Advertisement

 ಕನ್ನಡದ ಮೊದಲ ವರ್ಚುವಲ್‌ ಸಿನಿಮಾ: ಮೇಡ್‌ ಇನ್‌ ಚೈನಾ ಟೀಸರ್‌ ರಿಲೀಸ್‌

06:56 AM Feb 20, 2022 | Team Udayavani |

ಇಕ್ಕಟ್‌ ಸಿನಿಮಾ ಮೂಲಕ ಮನರಂಜನೆಯ ನೀಡಿದ ನಾಗಭೂಷಣ್‌ ನಟನೆಯ ಮೇಡ್‌ ಇನ್‌ ಚೈನಾ ಸಿನಿಮಾದ ಟೀಸರ್‌ ರಿಲೀಸ್‌ ಆಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ.

Advertisement

ಲಾಕ್‌ ಡೌನ್‌ ಟೈಮ್‌ನಲ್ಲಿ ವಿದೇಶದಲ್ಲಿ ಲಾಕ್‌ ಆಗುವ ಪತಿ… ಸ್ವದೇಶಿ ನೆಲದಲ್ಲಿ ಪತ್ನಿ..ಈಗಂಡ ಹೆಂಡ್ತಿ ನಡುವಿನ ಪ್ರೀತಿ-ಗೀತಿ-ಇತ್ಯಾದಿನಡುವೆ ಒಂದಷ್ಟು ಜಗಳ … ಒಟ್ಟಾಗಿ ಆಗಿ ಮೇಡ್‌ ಇನ್‌ ಚೈನಾ ಫ್ಯಾಮಿಲಿ ಡ್ರಾಮಾ ಅನ್ನೋದು ಟೀಸರ್‌ನಲ್ಲಿ ಗೊತ್ತಾಗ್ತಿದೆ.

ಕಚಗುಳಿ ಇಡುವ ಕಾಮಿಡಿ ಡೈಲಾಗ್‌ ಜೊತೆಗೆ ಪ್ರಿಯಾಂಕಾ ತಿಮ್ಮೇಶ್‌ ಅದ್ಭುತ ನಟನೆ ಗಮನಸೆಳೆಯುತ್ತಿದೆ. ಅಂದಹಾಗೇ ಮೇಡ್‌ ಇನ್‌ ಚೈನಾ ಕನ್ನಡದ ಮೊದಲ ವರ್ಚುವಲ್‌ ಸಿನಿಮಾವಾಗಿದ್ದು, ಅಯೋಗ್ಯ, ರತ್ನಮಂಜರಿ ಸಿನಿಮಾಗಳಿಗೆ ಸಿನಿಮಾಟೋಗ್ರಾಫ‌ರ್‌ ಆಗಿದ್ದ ಪ್ರೀತಮ್‌ ತೆಗ್ಗಿನಮನೆ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳುವುದ ಜೊತೆಗೆ ಗ್ರಾಫಿಕ್‌, ಎಡಿಟಿಂಗ್‌ ಹಾಗೂ ಸಿನಿಮಾಟೋಗ್ರಾಫಿ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ.

ನಾಗಭೂಷಣ್‌ ಹೀರೋ ಆಗಿ ಬಣ್ಣ ಹಚ್ಚಿದ್ದು, ನಾಗಭೂಷಣ್‌ಗೆ ಜೋಡಿಯಾಗಿ ಪ್ರಿಯಾಂಕಾ ತಿಮ್ಮೇಶ್‌ ನಟಿಸಿದ್ದಾರೆ. ಉಳಿದಂತೆ ಗೌರವ್‌ ಶೆಟ್ಟಿ, ಅಶ್ವಿ‌ನಿ ರಾವ್‌ ಪಲ್ಲಕ್ಕಿ, ಅರುಣ ಬಾಲರಾಜ್, ರವಿ ಭಟ್‌ ಮುಂತಾದವರು ನಟಿಸಿದ್ದಾರೆ.

ನಿಶ್ಚಲ್‌ ವಿ ಹಾಗೂ ಪ್ರೀತಮ್‌ ತೆಗ್ಗಿನಮನೆ ಮೇಡ್‌ ಇನ್‌ ಚೈನಾ ಸಿನಿಮಾಗೆ ಕಥೆ ಬರೆದಿದ್ದು, ವೀವಾನ್‌ ರಾಧಾಕೃಷ್ಣ ಮ್ಯೂಸಿಕ್‌ ನೀಡಿದ್ದಾರೆ. ಎನ್‌ ಕೆ ಸ್ಟುಡಿಯೋಸ್‌ ಬ್ಯಾನರ್‌ನಡಿ ನಂದಕಿಶೋರ್‌ಸಿನಿಮಾಗೆ ಬಂಡವಾಳ ಹೂಡಿದ್ದು, ಕ್ರಿಸ್ಟಲ್‌ ಪಾರ್ಕ್‌ ಸಿನಿಮಾಸ್‌ ನಡಿ ಟಿಆರ್‌ ಚಂದ್ರಶೇಖರ್‌ ಸಿನಿಮಾವನ್ನು ಪ್ರಸ್ತುತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next