Advertisement
2024ರಲ್ಲಿ ಭಾರತ ತನ್ನ ಅತ್ಯುನ್ನತ ರಾಜ ತಾಂತ್ರಿಕ ನಡೆಯಲ್ಲಿ ಫ್ರಾನ್ಸ್ ಅಧ್ಯಕ್ಷರಾದ ಇಮ್ಮಾನುಯೆಲ್ ಮ್ಯಾಕ್ರಾನ್ ಅವರನ್ನು ಗಣರಾಜ್ಯೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಆಹ್ವಾನಿಸಿದೆ. ಮ್ಯಾಕ್ರಾನ್ ಅವರು ಜನವರಿ 25ರಂದು ಹೊಸದಿಲ್ಲಿಗೆ ಆಗಮಿಸಲಿದ್ದಾರೆ. ಅವರು ಈಗಾಗಲೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಲು ತನ್ನ ಒಪ್ಪಿಗೆ ಸೂಚಿಸಿದ್ದಾರೆ. ಮ್ಯಾಕ್ರಾನ್ ಉಪಸ್ಥಿತಿ, ಭಾರತ ಮತ್ತು ಫ್ರಾನ್ಸ್‌ಗಳ ನಡುವಿನ ಸಂಬಂಧ ಗಟ್ಟಿಯಾಗುತ್ತಿರುವುದನ್ನು ಪ್ರತಿಬಿಂಬಿಸುತ್ತದೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಡನೆ ಉತ್ತಮ ಬಾಂಧವ್ಯ ಹೊಂದಿರುವ ಮ್ಯಾಕ್ರಾನ್ ಅವರು ಗಣ ರಾಜ್ಯೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸುತ್ತಿರುವ ಎರಡನೇ ಫ್ರೆಂಚ್ ಅಧ್ಯಕ್ಷರಾ ಗಿ¨ªಾರೆ. ಈ ಮೊದಲು 2016ರಲ್ಲಿ ಫ್ರಾಂಕೋಯಿಸ್ ಹಾಲೆಂಡ್ ಅವರು ಮುಖ್ಯ ಅತಿಥಿಯಾಗಿದ್ದರು.
Related Articles
Advertisement
ಇಲ್ಲಿ ಪ್ರಮುಖವಾಗಿ ಗಮನಿಸುವ ಅಂಶ ವೆಂದರೆ, ಆ ದೇಶದ ಜೊತೆಗೆ ಭಾರತದ ಸಂಬಂಧ ಎಷ್ಟು ಉತ್ತಮವಾಗಿದೆ ಎನ್ನುವುದಾಗಿದೆ. ಯಾಕೆಂದರೆ, ಭಾರತ ಯಾವುದಾದರೂ ದೇಶದ ನಾಯಕನನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸು ತ್ತದೆ ಎಂದರೆ, ಭಾರತಕ್ಕೆ ಆ ದೇಶದೊಡನೆ ಸ್ನೇಹ ಸಂಬಂಧ ಸ್ಥಾಪಿಸುವ, ಅಥವಾ ಇರುವ ಬಾಂಧವ್ಯವನ್ನು ಉತ್ತಮಗೊಳಿಸುವ ಉದ್ದೇಶ ಇದೆ ಎಂದರ್ಥ. ಭಾರತ ಮುಖ್ಯ ಅತಿಥಿಯನ್ನು ಆಯ್ಕೆ ಮಾಡಿಕೊಳ್ಳುವ ಸಂದರ್ಭದಲ್ಲಿ, ತನ್ನ ರಾಜಕೀಯ, ವ್ಯಾವಹಾರಿಕ, ಮಿಲಿಟರಿ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಗಮನದಲ್ಲಿರಿಸುತ್ತದೆ. ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಅವಕಾಶವನ್ನು ಅತಿಥಿ ದೇಶದೊಡನೆ ಉತ್ತವ ಸ್ನೇಹ ಸಂಬಂಧ ಬೆಳೆಸಲು ಬಳಸಿಕೊಳ್ಳುತ್ತದೆ.
ಐತಿಹಾಸಿಕವಾಗಿ ಗಮನಿಸಲಾಗುತ್ತಿದ್ದ ಇನ್ನೊಂದು ಅಂಶವೆಂದರೆ, ಆಯ್ಕೆಯಾಗುವ ಅತಿಥಿ ಅಲಿಪ್ತ ಚಳುವಳಿಯೊಡನೆ ಹೊಂದಿರುವ ಸಂಬಂಧ. 1961ರಲ್ಲಿ ಸ್ಥಾಪನೆಗೊಂಡ ಅಲಿಪ್ತ ಚಳುವಳಿ ಒಂದು ಜಾಗತಿಕ ಚಳುವಳಿಯಾಗಿದ್ದು, ನೂತನವಾಗಿ ಸ್ವಾತಂತ್ರ್ಯ ಪಡೆದ ದೇಶಗಳು ಶೀತಲ ಸಮರದ ಸುಳಿಗೆ ಸಿಲುಕದೆ, ಪರಸ್ಪರರ ಅಭಿವೃದ್ಧಿಗೆ ನೆರವಾಗುವ ಉದ್ದೇಶ ಹೊಂದಿತ್ತು. ಇದು ಭಾರತ 1950ರಲ್ಲಿ ತನ್ನ ಪ್ರಥಮ ಗಣರಾಜ್ಯೋತ್ಸವದ ಮುಖ್ಯ ಅತಿಥಿಯನ್ನು ಆರಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿತ್ತು. ಭಾರತ ಆ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಇಂಡೋನೇಷ್ಯಾದ ಅಧ್ಯಕ್ಷರಾಗಿದ್ದ, ಅಲಿಪ್ತ ಚಳುವಳಿಯ ಪ್ರಮುಖ ಸ್ಥಾಪಕರಲ್ಲೊಬ್ಬರಾಗಿದ್ದ ಸುಕರ್ಣೋ ಅವರನ್ನು ಆಹ್ವಾನಿಸಿತ್ತು.
ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ವಿದೇಶಾಂಗ ಸಚಿವಾಲಯ ಅತ್ಯಂತ ಜಾಗರೂಕ ವಾಗಿ ಸಂಭಾವ್ಯ ಅತಿಥಿಗಳ ಪಟ್ಟಿಯೊಂದನ್ನು ಸಿದ್ಧ ಪಡಿಸುತ್ತದೆ. ಇದರಲ್ಲಿ ಕೇವಲ ಒಂದು ಆಯ್ಕೆ ಮಾತ್ರವೇ ಇರುವುದಿಲ್ಲ. ಒಂದು ಬಾರಿ ಭಾರತ ತನ್ನ ಅತಿಥಿಯನ್ನು ಆರಿಸಿದ ಬಳಿಕ, ಅತಿಥಿಯ ದೇಶ ದೊಡನೆ ಔಪಚಾರಿಕ ಮಾತುಕತೆ ನಡೆಸಲಾಗುತ್ತದೆ. ವಿದೇಶಾಂಗ ಸಚಿವಾಲಯದ ವಿವಿಧ ವಿಭಾಗಗಳು ಒಪ್ಪಂದಗಳ ಕುರಿತು ಕಾರ್ಯಾಚರಿಸಲು ಆರಂಭಿಸುತ್ತವೆ. ಶಿಷ್ಟಾಚಾರ ಮುಖ್ಯಸ್ಥರು ಕಾರ್ಯಕ್ರಮದ ವೇಳಾಪಟ್ಟಿ ಮತ್ತು ಸಂಚಾರ ಮತ್ತಿತರ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಾರೆ.
ಗಣರಾಜ್ಯೋತ್ಸವ ಸಮಾರಂಭದ ಮುಖ್ಯ ಅತಿಥಿ ಅಪಾರ ಗಮನ ಸೆಳೆಯುತ್ತಾರೆ. ಅತಿಥಿಯ ದೇಶವೂ ಸಹ ಈ ಭೇಟಿಯನ್ನು ಯಶಸ್ವಿ ಭೇಟಿ ಎಂದು ಪರಿಗಣಿಸುವುದು ಅತ್ಯವಶ್ಯಕವಾಗಿದೆ. ಮುಖ್ಯ ಅತಿಥಿಗೆ ರಾಷ್ಟ್ರಪತಿ ಭವನದಿಂದ ಅಧಿಕೃತ ಆಹ್ವಾನ ಬರುತ್ತದೆ. ಅವರು ಸಂಜೆ ಭಾರತದ ರಾಷ್ಟ್ರಪತಿಗಳು ಆಯೋಜಿಸುವ ಔತಣಕೂಟದಲ್ಲಿ ಪಾಲ್ಗೊಳ್ಳುತ್ತಾರೆ. ಅವರು ರಾಜಾ^ಟ್ನಲ್ಲಿರುವ ಮಹಾತ್ಮಾ ಗಾಂಧಿಯವರ ಸಮಾಧಿಗೆ ಭೇಟಿ ನೀಡಿ, ಗೌರವ ಸಲ್ಲಿಸುತ್ತಾರೆ. ಭಾರತದ ಪ್ರಧಾನಿಯವರೂ ಅತಿಥಿಗಾಗಿ ವಿಶೇಷ ಭೋಜನ ಕೂಟವನ್ನು ಆಯೋಜಿಸುತ್ತಾರೆ.
ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ