ಕೋಟ: ಮಾಬುಕಳ ಸೇತುವೆ ಮೇಲೆ ಆ. 12ರಂದು ಬೈಕ್ ಇಟ್ಟು ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಭಾನುವಾರ ಮಾಬುಕಳ ಸೀತಾ ನದಿ ಹೊಳೆಯಲ್ಲಿ ಪತ್ತೆಯಾಗಿದೆ.
ಕೊಡಂಕೂರು ನಿವಾಸಿ, ಆರ್.ಟಿ.ಓ. ಮಧ್ಯವರ್ತಿ ಅಶೋಕ್ ಸುವರ್ಣ (46) ಆತ್ಮಹತ್ಯೆ ಮಾಡಿಕೊಂಡವರು.
ಮಾಬುಕಳ ಹೊಳೆಯ ಸಮೀಪ ಅಶೋಕ್ ಅವರ ಬೈಕ್ ಪತ್ತೆಯಾದಾಗ ಮನೆಯವರು ಹುಡುಕಾಡಿದ್ದು, ತಾನು ಬ್ರಹ್ಮಾವರ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎನ್ನುವ ಡೆತ್‌ನೋಟ್ ಮನೆಯಲ್ಲಿ ಪತ್ತೆಯಾಗಿತ್ತು. ಅನಂತರ ಮುಳುಗು ತಜ್ಞ ಈಶ್ವರ ಮಲ್ಪೆ ಅವರ ಸಹಕಾರದಲ್ಲಿ ಮಾಬುಕಳ ಸೀತಾನದಿಯಲ್ಲಿ ತೀವ್ರ ಶೋಧ ನಡೆಸಿದ್ದು ಎರಡು ದಿನಗಳ ಬಳಿಕ ಮೃತದೇಹ ಪತ್ತೆಯಾಗಿದೆ.
ಇದನ್ನೂ ಓದಿ: ಕತ್ತೆಗೇನು ಗೊತ್ತು ಕಸ್ತೂರಿ ವಾಸನೆ? ಎಸ್‌ಡಿಪಿಐಗೆ ತಿರುಗೇಟು ನೀಡಿದ ಸಿ.ಟಿ.ರವಿ
ಮಾನಸಿಕ ಅಸ್ವಸ್ಥತೆಯಿಂದ ಜೀವನದಲ್ಲಿ ಜುಗುಪ್ಸೆಗೊಂಡಿರುವುದೇ ಆತ್ಮಹತ್ಯೆಗೆ ಕಾರಣವಾಗಿದೆ ಎಂದು ಮನೆಯವರು ಕೋಟ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.