ಮುಂಬೈ: ವಿಶ್ವಕಪ್ ವಿಜೇತ ತಂಡದ ಸದಸ್ಯ, ಮಾಜಿ ವೇಗದ ಬೌಲರ್ ಮದನ್ ಲಾಲ್ ಅವರು ‘ಸ್ವಹಿತಾಸಕ್ತಿ ಸಂಘರ್ಷ’ ನಿಯಮವನ್ನು ಕಿತ್ತೊಗೆಯಬೇಕು ಎಂದಿದ್ದಾರೆ.
ಸ್ವಹಿತಾಸಕ್ತಿ ಸಂಘರ್ಷದ ಕುರಿತಾಗಿ ಮಾಜಿ ಕೋಚ್ ರವಿ ಶಾಸ್ತ್ರಿ ಹೇಳಿಕೆಯನ್ನು ಬೆಂಬಲಿಸಿದ ಮದನ್ ಲಾಲ್, ಮೊದಲು ಬಿಸಿಸಿಐ ಈ ನಿಯಮವನ್ನು ಕಸದಬುಟ್ಟಿಗೆ ಎಸೆಯಬೇಕು ಎಂದಿದ್ದಾರೆ.
“ಲೋಧಾ ಸಮಿತಿ ಶಿಫಾರಸು ಮಾಡಿದ ಎರಡು ನಿಯಮಗಳಲ್ಲಿ ಒಂದಾದ ಸ್ವಹಿತಾಸಕ್ತಿ ಸಂಘರ್ಷ ನಿಯಮವನ್ನು ಕಿತ್ತೆಸೆಯಬೇಕು. ಯಾಕೆಂದರೆ ಇದು ಕ್ರಿಕೆಟ್ ನಲ್ಲಿ ಸಾಧಾರಣತೆ ತರುತ್ತದೆ. ಕಚೇರಿಯಲ್ಲಿ ಇರುವವರು ಸುಲಭದಲ್ಲಿ ಸಿಗುತ್ತಾರೆ. ಇದರ ಬದಲಿಗೆ ಮಾಜಿ ಆಟಗಾರರು ಬಿಸಿಸಿಐ ಕಚೇರಿಯಲ್ಲಿ ಹುದ್ದೆ ಹೊಂದಿರಬೇಕು. ಇದರಿಂದ ಆಟ ಮತ್ತು ಬಿಸಿಸಿಐ ನ ಘನತೆಯನ್ನು ಕಾಪಾಡಿಕೊಳ್ಳಬಹುದು” ಎಂದು ಮದನ್ ಲಾಲ್ ಹೇಳಿದ್ದಾರೆ.
ಇದನ್ನೂ ಓದಿ:“ಬಡವ ರಾಸ್ಕಲ್” ಚಿತ್ರವಿಮರ್ಶೆ: ಬಡವನ ಜೊತೆಗೊಂದು ಸುಖಕರ ಪ್ರಯಾಣ
ಭಾರತ ತಂಡದ ರವಿವಾರದಿಂದ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಆಡಲಿದೆ, ಮೊದಲ ಪಂದ್ಯ ರವಿವಾರ ಸೆಂಚೂರಿಯನ್ ನ ಸೂಪರ್ ಸ್ಪೋರ್ಟ್ ಪಾರ್ಕ್ ನಲ್ಲಿ ನಡೆಯಲಿದೆ.