- ಈರುಳ್ಳಿ: ಒಂದು ಕಪ್
- ಶುಂಠಿ: ಸ್ವಲ್ಪ
- ಹಸಿಮೆಣಸು: ಸ್ವಲ್ಪ
- ಶೇಂಗಾ, ಗೋಡಂಬಿ: ಸ್ವಲ್ಪ
- ಬಿಳಿ ಎಳ್ಳು: ಅರ್ಧ ಚಮಚ
- ಕರಿಬೇವು ಸೊಪ್ಪು: ಸ್ವಲ್ಪ
- ರವೆ: ಅರ್ಧ ಕಪ್
- ಮೈದಾ ಹಿಟ್ಟು: ಅರ್ಧ ಕಪ್
- ಅಕ್ಕಿ ಹಿಟ್ಟು: ಕಾಲು ಕಪ್
- ಎಣ್ಣೆ: ಎರಡು ಚಮಚ
- ತುಪ್ಪ: ಒಂದು ಚಮಚ
- ಉಪ್ಪು: ರುಚಿಗೆ ತಕ್ಕಷ್ಟು
Advertisement
ಮಾಡುವ ವಿಧಾನಒಂದು ಬೌಲ್‌ಗೆ ಎಣ್ಣೆ, ಹೆಚ್ಚಿದ ಶುಂಠಿ, ಈರುಳ್ಳಿ, ಹಸಿಮೆಣಸು ಕರಿಬೇವಿನ ಸೊಪ್ಪು ಹಾಕಿ ನೀರು ಹಾಕದೆ ಚೆನ್ನಾಗಿ ಕಲಸಿಕೊಳ್ಳಬೇಕು. ಅನಂತರ ಅದಕ್ಕೆ ಬಿಳಿ ಎಳ್ಳು, ಶೆಂಗಾ, ಗೋಡಂಬಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಅನಂತರ ರವೆ, ಮೈದಾ, ಅಕ್ಕಿಹಿಟ್ಟು ಹಾಕಿ ಅದಕ್ಕೆ ಬಿಸಿಎಣ್ಣೆ, ತುಪ್ಪ ಹಾಕಿ ಚೆನ್ನಾಗಿ ಕಲಸಬೇಕು. ಬಳಿಕ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಮಾಡಬೇಕು. ಅನಂತರ ಎಣ್ಣೆ ಬಿಸಿ ಮಾಡಿ ಒಂದು ಪ್ಲಾಸ್ಟಿಕ್ ಕವರ್‌ಗೆ ಎಣ್ಣೆ ಸವರಿ ಹಿಟ್ಟನ್ನು ಅದರಲ್ಲಿ ತೆಳುವಾಗಿ ಲಟ್ಟಿಸಿ ಮೀಡಿಯಂ ಹದದಲ್ಲಿ ಎಣ್ಣೆಯಲ್ಲಿ ಚೆನ್ನಾಗಿ ಕರಿಯಬೇಕು. ಕೆಂಬಣ್ಣ ಬರುವವರೆಗೆ ಕರಿದರೆ ಮದ್ದೂರು ವಡೆ ಸವಿಯಲು ಸಿದ್ಧವಾಗುತ್ತದೆ.