Advertisement

ಸಂಚಾರಕ್ಕೆ ದುಸ್ತರವಾದ ಮದನಾಡು- ಪರಪ್ಪಾಡಿ ಸಂಪರ್ಕ ರಸ್ತೆ

11:05 PM Jun 26, 2019 | sudhir |

ಪಳ್ಳಿ: ನಿಟ್ಟೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮದನಾಡು ರಸ್ತೆಯು ಸುಮಾರು 1 ಕಿ.ಮೀ. ಡಾಮರು ಕಾಣದ್ದರಿಂದ ಇಲ್ಲಿ ಮಳೆಗಾಲದಲ್ಲಿ ಸಂಚರಿಸುವುದು ಕಷ್ಟಕರವಾಗಿದೆ.

Advertisement

ಮದನಾಡು ರಸ್ತೆಯು 3 ಕಿ.ಮೀ. ಉದ್ದವಿದ್ದು ಈ ಮಾರ್ಗವಾಗಿ ಬೋಳ, ಕೆಮ್ಮಣ್ಣು, ಬೇಲಾಡಿ ಹಾಗೂ ಪರಪ್ಪಾಡಿ, ಬಾರಾಡಿ ಮಾರ್ಗ‌ವಾಗಿ ಬೆಳುವಾಯಿಗೆ ಅತಿ ಹತ್ತಿರದ ಸಂಪರ್ಕ ರಸ್ತೆಯಾಗಿದೆ. ಆದರೆ 1 ಕಿ.ಮೀ. ರಸ್ತೆ ಡಾಮರು ಕಾಣದ್ದರಿಂದ ಮತ್ತು ಚರಂಡಿ ಇಲ್ಲದೆ ರಸ್ತೆ ಕೆಸರುಮಯವಾಗಿದೆ.

ಬಾಕಿ ಉಳಿದ ಕಾಮಗಾರಿ

2004 ನೇ ಸಾಲಿನಲ್ಲಿ 2 ಕಿ.ಮೀ ರಸ್ತೆ ಡಾಮರೀಕರಣಗೊಂಡಿದ್ದು, ಉಳಿದ 1 ಕಿ.ಮೀ ರಸ್ತೆ ಕಚ್ಚಾ ರಸ್ತೆಯಾಗಿಯೇ ಉಳಿದಿದೆ. ಕಳೆದ ಬಾರಿ 2 ಕಿ.ಮೀ ರಸ್ತೆಗೆ ತೇಪೆ ಕಾರ್ಯ ನಡೆಸಲಾಗಿದೆ.

ಮಳೆಗಾಲದಲ್ಲಿ ಇಲ್ಲಿ ರಸ್ತೆಯಲ್ಲೇ ನೀರು ಹರಿಯುವುದರಿಂದ ರಸ್ತೆ ಹೊಂಡ-ಗುಂಡಿಯಿಂದ ತುಂಬಿದ್ದು, ವಾಹನ ಸವಾರರಿಗೆ ಸಂಕಷ್ಟ ತಂದಿದೆ. ಮದೆನಾಡು ವ್ಯಾಪ್ತಿಯಲ್ಲಿ ಸುಮಾರು 100ಕ್ಕೂ ಅಧಿಕ ಮನೆಗಳಿದ್ದು 5 ಸೆಂಟ್ಸ್‌ ಕಾಲನಿಯನ್ನು ಹೊಂದಿದೆ. ಈ ಮಾರ್ಗವನ್ನು ವಿದ್ಯಾರ್ಥಿಗಳು, ಕಾರ್ಮಿಕರು, ಪರಪ್ಪಾಡಿ, ಬಾರಾಡಿ ಆಸುಪಾಸಿನ ನಿವಾಸಿಗಳು ಅವಲಂಬಿಸಿದ್ದಾರೆ.

Advertisement

ಕಿರು ಸೇತುವೆ ಅಗತ್ಯ

ಈ ರಸ್ತೆಯಲ್ಲಿ ಅತೀ ಹಳೆಯದಾದ ಸ್ಥಳೀಯರೇ ಅಳವಡಿಸಿದ್ದ ಮೋರಿಯಿದೆ. ಇದೀಗ ಹಳತಾಗಿದೆ. ಧಾರಾಕಾರವಾಗಿ ಮಳೆ ಸುರಿದರೆ ಮೋರಿ ಮುಳುಗಡೆ ಹೊಂದಿ ಸಂಚಾರ ಸ್ಥಗಿತಗೊಳ್ಳುತ್ತದೆ. ಮೋರಿಯ ಎರಡು ಇಕ್ಕೆಲಗಳಲ್ಲಿ ತಡೆಗೋಡೆ ಇಲ್ಲದೆ ಇರುವುದರಿಂದ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next