ಹನೂರು: ರಾಜ್ಯದ ವಿವಿಧ ಜಿಲ್ಲೆಗಳಿಂದ ಮಾದಪ್ಪನ ಬೆಟ್ಟಕ್ಕೆ ಆಗಮಿಸುವ ಭಕ್ತಾದಿಗಳು ಇಲ್ಲಿನ ರಸ್ತೆ ಅವ್ಯವಸ್ಥೆಯನ್ನು ಕಂಡು ಈ ಕ್ಷೇತ್ರದ ಶಾಸಕರು ಏನು ಮಾಡುತ್ತಿದ್ದಾರೆ ಎಂದು ನನ್ನನ್ನು ಬೈಯ್ಯುತ್ತಿದ್ದಾರೆ ಎಂದು ವಿಧಾನಸಭಾ ಅಧಿವೇಶನ ದಲ್ಲಿ ಶಾಸಕ ನರೇಂದ್ರ ಅಳಲು ತೋಡಿಕೊಂಡ ಪ್ರಸಂಗ ಜರುಗಿದೆ.
ಬೆಳಗಾವಿಯ ಸುವರ್ಣಸೌಧದಲ್ಲಿ ಸೋಮವಾರ ದಿಂದ ಆರಂಭಗೊಂಡಿರುವ ವಿಧಾನಸಭಾ ಅಧಿವೇಶನದಲ್ಲಿ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ರಸ್ತೆಯು ಹದಗೆಟ್ಟಿರುವ ಬಗ್ಗೆ ಚರ್ಚೆ ನಡೆಯಿತು. ಚರ್ಚೆಯಲ್ಲಿ ಶಾಸಕ ಆರ್.ನರೇಂದ್ರ ಮಾತ ನಾಡಿ, ಮಲೆ ಮಹದೇಶ್ವರ ಬೆಟ್ಟಕ್ಕೆ ದೈನಂದಿನ ದಿನಗಳಲ್ಲಿ 15-20 ಸಾವಿರ ಭಕ್ತಾದಿಗಳು, ವಾರಾಂತ್ಯ ದಲ್ಲಿ 1 ಲಕ್ಷ ಭಕ್ತಾದಿಗಳು ಮತ್ತು ಜಾತ್ರಾ ಸಂದರ್ಭದಲ್ಲಿ 3-4 ಲಕ್ಷ ಜನರು ಆಗಮಿಸುತ್ತಾರೆ.
ಇಲ್ಲಿನ ರಸ್ತೆ ಬಹಳ ಹದಗೆಟ್ಟಿದ್ದು, ಸಂಚಾರಕ್ಕೆ ತೊಡ ಕಾಗಿದೆ ಇದು ಸರ್ಕಾರದ ಗಮನಕ್ಕೆ ಬಂದಿದೆಯೇ, ಬಂದಿದ್ದಲ್ಲಿ ಸರ್ಕಾರ ಕೈಗೊಂಡ ಕ್ರಮಗಳೇನು ಎಂದು ಪ್ರಶ್ನಿಸಿದರು. ಶಾಸಕರ ಪ್ರಶ್ನೆಗೆ ಲಿಖೀತವಾಗಿ ಉತ್ತರಿಸಿರುವ ಲೋಕೋಪಯೋಗಿ ಸಚಿವ ಚಂದ್ರಕಾಂತ್ ಪಾಟೀಲ್, ಈ ರಸ್ತೆಯು ಅಲ್ಲಲ್ಲಿ ಹದಗೆಟ್ಟಿರುವುದು ಸರ್ಕಾರದ ಗಮನಕ್ಕೆ ಬಂದಿದೆ.
2021-22ನೇ ಸಾಲಿನಲ್ಲಿ ಹನೂರು ರಾಮಾಪುರ-ಮ.ಬೆಟ್ಟ ಮಾರ್ಗದ 61 ಕಿ.ಮೀ. ರಸ್ತೆ ದುರಸ್ತಿಗಾಗಿ 35 ಲಕ್ಷ ರೂ. ಅನುದಾನ ನೀಡಲಾಗಿದೆ. ಈ ಮಾರ್ಗದಲ್ಲಿ 9.50 ಕೋಟಿ ರೂ. ವೆಚ್ಚದಲ್ಲಿ ಅನುಮೋದನೆ ನೀಡಲಾಗಿದ್ದು, ಕಾಮಗಾರಿ ಕೈಗೆತ್ತಿಕೊಳ್ಳಲಾಗು ವುದು. ಜೊತೆಗೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜ ನೆಯ 4ನೇ ಹಂತದಲ್ಲಿ ರಸ್ತೆ ಅಭಿವೃದ್ಧಿಪಡಿಸಲು 10 ಕೋಟಿ ರೂ. ಅನುದಾನಕ್ಕಾಗಿ ಆರ್ಥಿಕ ಇಲಾಖೆಯ ಅನುಮತಿಗೆ ಪ್ರಸ್ತಾವನೆ ಸಲ್ಲಿಸಲಾ ಗಿದೆ. ಮತ್ತೂಂದು ಮಾರ್ಗವಾದ ಎಲ್ಲೇಮಾಳ- ಕೌದಳ್ಳಿ-ಮ.ಬೆಟ್ಟ ರಸ್ತೆಯ 6.5 ಕಿ.ಮೀ. ದುರಸ್ತಿ ಗಾಗಿ 5 ಲಕ್ಷ ರೂ. ಅನುದಾನ ನೀಡಲಾಗಿದ್ದು ಸಾರ್ವಜನಿಕ ಅನುಕೂಲಕ್ಕೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಅಲ್ಲದೆ ಈ ಮಾರ್ಗದ ರಸ್ತೆ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನಕ್ಕೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸ ಲಾಗಿದೆ. ಅನುಮತಿ ದೊರೆತ ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು. ಸಚಿವರ ಉತ್ತರದ ಮೇಲೆ ಚರ್ಚೆ ಆರಂಭವಾ ದಾಗ ಶಾಸಕ ನರೇಂದ್ರ ಮಾತನಾಡಿ, 61 ಕಿ.ಮೀ ರಸ್ತೆ ನಿರ್ವಹಣೆಗೆ 35 ಲಕ್ಷ ರೂ., 10 ಕಿ.ಮೀ ರಸ್ತೆ ನಿರ್ವಹಣೆಗೆ 5 ಲಕ್ಷ ಅನುದಾನ ಸಾಲುವುದಿಲ್ಲ.
ಅಧಿಕಾರಿಗಳು ವಸ್ತುಸ್ಥಿತಿ ನೋಡಿ ಉತ್ತರ ನೀಡಿ ದ್ದಾರೋ, ಸುಮ್ಮನೇ ನೀಡಿದ್ದಾರೋ, ಕೊಡಬೇಕು ಎಂದು ಕೊಟ್ಟಿದ್ದಾರೋ ಗೊತ್ತಿಲ್ಲ. 5 ಕೋಟಿ ವೆಚ್ಚದ ಕಾಮಗಾರಿಗೆ ಟೆಂಡರ್ ಮುಕ್ತಾಯಗೊಂಡು 1 ವರ್ಷ ಕಳೆದಿದ್ದರೂ ಕಾಮಗಾರಿ ಆರಂಭವಾಗಿಲ್ಲ. ರಸ್ತೆಯ ಅವ್ಯವಸ್ಥೆ ಕಂಡು ರಾಜ್ಯದ ಜನರಲ್ಲದೆ ಹೊರ ರಾಜ್ಯದ ಜನರೂ ಶಾಸಕರು ಏನು ಮಾಡುತ್ತಿದ್ದಾರೆ, ಗಮನಹರಿಸುತ್ತಿಲ್ಲವೇ ಎಂದು ನನ್ನನ್ನು ಬೈಯುತ್ತಿದ್ದಾರೆ ಎಂದು ಅಳಲನ್ನು ತೋಡಿಕೊಂಡರು. ಇದಕ್ಕೆ ಉತ್ತರಿಸಿದ ಸಚಿವ ಸಿ.ಸಿ.ಪಾಟೀಲ್, 35 ಲಕ್ಷ ಮತ್ತು 5 ಲಕ್ಷ ಅನುದಾನ ನೀಡಿರುವುದು ಗುಂಡಿಮುಚ್ಚಲು, ಇದನ್ನು ಹೊರತುಪಡಿಸಿ ರಸ್ತೆ ದುರಸ್ತಿಪಡಿಸಲು ಕ್ರಮವಹಿಸುವುದಾಗಿ ಭರವಸೆ ನೀಡಿದರು.