Advertisement
ಮಾದಾರ ಚನ್ನಯ್ಯ ಗುರುಪೀಠದಲ್ಲಿ ಬುಧವಾರ ದಲಿತ ಮತ್ತು ಹಿಂದುಳಿದ ಮಠಾಧೀಶರ ಒಕ್ಕೂಟದ ಸಭೆ ನಡೆಯಿತು.
ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕಾನೂನು ಸಚಿವ ಮಾಧುಸ್ವಾಮಿ, ಆರೋಗ್ಯ ಸಚಿವ ಶ್ರೀ ರಾಮುಲು, ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಸಂಸದರಾದ ನಾರಾಯಣ ಸ್ವಾಮಿ, ಜಿ.ಎಂ. ಸಿದ್ದೇಶ್ವರ ಸೇರಿದಂತೆ ವಿವಿಧ ಶಾಸಕರು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಸಚಿವ ಮಾಧುಸ್ವಾಮಿ, ಮಠಗಳ ಜೋಪಾನ ಮಾಡಿದರೆ ಸಮುದಾಯಕ್ಕೆ ಅನುಕೂಲ. ನಾಡಿನ ಶೈಕ್ಷಣಿಕ ಪ್ರಗತಿಗೆ ಮಠಗಳ ಕೊಡುಗೆ ಅಪಾರ. ಭೂಮಿ ತಂಪಾದರೆ ಬೇರುಗಳೆಲ್ಲಾ ತಂಪಾಗುತ್ತವೆ. ಈ ದೃಷ್ಟಿಯಲ್ಲಿ ಮಠಗಳು ಭೂಮಿ ಇದ್ದಂತೆ ಎಂದರು.
Related Articles
Advertisement
ಅಧ್ಯಕ್ಷತೆ ವಹಿಸಿದ್ದ ಕಾಗಿನೆಲೆ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಡಬೇಕು, ಚಿತ್ರದುರ್ಗ ಜಿಲ್ಲೆಯ ಭದ್ರಾ ಕಾಮಗಾರಿ ತ್ವರಿತವಾಗಿ ಮುಗಿಸಿ ನೀರು ಕೊಡಬೇಕು ಎನ್ನುವುದು ಈ ಸಭೆಯ ಅಜೆಂಡಾ ಎಂದು ತಿಳಿಸಿದರು.
ದಲಿತ, ಹಿಂದುಳಿದ ಮಠಾಧೀಶರ ಒಕ್ಕೂಟದ ಅಧ್ಯಕ್ಷ ನಿರಂಜನಾನಂದಪುರಿ ಶ್ರೀ, ಮಾದಾರ ಚನ್ನಯ್ಯ, ವೇಮನ ಸ್ವಾಮೀಜಿ, ವಾಲ್ಮೀಕಿ ಪ್ರಸನ್ನಾನಂದಪುರಿ ಶ್ರೀ, ಕಬೀರಾನಂದ ಸ್ವಾಮೀಜಿ ಸೇರಿದಂತೆ 20 ಕ್ಕೂ ಹೆಚ್ಚು ಮಠಾಧೀಶರು ಭಾಗವಹಿಸಿದ್ದರು.