Advertisement

ಮಾನವರ ಉಗಮ ನಮ್ಮಲ್ಲೇ ಮೊದಲು? ಇತ್ತೀಚಿನ ಹಲವು ಅಧ್ಯಯನಗಳಲ್ಲಿ ಉಲ್ಲೇಖ

06:53 PM Aug 10, 2022 | Team Udayavani |

ವಡೋದರಾ: ದೇಶಕ್ಕೆ ಮೊದಲ ಬಾರಿಗೆ ಮಾನವರು ಯಾವ ಪ್ರವೇಶ ಮಾಡಿದರು ಎಂಬ ಬಗ್ಗೆ ಹಲವು ಸಂಶೋಧನಾತ್ಮಕ ವಾದಗಳು ಇವೆ. ಆದರೆ, ಇತ್ತೀಚೆಗೆ ನಡೆಸಲಾಗಿರುವ ಹೊಸ ಅಧ್ಯಯನಗಳು ಮತ್ತಷ್ಟು ಹೊಸ ಅಂಶಗಳನ್ನು ಹೊರ ಚೆಲ್ಲಿದೆ. ಜಗತ್ತಿನ ಇತರ ಭಾಗಗಳಿಗೆ ಹೋಲಿಕೆ ಮಾಡಿದರೆ, ದೇಶದಲ್ಲಿಯೇ ಮೊದಲು ಮಾನವರ ಉಗಮವಾಗಿತ್ತು ಎಂದು ಹೇಳಲಾಗುತ್ತಿದೆ.

Advertisement

ಆಧುನಿಕ ಮಾನವರು ಆಫ್ರಿಕಾದಿಂದ ದೇಶಕ್ಕೆ 1.25 ಲಕ್ಷ ವರ್ಷಗಳ ಹಿಂದೆ ಆಗಮಿಸಿದ್ದರು ಎಂಬ ಬಗ್ಗೆ ಇದುವರೆಗೆ ನಂಬಿಕೊಳ್ಳಲಾಗಿತ್ತು. ಆದರೆ, ಈ ಅಂಶವನ್ನು ಸುಳ್ಳು ಎಂದು ಸಾಬೀತು ಮಾಡುವ ಅಂಶಗಳು ಈಗ ದೃಢಪಟ್ಟಿದೆ. ಅವರು ದೇಶಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಕೆಲವೊಂದು ಕಲ್ಲಿನಿಂದ ಸಿದ್ಧಗೊಳಿಸಿದ್ದ ಪರಿಕರಗಳನ್ನೂ ತೆಗೆದುಕೊಂಡು ಬಂದಿದ್ದರೂ ಎಂದು ಹೇಳಲಾಗಿತ್ತು. 2018ರಲ್ಲಿ ಆಂಧ್ರಪ್ರದೇಶದಲ್ಲಿ ಇದೇ ಮಾದರಿಯ ಪರಿಕರಗಳು ಸಂಶೋಧನೆಯ ವೇಳೆ ಪತ್ತೆಯಾಗಿತ್ತು.

ಅಹ್ಮದಾಬಾದ್‌ನ ಫಿಸಿಕಲ್‌ ರಿಸರ್ಚ್‌ ಲ್ಯಾಬೋರೇಟರಿ (ಪಿಆರ್‌ಎಲ್‌)ಯ ಆಟೋಮಿಕ್‌ ಮೊಲೇಕ್ಯುಲರ್‌ ಆ್ಯಂಡ್‌ ಆಪ್ಟಿಕಲ್‌ ಫಿಸಿಕ್ಸ್‌ ವಿಭಾಗದಲ್ಲಿ ಸಂಶೋಧನೆಗೆ ಒಳಪಡಿಸಲಾಗಿತ್ತು. ಆಂಧ್ರಪ್ರದೇಶದಲ್ಲಿ ದೊರಕಿದ್ದ ಹಲವು ಪರಿಕರಗಳು 1.22 ಲಕ್ಷ ವರ್ಷಗಳ ಹಿಂದೆ ದೇಶದಲ್ಲಿಯೇ ಇದ್ದವು ಎಂಬ ಅಂಶ ಈಗ ಗೊತ್ತಾಗಿದೆ.

ಇನ್ನೊಂದೆಡೆ, ಬರೋಡಾದ ಎಂ.ಎಸ್‌.ವಿಶ್ವವಿದ್ಯಾನಿಲಯ ಆಂಧ್ರಪ್ರದೇಶದ ಓಂಗೋಲ್‌ನಲ್ಲಿ 2018ರಲ್ಲಿ ಸಂಶೋಧನೆ ವೇಳೆ ಸಿಕ್ಕಿದ್ದ ಹಿಂದಿನ ಮಾನವರು ಬಳಕೆ ಮಾಡಿಕೊಂಡಿದ್ದ ಪರಿಕರಗಳನ್ನು ಅಧ್ಯಯನ ನಡೆಸಿದೆ. ಈ ಮೂಲಕ ಅವುಗಳು 2.47 ಲಕ್ಷ ವರ್ಷಗಳ ಹಿಂದೆ ಬಳಕೆ ಮಾಡಿಕೊಂಡಿದ್ದ ವಸ್ತುಗಳು ಎಂದು ಅದರಲ್ಲಿ ಅಭಿಪ್ರಾಯಪಡಲಾಗಿದೆ. ದೇಶದಲ್ಲಿ ಪತ್ತೆಯಾಗಿರುವ ಪರಿಕರಗಳು ಶಿಲಾಯುಗದಲ್ಲಿಯೇ ಸಿದ್ಧಪಡಿಸಲಾದದ್ದು ಮತ್ತು ಇಲ್ಲಿಯೇ ಅಭಿವೃದಿಪಡಿಸಲಾಗಿದೆ ಎಂದು ನಿರ್ಧಾರಕ್ಕೆ ಬರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next