೆ ಹಮಾಸ್ ನೌಕಾ ಪಡೆ ಮುಖ್ಯಸ್ಥ ಅಬು ಮೃತ್ಯು
ಈ ಬೆಳವಣಿಗೆ ಮೂಲಕ ಭಾರತೀಯ ಸ್ಟೀಲ್ ಉತ್ಪಾದಕರು ಉತ್ತಮ ಗುಣಮಟ್ಟದ ಸ್ಟೀಲ್ ಉತ್ಪನ್ನಗಳನ್ನು ತಯಾರಿಸಲಿದ್ದಾರೆ ಎಂಬುದಾಗಿ ಸಿಂಧಿಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ “ಮೇಕ್ ಇನ್ ಇಂಡಿಯಾ”ದ ಆಶಯದಂತೆ ದೇಸೀ ಉತ್ಪನ್ನಗಳಿಗೆ ಹೆಚ್ಚಿನ ಒತ್ತು ನೀಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಮೊದಲ ಹಂತದಲ್ಲಿ ಆಲ್ ಇಂಟೆಗ್ರೇಟೆಡ್ ಸ್ಟೀಲ್ ಪ್ಲೇಯರ್ಸ್ (ಐಎಸ್ ಪಿಎಸ್) ತಮ್ಮ ಎಲ್ಲಾ ಸ್ಟೀಲ್ ಉತ್ಪನ್ನಗಳನ್ನು ಮೇಡ್ ಇನ್ ಇಂಡಿಯಾ ಬ್ರ್ಯಾಂಡ್ ಮತ್ತು ಲೇಬಲ್ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಿದ್ದಾರೆ ಎಂದು ಸಚಿವಾಲಯ ಪ್ರಕಟನೆಯಲ್ಲಿ ವಿವರಿಸಿದೆ.
ಸೆಕೆಂಡರಿ ಸ್ಟೀಲ್ ಇಂಡಸ್ಟ್ರೀಸ್ (ಎಸ್ ಎಸ್ ಐಎಸ್) ಎರಡನೇ ಹಂತದಲ್ಲಿ ಈ ಇನಿಷಿಯೇಟ್ ಗೆ ಕೈಜೋಡಿಸಲಿದೆ. ಮೇಡ್ ಇನ್ ಇಂಡಿಯಾ ಸ್ಟೀಲ್ ಉತ್ಪನ್ನಗಳು ಖರೀದಿದಾರರನ್ನು ಹೆಚ್ಚು ಆಕರ್ಷಿಸಲಿದೆ ಎಂದು ಸಿಂಧಿಯಾ ತಿಳಿಸಿದ್ದಾರೆ.