Advertisement
ಜರ್ನಿ ಥಿಯೇಟರ್ ಗ್ರೂಪ್ ಎಂಬ ಹೊಸ ತಂಡವು ಯುವ ಸಮುದಾಯ ವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಮೂಲಕ ಹೊಸ ಜರ್ನಿ ಪ್ರಾರಂಭಿಸಿದ್ದು ಮಂಗಳೂರಿಗೆ ಸಂಬಂಧಿಸಿದ ಹಾಗೆ ಬಹುಮುಖ್ಯ ಬೆಳವಣಿಗೆ. ಒಂದು ಕಾಲದಲ್ಲಿ ನಾಟಕ ಕ್ಷೇತ್ರಕ್ಕೆ ಆಶ್ರಯತಾಣವಾಗಿದ್ದ ಸಂತ ಅಲೋಶಿಯಸ್ ಕಾಲೇಜಿನ ಸಭಾಂಗಣ ದಲ್ಲಿ ಅಲ್ಲಿನ ವಿದ್ಯಾರ್ಥಿಗಳನ್ನು, ಅಧ್ಯಾಪಕರನ್ನು ಹಾಗೂ ಇತರ ರಂಗಾಸಕ್ತರನ್ನು ಒಗ್ಗೂಡಿಸಿ ಉದಯೋನ್ಮುಖ ರಂಗನಿರ್ದೇಶಕ ವಿದ್ದು ಉಚ್ಚಿಲ್ ಮ್ಯಾಕ್‌ಬೆತ್ತನ್ನು ಹೊಸ ದೃಷ್ಟಿಕೋನದೊಂದಿಗೆ ಕಟ್ಟಿಕೊಟ್ಟಿದ್ದಾರೆ.
Related Articles
Advertisement
ಇದು ಹೇಗೆ ಸರಿ ಎಂದು ಯಾರಾದರೂ ಪ್ರಶ್ನಿಸ ಬಹುದು. ಡಂಕನ್‌ನನ್ನು ಇರಿದು ಕೊಲ್ಲುವ ಮುಖ್ಯ ಮ್ಯಾಕ್‌ಬೆತ್‌ಗೆ ಉಳಿದಿಬ್ಬರು ಪೂರಕ ಪಾತ್ರಗಳು. ಅವರಲ್ಲೂ ಕ್ಷೀಣರೂಪದಲ್ಲಿ ಮ್ಯಾಕ್‌ಬೆತ್ ಹರಿದಾಡುತ್ತಿರು ತ್ತಾನೆ. ಮಾಟಗಾತಿಯರಾದ ಇಬ್ಬರು ಮ್ಯಾಕ್‌ಬೆತರು ಮುಖ್ಯ ಮ್ಯಾಕ್‌ಬೆತನನ್ನು ಆಮಿಷಕ್ಕೆ ಸೆಳೆಯುವಾಗ ಆ ಮಾಟಗಾತಿಯರಲ್ಲೂ ಕ್ಷೀಣರೂಪದ ಮ್ಯಾಕ್‌ಬೆತ್ ಅಂತರ್ಗತರಾಗಿರುತ್ತಾರೆ. ಮುಖ್ಯ ಮ್ಯಾಕ್‌ಬೆತನ ತಪ್ಪನ್ನು ಪುಣ್ಯ ಪಾಪ, ಪಾಪ ಪುಣ್ಯ ಎಂದು ಸಾರುವಾಗ, ಮ್ಯಾಕ್‌ಬೆತ್ ನಿದ್ದೆಯನ್ನು ಕೊಂದಿದ್ದಾನೆ, ಅವನಿನ್ನು ನಿದ್ರಿಸಲಾರ ಎಂದು ಘೋಷಿಸುವಾಗ ಆ ಎರಡು ಮ್ಯಾಕ್‌ಬೆತ್‌ರು ಕೂಡ ಮುಖ್ಯ ಮ್ಯಾಕ್‌ಬೆತ್‌ನ ಅಂತರ್‌ಧ್ವನಿಯೇ ಆಗಿಬಿಡುತ್ತಾರೆ. ಬ್ಯಾಂಕೋನ ವಿರುದ್ಧದ ಪಿತೂರಿಯಲ್ಲಾಗಲೀ ಲೇಡಿ ಮ್ಯಾಕ್‌ಬೆತನ್ನು ಸಂತೈಸುವ ಸಂದರ್ಭದಲ್ಲಾಗಲೀ ಉಳಿದ ಮ್ಯಾಕ್‌ಬೆತರು ಆಯಾ ಸಂದರ್ಭದ ಸಮರ್ಥಕರಾಗಿ ಕಾಣಿಸುತ್ತಾರೆ. ಪ್ರೇಕ್ಷಕರಿಗೆ ಹಾಗೆ ಕಾಣಿಸಿದರೆ ನಿರ್ದೇಶಕ ತನ್ನ ಪ್ರಯೋಗದಲ್ಲಿ ಗೆದ್ದಂತೆಯೇ. ಮಾತ್ರವಲ್ಲದೆ ಏಳು ಮಂದಿಯಲ್ಲಿಯೇ ಇಷ್ಟೊಂದು ಪಾತ್ರಗಳ ನಿರ್ವಹಣೆ ಮಾಡಬೇಕಾಗಿದ್ದರೆ ಒಬ್ಟಾತ ಮ್ಯಾಕ್‌ಬೆತ್ ತನ್ನ ಮಾತುಗಳನ್ನು ಹೇಳುತ್ತಿರುವಾಗ ಇನ್ನೊಬ್ಟಾತ ಮ್ಯಾಕ್‌ಬೆತ್ ಪಾತ್ರ ಬದಲಿಸಿ ಮತ್ತೂಂದು ಜಾಗದಲ್ಲಿ ಕಾಣಿಸಿಕೊಳ್ಳುವುದು ಸುಲಭದ ಮ್ಯಾಜಿಕ್ಕಲ್ಲ!
ಡಂಕನ್‌ನ ಮೆರವಣಿಗೆ, ಮಾಟಗಾತಿಯರ ಪ್ರವೇಶ, ಬ್ಯಾಂಕೋನ ಪ್ರೇತದ ಸಂಚಾರ, ರಕ್ತವನ್ನು ತಿಕ್ಕಿ ಒರಸುವ ಲೇಡಿ ಮ್ಯಾಕ್‌ಬೆತಳ ಉದ್ದನೆಯ ಕೆಂಪು ಸೆರಗು- ಹೊಸತನದಿಂದ ಕೂಡಿದ್ದುವು. ಯುದ್ಧದ ಸಂದರ್ಭವನ್ನು ಇನ್ನಷ್ಟು ಸಹಜ ಎಂಬಂತೆ ಪ್ರದರ್ಶಿಸಬಹುದಿತ್ತು.
ಪುಟ್ಟ ಸಭಾಂಗಣವನ್ನು ಆವರಿಸುವಷ್ಟು ಧ್ವನಿಯನ್ನು ಎಲ್ಲ ಪಾತ್ರಗಳು ಸಮಾನ ವಾಗಿ ಎತ್ತಿಕೊಳ್ಳದ್ದು ಒಂದು ಕೊರತೆಯಾಗಿ ಕಾಣಿಸಿತು. ಇಲ್ಲಿ ಬೇಕಾಗಿದ್ದುದು ಬೀದಿ ನಾಟಕದ ತಂತ್ರ. ರಂಗದ ಬಳಕೆಯೂ ಅದೇ ತರಹ ಇತ್ತು. ಅಗತ್ಯಕ್ಕೆ ತಕ್ಕಷ್ಟು ಪಾಶ್ಚಿಮಾತ್ಯ ಸಂಗೀತವೂ ಬಳಕೆಯಾಗಿ ಪ್ರೇಕ್ಷಕರನ್ನು ಅನ್ಯಲೋಕದತ್ತ ಒಯ್ಯುವಲ್ಲಿ ಸಫಲವಾಯಿತು. ರಂಗದ ಇಕ್ಕೆಲಗಳಿಗೆ ಪಾತ್ರಗಳು ಕ್ಷಿಪ್ರಗತಿ ಯಿಂದ ಬರುತ್ತಿದ್ದುದರಿಂದಲೇ ಇರಬೇಕು; ಬೆಳಕು ಅಲ್ಲಿಗೆ ತಡವಾಗಿ ಹರಿಯುತ್ತಿತ್ತು.
ಅಳಿವಿನಂಚಿಗೆ ಸಾಗುತ್ತಿದೆಯೇ ಎಂದು ಭೀತಿ ಹುಟ್ಟಿಸಿದ ಮಂಗಳೂರಿನ ರಂಗಚೈತನ್ಯ ಮತ್ತೂಮ್ಮೆ ಆಶಾದಾಯಕ ರೂಪದಲ್ಲಿ ಗರಿಗೆದರಿ ನರ್ತಿಸತೊಡಗಿದೆ.
ನಾ. ದಾಮೋದರ ಶೆಟ್ಟಿ