Advertisement

ಎಂ-ಸ್ಯಾಂಡ್‌ ಬಗ್ಗೆ ಜಾಗೃತಿ ಬೇಕು

12:50 PM Jul 21, 2018 | |

ರಾಮನಗರ: ಪ್ರಸ್ತುತ ಕಟ್ಟಡ ನಿರ್ಮಾಣ ಕಾಮಗಾರಿಗೆ ಅಗತ್ಯವಾಗಿರುವ ಮರಳಿಗೆ ಪರ್ಯಾಯವಾಗಿ ಬಳಕೆಯಾಗುತ್ತಿರುವ ಎಂ-ಸ್ಯಾಂಡ್‌ ಮತ್ತು ಮಲೇಷ್ಯಾರಾಷ್ಟ್ರದಿಂದ ಆಮದು ಮಾಡಿಕೊಳ್ಳುವ ಮರಳಿನ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ ಪಾಟೀಲ ಹೇಳಿದರು.

Advertisement

ತಾಲೂಕಿನ ಬಿಡದಿಯಲ್ಲಿರುವ ಎಂಎಸ್‌ ಐಎಲ್‌ ಮರಳು ಮಾರಾಟ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಎಂ-ಸ್ಯಾಂಡ್‌ ಮತ್ತು ಆಮದು ಮರಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ಇವುಗಳ ಬಳಕೆ ಬಗ್ಗೆ ಜಾಗೃತಿ ಅಗತ್ಯ. ರಾಜ್ಯದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಅಗತ್ಯವಿರುವ ಮರಳಿಗೆ ಕೊರತೆ ಉಂಟಾಗಿದ್ದರಿಂದ ಮಲೇಷಿಯಾದಿಂದ ಮರಳು ಆಮದು ಮಾಡಿಕೊಳ್ಳಲು ಹಿಂದಿನ ಸರ್ಕಾರ ನಿರ್ಧರಿಸಿತ್ತು ಎಂದು ಹೇಳಿದರು.

ಬಿಡದಿಗೆ 4 ಸಾವಿರ ಟನ್‌ ಮಲೇಷ್ಯಾ ಮರಳು: ಇದುವರೆಗೆ 50 ಸಾವಿರ ಮೆಟ್ರಿಕ್‌ಟನ್‌ ಮಲೇಷ್ಯಾ ಮರಳನ್ನು ಆಮದು
ಮಾಡಿಕೊಳ್ಳಲಾಗಿದೆ. ಈ ಪೈಕಿ 4 ಸಾವಿರ ಮೆಟ್ರಿಕ್‌ ಟನ್‌ ಮರಳನ್ನು ಬಿಡದಿಯ ಮಾರಾಟ ಕೇಂದ್ರಕ್ಕೆ ಕೊಡಲಾಗಿದೆ. ಬಿಡದಿ ಕೇಂದ್ರದಲ್ಲಿ ಈವರೆಗೆ ಒಂದು ಸಾವಿರ ಮೆಟ್ರಿಕ್‌ ಟನ್‌ ಮರಳು ಮಾರಾಟವಾಗಿದೆ ಎಂದರು.

50 ಕೆ.ಜಿಗೆ 200 ರೂ.: ಮಲೇಷ್ಯಾದಿಂದ ಮರಳನ್ನು ಹಡಗುಗಳ ಮೂಲಕ ಆಂಧ್ರಪ್ರದೇಶದ ಕೃಷ್ಣಾಪಟ್ಟಣಂಗೆ
ತರಲಾಗಿತ್ತು. ಅಲ್ಲಿಯೇ 50 ಕೆ.ಜಿ ಮರಳಿನ ಚೀಲಗಳನ್ನು ಸಿದ್ಧಪಡಿಸಿ ರಾಜ್ಯದಲ್ಲಿ ಎಂಎಸ್‌ ಐಎಲ್‌ ಸ್ಥಾಪಿಸಿರುವ ಮಾರಾಟ ಕೇಂದ್ರಗಳಿಗೆ ರವಾನಿಸಲಾಗಿದೆ. ಸದ್ಯ ಜಿಎಸ್‌ಟಿ ಮತ್ತು ಇಲಾಖೆಯ ರಾಜಧನ ಸೇರಿ 50 ಕೆ.ಜಿ ಮರಳಿನ ಚೀಲಕ್ಕೆ 200 ರೂ. ದರ ನಿಗದಿಯಾಗಿದೆ ಎಂದು ಮಾಹಿತಿ ನೀಡಿದರು.

ಕಳೆದ ಜನವರಿಯಲ್ಲಿ ಬಿಡದಿಯಲ್ಲಿ ಮರಳು ಮಾರಾಟ ಕೇಂದ್ರ ಆರಂಭವಾಗಿದೆ. ನಂತರ ಚುನಾವಣೆ ಬಂದಿದ್ದರಿಂದ ಹೆಚ್ಚು
ಮರಳು ಮಾರಾಟವಾಗಿಲ್ಲ. ಆದರೆ ಆಮದು ಮರಳಿಗೆ ಬೇಡಿಕೆ ಇದೆ ಎಂದರು. ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ಹಾಗೂ ಬಿಡದಿ ಪುರಸಭಾ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಮಾಹಿತಿ ಪಡೆದು ಪರಿಶೀಲಿಸುವುದಾಗಿ ತಿಳಿಸಿದರು.

Advertisement

ಮೈಸೂರು ಮಿನರಲ್ಸ… ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ನವೀನ್‌ರಾಜ್‌ ಸಿಂಗ್‌, ಸಿ.ಟಿ.ಪುಟ್ಟಸ್ವಾಮಿ, ಗಣಿ ಇಲಾಖೆಯ
ಉಪನಿರ್ದೇಶಕಿ ಲಲಕ್ಷ್ಮಮ್ಮ, ತಾಲೂಕು ಪಂಚಾಯಿತಿ ಸದಸ್ಯ ಗಾಣಕಲ್‌ ನಟರಾಜು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next