ಶ್ರೀಮುರಳಿ ಅಭಿನಯದ “ಮದಗಜ’ ಚಿತ್ರದ ಎರಡನೇ ಹಂತದ ಚಿತ್ರೀಕರಣ ಭರದಿಂದ ಸಾಗಿದೆ. ಸೆಪ್ಟೆಂಬರ್ ಕೊನೆ ವಾರದಿಂದ ಮೈಸೂರು ಸುತ್ತಮುತ್ತ ಚಿತ್ರೀಕರಣದಲ್ಲಿ ನಿರತವಾಗಿರುವ “ಮದಗಜ’ ಚಿತ್ರತಂಡಕ್ಕೆ ಈಗ ಖಳನಾಯಕ ಎಂಟ್ರಿ ಆಗಿದೆ.
ಹೌದು, ಆರಂಭದಿಂದಲೂ”ಮದಗಜ ‘ಚಿತ್ರದಲ್ಲಿ ನಾಯಕ ಶ್ರೀಮುರಳಿ ಎದುರು ಗುದ್ದಾಡುವ ಖಳನಾಯಕ ಯಾರು ಎಂಬ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಅಂದಹಾಗೆ, “ಮದಗಜ’ನಿಗೆ ಖಳನಾಯಕನಾಗಿ ಬಹುಭಾಷಾ ನಟ ಜಗಪತಿ ಬಾಬು ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ವಿಜಯ್ ಸೇತುಪತಿ ಅಥವಾ ಜಗಪತಿ ಬಾಬು ಅವರಲ್ಲಿ ಯಾರಾದರೊಬ್ಬರು “ಮದಗಜ’ ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಳ್ಳಬಹುದು ಎಂಬ ಸುದ್ದಿ ಹರಿದಾಡುತ್ತಿದ್ದು, ಅಂತಿಮವಾಗಿ ಚಿತ್ರತಂಡ ಜಗಪತಿ ಬಾಬು ಅವರನ್ನು ಚಿತ್ರಕ್ಕೆಕರೆತರುವಲ್ಲಿ ಯಶಸ್ವಿಯಾಗಿದೆ.
ಕನ್ನಡದಲ್ಲಿ ಈಗಾಗಲೇ ಹಲವು ಚಿತ್ರಗಳಲ್ಲಿ ಅಬ್ಬರಿಸಿ ಸಿನಿಪ್ರಿಯರ ಮನಗೆದ್ದಿರುವ ಜಗಪತಿ ಬಾಬು “ಮದಗಜ’ನ ಮೂಲಕ ಎಷ್ಟರ ಮಟ್ಟಿಗೆ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ ಅನ್ನೋದು ಚಿತ್ರ ತೆರೆಗೆ ಬಂದ ಮೇಲಷ್ಟೇ ಗೊತ್ತಾಗಲಿದೆ. ಇನ್ನು “ಮದಗಜ’ ಚಿತ್ರಕ್ಕೆ ಉಮಾಪತಿ ಶ್ರೀನಿವಾಸ್ ಬಂಡವಾಳ ಹೂಡಿ ನಿರ್ಮಿಸುತ್ತಿದ್ದು, ಚಿತ್ರದಲ್ಲಿ ಆಶಿಕಾ ರಂಗನಾಥ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಮಹೇಶ್ “ಮದಗಜ’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.
ಚಿನ್ನದ ನಾಣ್ಯದಲ್ಲಿ ಡಾ.ರಾಜ್ : ಅಭಿಮಾನಕ್ಕೆ ಮಿತಿಯಿಲ್ಲ. ತಮ್ಮ ನೆಚ್ಚಿನ ನಟನನ್ನು ಅಭಿಮಾನಿಗಳು ಸದಾ ಸ್ಮರಿಸುತ್ತಲೇ ಇರುತ್ತಾರೆ. ಅದೇ ಕಾರಣದಿಂದಕಲಾವಿದನಿಗೆ ಸಾವಿಲ್ಲ ಎಂಬ ಮಾತಿದೆ. ಈಗಈಮಾತಿಗೆ ಕಾರಣ ವರನಟ ಡಾ.ರಾಜ್‌ಕುಮಾರ್. ರಾಜ್ ಅವರ ಕುರಿತಾದ ಅಭಿಮಾನವನ್ನು ಅಭಿಮಾನಿಗಳು ನಾನಾ ವಿಧದದಲ್ಲಿ ತೋರಿಸಿದ್ದಾರೆ.
ಈಗ ಕಂಪೆನಿಯೊಂದು 22 ಕ್ಯಾರೆಟ್ ಚಿನ್ನದ ನಾಣ್ಯದ ಮೂಲಕ ವರನಟನಿಗೆ ಗೌರವ ಸಲ್ಲಿಸಿದೆ. ಕಲೆಕ್ಟಿಬಲ್ ಮಿಂಟ್ ಕಂಪನಿ ಈ ಕಾರ್ಯ ಮಾಡಿದ್ದು, ಸೋಶಿಯಲ್‌ಮೀಡಿಯಾದಲ್ಲಿಈ ಬಂಗಾರದ ನಾಣ್ಯವೈರಲ್ ಆಗಿ, ಗಮನ ಸೆಳೆಯುತ್ತಿದೆ. ಆಣ್ಣಾವ್ರ ಚಿತ್ರವಿರುವ ನಾಣ್ಯದಲ್ಲಿ ಡಾ.ರಾಜ್ ಕುಮಾರ್ ಎಂದು ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ಬರೆಯಲಾಗಿದ್ದು, 25 ಗ್ರಾಂಗಳಲ್ಲಿ ಚಿನ್ನದ ನಾಣ್ಯ ತಯಾರಾಗಿದೆ. ರಾಜ್ ಕುಟುಂಬದ ಅನುಮತಿ ಪಡೆದೇ ಈ ನಾಣ್ಯವನ್ನು ಮಾಡಲಾಗಿದೆ