Advertisement

Machattu: ನಿಗೂಢವಾಗಿಯೇ ಉಳಿದ ಯುವಕ ನಾಪತ್ತೆ ಪ್ರಕರಣ

12:34 AM Sep 22, 2023 | Team Udayavani |

ಸಿದ್ದಾಪುರ: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಮಚ್ಚಟ್ಟು ಗ್ರಾಮದ ತೊಂಬಟ್ಟು ಇರ್ಕಿಗದ್ದೆ ವಿವೇಕಾನಂದ (28) ಅವರು ಮನೆಯಿಂದ ನಾಪೆ¤ಯಾಗಿ 6 ದಿನಗಳು ಕಳೆದರೂ ಪತ್ತೆಯಾಗಿಲ್ಲ. ಅವರು ಸೆ. 16ರಂದು ಮನೆಯಿಂದ ನಾಪತ್ತೆಯಾಗಿದ್ದರು. ಕಾಣೆಯಾಗುವಾಗ ಹಳದಿ ಬಣ್ಣದ ಟೀ ಶರ್ಟು ಹಾಗೂ ನೀಲಿ ಬಣ್ಣದ ಚಡ್ಡಿ ಧರಿಸಿದ್ದರು.
ನಾಪತ್ತೆಯ ಬಗ್ಗೆ ಅಮಾಸೆಬೈಲು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಅರಣ್ಯ ಇಲಾಖೆ ಸಹಕಾರ
ಸ್ಥಳೀಯರೊಂದಿಗೆ ಅಮಾಸೆಬೈಲು ಪೊಲೀಸರು ಹಾಗೂ ಅರಣ್ಯ ಇಲಾಖೆಯ ಸಿಬಂದಿ ಕೂಡ ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ. ಅರಣ್ಯ ಇಲಾಖೆಯು ಕಾಡಿನಲ್ಲಿ ಶೋಧ ಕಾರ್ಯನಿರತರಿಗೆ ನೀರು ಆಹಾರಾದಿಗಳನ್ನು ನೀಡಿ ಸಹಕರಿಸಿದರು.

ತೊಂಬಟ್ಟು ಪರಿಸರದ ಅರಣ್ಯದಲ್ಲಿ ಸಾಕಷ್ಟು ಚಿರತೆಗಳು ಓಡಾಡುತ್ತಿದ್ದುದನ್ನು ಸ್ಥಳೀಯರು ಗಮನಿಸಿದ್ದು, ಇದು ಆತಂಕ ಸೃಷ್ಟಿಸಿದೆ.

ಭೇಟಿ ನೀಡದ ಕಂದಾಯ ಇಲಾಖೆ; ಅಸಮಾಧಾನ
ಕಂದಾಯ ಇಲಾಖೆಯ ಯಾವ ಅಧಿಕಾರಿಗಳು ಕೂಡ ನಾಪತ್ತೆಯಾದ ಯುವಕನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವ ಕಾರ್ಯ ಮಾಡಿಲ್ಲ ಎಂದು ಸ್ಥಳೀಯರು ಕಂದಾಯ ಇಲಾಖೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next