ಬಂಟ್ವಾಳ : ಐತಿಹಾಸಿಕ ಮಹತ್ವದ ಗೋಳ್ತಮಜಲು ಗ್ರಾಮ, ಕಲ್ಲಡ್ಕ, ಮೊಗರ್ನಾಡು ಸಾವಿರ ಸೀಮೆ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನ, ಶ್ರೀ ಕ್ಷೇತ್ರ ನಿಟಿಲಾಪುರದಲ್ಲಿ ಮಾ. 14ರಿಂದ 19ರ ತನಕ ಶ್ರೀ ದೇವರ ವರ್ಷಾವಧಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು ಮಾ. 14ರಂದು ಶ್ರೀ ದುರ್ಗಾಲಯ ದೈವಸ್ಥಾನದಿಂದ ಶ್ರೀ ದುರ್ಗಾಲಯ ಪಿಲಿಚಾಮುಂಡಿ, ಪಂಜುರ್ಲಿ ದೈವಗಳ ಭಂಡಾರ ಬಂದು ಶ್ರೀ ದೇವರಿಗೆ ಏಕಾದಶ ರುದ್ರಾಭಿಷೇಕ ಬಳಿಕ ಮಹಾಪೂಜೆಯಾಗಿ ಧ್ವಜಾರೋಹಣ ನಡೆಯಿತು.
ರಾತ್ರಿ ದೇವರ ಬಲಿ ಉತ್ಸವ, ಕಾರಂತರಕೋಡಿ ಶ್ಯಾನುಭಾಗರ ಕಟ್ಟೆಗೆ ಸವಾರಿ ಹಮ್ಮಿಕೊಳ್ಳಲಾಗಿತ್ತು. ಮಾ. 15ರಂದು ವಿವಿಧ ಧಾರ್ಮಿಕ ವಿಧಿಗಳು, ದೇವರ ಕಟ್ಟೆ ಸವಾರಿ ನಡೆದವು.
ಮಾ. 16ರಂದು ಬೆಳಗ್ಗೆ ಗಂಟೆ 7.30ರಿಂದ ದೀಪದ ಬಲಿ ಉತ್ಸವ, ಮಧ್ಯಾಹ್ನಗಂಟೆ 12.00 ರಿಂದ ಮಹಾಪೂಜೆ , ಸಂಜೆ ಗಂಟೆ 6.00ರಿಂದ ವಿದುಷಿ ಸುಚಿತ್ರಾ ಹೊಳ್ಳರ ಶಿಷ್ಯ ವೃಂದದವರಿಂದ ಸಂಗೀತ ಕಾರ್ಯಕ್ರಮ, ರಾತ್ರಿ ಗಂಟೆ 8.30 ರಿಂದ ನಡು ಬಲಿ ಉತ್ಸವ, ಚಂದ್ರಮಂಡಲ ಉತ್ಸವ, ಬಟ್ಟಲು ಕಾಣಿಕೆ , ಪಿಲಿಂಜ ಕಟ್ಟೆಗೆ ಸವಾರಿ, ಉಯ್ನಾಲೋತ್ಸವ, ದುರ್ಗಾಲಯ ದೈವಗಳಿಗೆ ನೇಮ ನಡೆಯಲಿದೆ. ಮಾ. 17ರಂದು ಬೆಳಗ್ಗೆ ಗಂಟೆ 7.30ರಿಂದ ದೀಪದ ಬಲಿ ಉತ್ಸವ, ದರ್ಶನ ಬಲಿ ಉತ್ಸವ, ಬಟ್ಟಲು ಕಾಣಿಕೆ, ತಪ್ಪಂಗಾಯಿ, ಮಧ್ಯಾಹ್ನ ಗಂಟೆ 12ರಿಂದ ಮಹಾಪೂಜೆ ಶ್ರೀ ದೇವರ ರಥಾರೋಹಣ ಅಪರಾಹ್ನ ಗಂಟೆ 1.30ರಿಂದ ಮಹಾಪ್ರಸಾದ, ರಾತ್ರಿ ಗಂಟೆ 7ರಿಂದ “ಶ್ರೀ ಮನ್ಮಹಾರಥೋತ್ಸವ’ ಬೆಡಿಸೇವೆ, ಬಟ್ಟಲು ಕಾಣಿಕೆ , ಬಲಿ ಉತ್ಸವ, ಉಯ್ನಾಲೋತ್ಸವ, ಶಯನೋತ್ಸವ ನಡೆಯಲಿದೆ.
ಮಾ. 18ರಂದು ಬೆಳಗ್ಗೆ ಶ್ರೀ ದೇವರ ಕವಾಟೋದ್ಘಾಟನೆ, ತುಲಾಭಾರ ಸೇವೆ, ಮಧ್ಯಾಹ್ನ ಗಂಟೆ 12.00ರಿಂದ ಮಹಾಪೂಜೆ, ಅಪರಾಹ್ನ ಅವಭೃಥ ಬಲಿ ಉತ್ಸವ, ವಸಂತಕಟ್ಟೆಯಲ್ಲಿ ಪೂಜೆ, ಓಕುಳಿ ಪ್ರಸಾದ, ಬಳಿಕ ಅವಭೃಥ ಸವಾರಿಯು ಪಡ್ಡಾಯಿಬೈಲು-ಪೂವಳ-ಮುಳಿ ಕೊಡಂಗೆ-ಕಟ್ಟೆಮಾರು- ಬೈದರಡ್ಕ- ಮಾಕಳಿ- ಬಾಳಿಕೆ- ಅಂತರಗುತ್ತು-ಬಸ್ತುಕೋಡಿ ದಿ| ವೆಂಕಪ್ಪಯನವರ ಕಟ್ಟೆ, ಬೋಳಂಗಡಿ- ಮೆಲ್ಕಾರ್- ಆಲಡ್ಕ- ಪಾಣೆಮಂಗಳೂರು ಪೇಟೆ ಸವಾರಿ, ಸೇರಿಗಾರ ಕಟ್ಟೆ- ಶ್ರೀ ಭಯಂಕೇಶ್ವರ ದೇವಸ್ಥಾನದ ಬಳಿ ಎರಕಳ ಶ್ರೀ ಗಣೇಶ ಸೋಮಯಾಜಿಯವರ ಅವಭೃಥ ಕಟ್ಟೆಪೂಜೆ, ಪ್ರಸಾದ ವಿತರಣೆ- ಶ್ರೀ ನೇತ್ರಾವತಿ ನದಿಯಲ್ಲಿ ಅವಭೃಥ ಸ್ನಾನ, – ಮಹಾಪೂಜೆ-ಶ್ರೀ ದೇವರ ಮರು ಸವಾರಿ ಆರಂಭ- ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಕಲ್ಲಡ್ಕ ಪೇಟೆ-ಕೋಳಕೀರು-ಕಾರಂತರಕೋಡಿ ಮೂಲಕ ಶ್ರೀ ಕ್ಷೇತ್ರ ನಿಟಿಲಾಪುರಕ್ಕೆ ಆಗಮನ- ಧ್ವಜ ಅವರೋಹಣವಾಗಿ ಬಟ್ಟಲು ಕಾಣಿಕೆ-ಮಹಾಪೂಜೆ ಹಮ್ಮಿಕೊಳ್ಳಲಾಗಿದೆ.
ಮಾ. 19ರಂದು ಮಧ್ಯಾಹ್ನ ಗಂಟೆ 12ರಿಂದ ಮಹಾಪೂಜೆ, ಅಪರಾಹ್ನ ಕೊಳಕೀರಿನಿಂದ ಭಂಡಾರ ಆಗಮಿಸಿ ಧೂಮಾವತಿ-ಬಂಟ ದೈವಗಳಿಗೆ ಶ್ರೀ ದೇವರ ಸನ್ನಿಧಿಯಲ್ಲಿ ನೇಮ, ಬಳಿಕ ಪಿಲಿಚಾಮುಂಡಿ ಮತ್ತು ಪಂಜುರ್ಲಿ ದೈವಗಳ ನೇಮ ನಡೆಯುವ ಮೂಲಕ ವಾರ್ಷಿಕ ಉತ್ಸವ ಸಂಪನ್ನಗೊಳ್ಳಲಿದೆ ಎಂದು ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಗೌ| ಅಧ್ಯಕ್ಷ, ಸಚಿವ ಬಿ.ರಮಾನಾಥ ರೈ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹಾಗೂ ಜೀರ್ಣೋದ್ಧಾರ ಸಮಿತಿ ಖಜಾಂಚಿ ಅಶೋಕ ಕುಮಾರ್ ಬರಿಮಾರು, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ಚೌಟ, ಮಾಣಿ ಬದಿಗುಡ್ಡೆ ಹಾಗೂ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.