Advertisement

ಅವಮಾನ ಮಾಡ್ಬೇಡಿ, ಬೇಕಾದ್ರೆ ಪಕ್ಷದಿಂದ ಕಿತ್ತಾಕಿ

12:21 PM Feb 26, 2017 | Team Udayavani |

ಮೈಸೂರು: “ನನ್ನನ್ನು ಪಕ್ಷದಿಂದ ತೆಗೆಯಬೇಕಾದರೆ ತೆಗೆದು ಬಿಡಿ, ಇದರ ಹೊರತಾಗಿ ದ್ವೇಷದ ಮನೋಭಾವದಿಂದ ನೋಟಿಸ್‌ ನೀಡುವ ಮೂಲಕ ಏಕೆ ಅವಮಾನ ಮಾಡುತ್ತೀರಾ? ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌ ವಿರುದ್ಧ ಮಾಜಿ ಸಂಸದ ಎಚ್‌.ವಿಶ್ವನಾಥ್‌ ತೀವ್ರ ವಾಗ್ಧಾಳಿ ನಡೆಸಿದರು.

Advertisement

ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಆಯೋಜಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಗೆ ನೋಟಿಸ್‌ ನೀಡಿರುವ ಕೆಪಿಸಿಸಿ ಅಧ್ಯಕ್ಷರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ನಿಮಗೇನಾದರೂ ಕಾಮನ್‌ ಸೆನ್ಸ್‌ ಇದೆಯಾ, ತಲೆ ಇದೆಯಾ?, ನೋಟಿಸ್‌ ನೀಡುವುದಾದರೆ ಕೊಡಿ, ಅದನ್ನು ಹೇಳಿಕೊಂಡು ತಿರುಗುತ್ತಾ ನನಗೇಕೆ ಅವಮಾನ ಮಾಡುತ್ತೀರಾ’ ಎಂದು ಕಿಡಿಕಾರಿದರು. 

ವಾಟ್ಸ್‌ಆಪ್‌ ಮೂಲಕ ನೋಟಿಸ್‌: ತಮಗೆ ಪಕ್ಷದಿಂದ ನೀಡಿರುವ ನೋಟಿಸ್‌ ವಾಟ್ಸ್‌ಆಪ್‌ ಮೂಲಕ ಬಂದಿದ್ದು, ಇದರಿಂದ ತಮಗೆ ಮುಜುಗರ ವಾಗಿದೆ. ಕಳೆದ ನಾಲ್ಕು ದಶಕಗಳಿಂದ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಪಕ್ಷಕ್ಕಾಗಿ ಶ್ರಮಿಸಿರುವ ತಮ್ಮಂತ ಹಿರಿಯನಿಗೆ ನೀವು ಕೊಡುವ ಗೌರವ ಇದೇನಾ ಎಂದು ಪ್ರಶ್ನಿಸಿದ ಅವರು, ತಮ್ಮನ್ನು ಪಕ್ಷದಿಂದ ತೆಗೆಯಬೇಕಾದಲ್ಲಿ ತೆಗೆದು ಬಿಡಿ. ಇದರ ಬದಲಿಗೆ ದ್ವೇಷದ ಮನೋಭಾವದಿಂದ ನೋಟಿಸ್‌ ನೀಡುವ ಮೂಲಕ ಹೀಗೆ ಅವಮಾನ ಮಾಡುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಧಿಕಾರ ಬೇಡ, ಗೌರವ ಕೊಡಿ: ನನಗೆ ಅಧಿಕಾರ ಕೊಡಿ ಎಂದು ಯಾರನ್ನೂ ಕೇಳುತ್ತಿಲ್ಲ. ಆದರೆ, ಪಕ್ಷದ ಹಿತದೃಷ್ಟಿಯ ಬಗ್ಗೆ ಚಿಂತಿಸುವ ತಮ್ಮಂತಹ ನಾಯಕರಿಗೆ ಗೌರವ ನೀಡಿ ಎಂದು ಕೇಳುತ್ತಿದ್ದೇವೆ. ಪಕ್ಷದ ಏಳಿಗೆ ಉದ್ದೇಶದಿಂದ ತಾವು ಅನೇಕ ಹೇಳಿಕೆಗಳನ್ನು ನೀಡಲಾಗಿದೆ ಹೊರತು, ಯಾವುದೇ ದ್ವೇಷದಿಂದಲ್ಲ. ಈವರೆಗಿನ ರಾಜಕೀಯ ಜೀವನದಲ್ಲಿ ತಾವು ಯಾವುದೇ ಸಂದರ್ಭದಲ್ಲೂ ಪಕ್ಷವನ್ನು ನಿಂದಿಸಿಲ್ಲ. ತಾವು ವ್ಯಕ್ತಪಡಿಸಿರುವ ಅಸಮಾಧಾನದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌ ಅಥವಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದುವರೆಗೂ ತಮ್ಮೊಂದಿಗೆ ಮಾತನಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪಕ್ಷ ವಿರೋಧಿ ಚಟುವಟಿಕೆ: ಕಳೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸೋಲಿಗೆ ಕಾರಣ ರಾದವರು ಇಂದಿಗೂ ಪಕ್ಷದಲ್ಲಿದ್ದು, ಇದು ಪಕ್ಷ ವಿರೋಧಿ ಚಟುವಟಿಕೆಯಲ್ಲವೇ ಎಂದು ಅವರು ಪ್ರಶ್ನಿಸಿದರು. ಇದಕ್ಕೂ ಮುನ್ನ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ ಮಾಜಿ ಸಂಸದ ವಿಶ್ವನಾಥ್‌, ಕೆಪಿಸಿಸಿ ವತಿಯಿಂದ ನೋಟಿಸ್‌ ನೀಡಿರುವುದರಿಂದ ತಮಗೆ ಆಗಿರುವ ನೋವಿನ ಬಗ್ಗೆ ಚರ್ಚಿಸಿದರು. ಈ ವೇಳೆ ಸಭೆಯಲ್ಲಿ ಪಾಲ್ಗೊಂಡಿದ್ದ ಕೆಲವು ಮುಖಂಡರು ಹಾಗೂ ಕಾರ್ಯಕರ್ತರು ಸಹ ಕೆಪಿಸಿಸಿ ಕ್ರಮವನ್ನು ತೀವ್ರವಾಗಿ ಖಂಡಿಸಿದರು.

Advertisement

ಪಕ್ಷಕ್ಕಾಗಿ ನಿಷ್ಠೆಯಿಂದ ಕೆಲಸ ಮಾಡಿದ ನನಗೆ ಇಂತಹ ಮೂದಲಿಕೆ ಬೇಕಾ? ನಾನು ಪಕ್ಷದಲ್ಲಿ ಉಳಿಯಬೇಕೇ ಅಥವಾ ಅವಮಾನವನ್ನು ಸಹಿಸಿಕೊಂಡು ಮುಂದುವರಿಯ ಬೇಕೆ? ಎಂಬ ಜಿಜಾnಸೆ ನನ್ನನ್ನು ಕಾಡುತ್ತಿದೆ. ತಮ್ಮ ಮುಂದಿನ ತೀರ್ಮಾನದ ಬಗ್ಗೆ ಕಾರ್ಯ ಕರ್ತರೊಂದಿಗೆ ಕೂಲಂಕಶವಾಗಿ ಚರ್ಚಿಸಿ ನಿರ್ಧರಿಸುತ್ತೇನೆ.
-ಎಚ್‌.ವಿಶ್ವನಾಥ್‌, ಮಾಜಿ ಸಂಸದ

Advertisement

Udayavani is now on Telegram. Click here to join our channel and stay updated with the latest news.

Next