ಮಂಡ್ಯ: ನಿಜವಾದ ಸಾಧಕರ ಕೆಲಸವನ್ನು ಗುರುತಿಸಿ ನೀಡುವ ಗೌರವ ಶ್ರೇಷ್ಠವಾಗಿದ್ದು, ಮನುಷ್ಯ ಸರಳತೆ ಮೈಗೂಡಿಸಿಕೊಳ್ಳಬೇಕು ಎಂದು ಮಾಜಿ ಸಚಿವ ರಾಮಚಂದ್ರೇಗೌಡ ತಿಳಿಸಿದರು.
ನಗರದ ಕರ್ನಾಟಕ ಸಂಘದ ಆವರಣದಲ್ಲಿ ಎಂ.ಎಲ್.ಶ್ರೀಕಂಠೇಶಗೌಡ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಐದನೇ ವರ್ಷದ ಎಂ.ಶಿವಲಿಂಗಯ್ಯ ಸಮಾಜ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ವಯಂ ಪ್ರೇರಣೆಯಿಂದ ಮನ್ನಣೆ: ಪ್ರತಿ ಯೊಬ್ಬರಿಗೂ ಸಮಾಜದಲ್ಲಿ ತನ್ನನ್ನು ಗುರುತಿಸಿ ಗೌರವಿಸಬೇಕು ಎಂಬ ಮನ್ನಣೆ ದಾಹ ಇರು ತ್ತದೆ. ಆದರೆ, ನಿಜವಾಗಿ ಸಾಧಕರ ಕೆಲಸವನ್ನು ಗುರುತಿಸಿ ನೀಡುವ ಗೌರವ ಶ್ರೇಷ್ಠವಾಗಿರು ತ್ತದೆ. ಯಾವುದಕ್ಕೂ ಆಸೆ ಪಡದೇ ಅದಕ್ಕೂ ಮೀರಿ ಏನನ್ನು ಅಪೇಕ್ಷಿಸದ ಸಾಧಕರ ಕಾರ್ಯವನ್ನು ಗುರುತಿಸಿ ಸ್ವಯಂ ಪ್ರೇರಣೆ ಯಿಂದ ಮನ್ನಣೆ ನೀಡುತ್ತಿರುವುದು ಅಭಿನಂದನೀಯ ಎಂದರು. ಮಂಡ್ಯ ಪ್ರಾಮುಖ್ಯತೆ: ಸನ್ಮಾನ ಸ್ವೀಕರಿಸಿ ಮಾತನಾಡಿದ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಡಾ.ಬಿ.ಪ್ರಭುದೇವ್, ಹಳ್ಳಿಯಿಂದ ಅಮೆರಿಕದವರೆಗೆ ಎಲ್ಲೇ ಹೋದರೂ ಪ್ರತಿಯೊಬ್ಬರಿಗೂ ಮಂಡ್ಯ ಎಂದರೆ ವಿಶೇಷ ಭಾವನೆ ವ್ಯಕ್ತಪಡಿಸುತ್ತಾರೆ. ಎಲ್ಲಾ ರಂಗದಲ್ಲಿ ಮಂಡ್ಯ ಪ್ರಾಮುಖ್ಯತೆ ಪಡೆದಿದೆ ಎಂದು ಹೇಳಿದರು.
ನಂಬಿಕೆಯಿಂದ ಮುನ್ನಡೆಯಿರಿ: ಎಂ. ಶಿವಲಿಂಗಯ್ಯ ಸಮಾಜ ಸೇವಾ ಪ್ರಶಸ್ತಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಮಾಜ ಸೇವಕಿ ವೀಣಾ, ಆರ್ಥಿಕವಾಗಿ, ಸಾಮಾಜಿಕವಾಗಿ ನಡೆಯುವ ಘಟನೆಗಳು ಮಹಿಳೆಗೆ ಸಮಸ್ಯೆ ಸೃಷ್ಟಿಸುತ್ತವೆ. ಮಹಿಳೆ ಯಾವುದೇ ಸಂದರ್ಭ ದಲ್ಲಿ ಕುಗ್ಗದೆ ವಿಶ್ವಾಸ ಮತ್ತು ನಂಬಿಕೆಗಳಿಂದ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಆದಾಯ ತೆರಿಗೆ ಇಲಾಖೆ ಆಯುಕ್ತ ಜಯರಾಂ ರಾಯಪುರ, ಕರ್ನಾಟಕ ಸಂಘದ ಅಧ್ಯಕ್ಷ ಬಿ.ಜಯಪ್ರಕಾಶ ಗೌಡ, ಕಾರ್ಯದರ್ಶಿ ಲೋಕೇಶ್ ಚಂದ ಗಾಲು, ದತ್ತಿದಾನಿ ಎಂ.ಕೆ.ಲಕ್ಷ್ಮೀ, ಮಂಜುಳಾ ಉದಯಶಂಕರ್, ತಗ್ಗಹಳ್ಳಿ ವೆಂಕಟೇಶ್, ಎಂ. ಕೆ.ಹರೀಶ್‌ಕುಮಾರ್, ವಿಜಯಲಕ್ಷ್ಮೀ ರಘು ನಂದನ್ ಮತ್ತಿತರರು ಭಾಗವಹಿಸಿದ್ದರು.
ಮನುಷ್ಯ ಯಾವುದೇ ಅಂತಸ್ತಿ ಇರಲಿ. ಎಲ್ಲೇ ಹುಟ್ಟಿ ರಲಿ, ಬೆಳೆದಿರಲಿ, ಅವನು ತನ್ನ ಕ್ಷೇತ್ರದಲ್ಲಿ ಕೆಲಸ ಮಾಡಿ ತೋರಿಸಬೇಕು. ಸರಳತೆಯಿಂದ ಬದುಕು ನಡೆಸಿ ಮತ್ತೂಬ್ಬರಿಗೆ ಪ್ರೇರಣೆ ಎನಿಸಬೇಕು.
– ರಾಮಚಂದ್ರೇಗೌಡ, ಮಾಜಿ ಸಚಿವರು