Advertisement
ಬೆಂಗಳೂರಿನ ಅರಮನೆ ಮೈದಾನದಲ್ಲಿನಡೆದ ತಮ್ಮ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಪರೋಕ್ಷ ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಯನ್ನು ಅನರ್ಹ ಮಾಡುತ್ತಾರೆ. ಅನರ್ಹಗೊಂಡವರನ್ನು ಅಧ್ಯಕರ ಒತ್ತಾಯದ ಕಾರಣಕ್ಕೆ ಕಣಕ್ಕಿಸಲು ಅವಕಾಶ ಕೊಡಲಾಗುತ್ತದೆ. ಒಂದೇ ವರ್ಷಕ್ಕೆ ನನ್ನ ಮಗನಿಗೆ ಅವಕಾಶ ನೀಡುತ್ತಾರೆ. ಬಳಿಕ ಅನರ್ಹಗೊಂಡವರಿಗೆ ಅವಕಾಶ ನೀಡಿ ರಕ್ಷಾನಿಗೆ ಗಿಫ್ಟ್ ರೀತಿ ರಾಷ್ಟ್ರೀಯ ಜವಾಬ್ದಾರಿ ನೀಡುತ್ತಾರೆ ಎಂದು ಸೀತಾರಾಂ ನೋವು ನೋಡಿಕೊಂಡರು.
ಕಾಂಗ್ರೆಸ್ ಪಕ್ಷದಲ್ಲಿ ನಾವು ಉಳಿಯಬೇಕೆಂದು ಅನೇಕರು ಹೇಳುತ್ತಾರೆ. ಕಳೆದ ನಲ್ವತ್ತು ವರ್ಷ ರಾಜಕಾರಣ ಮಾಡಿ ಈಗ ಬೇರೆ ಯೋಚನೆ ಮಾಡಬೇಡಿ ಎನ್ನುತ್ತಾರೆ. ನನ್ನನ್ನು ಸಿದ್ದರಾಮಯ್ಯ ಎರಡು ವರ್ಷ ಮಂತ್ರಿ ಮಾಡಿದ್ದರು. ನನಗೆ ಕೊಟ್ಟ ಖಾತೆ ಮೂಲಕ ಸಮಾಧಾನಕರ ಸೇವೆಯನ್ನು ನೀಡಿದೆ. ಎಲ್ಲಿ ನಮಗೆ ಗೌರವ ಇರುತ್ತದೋ ಅಲ್ಲಿರುತ್ತೇವೆ. ಸದ್ಯಕ್ಕೆ ಪಕ್ಷದ ಬಗ್ಗೆ ನನಗೆ ಬೇಸರವಿಲ್ಲ. ಆದರೆ, ಪಕ್ಷದ ಚುಕ್ಜಾಣಿ ಹಿಡಿದ ನಾಯಕರ ಬಗ್ಗೆ ಬೇಸರವಿದೆ ಎಂದರು.
ಪಕ್ಷದಲ್ಲಿ ಚುಕ್ಕಾಣಿ ಹಿಡಿದವರಿಗಿಂತ ನಾನು ಸೀನಿಯರ್. ಅಂದು ಟಿಕೆಟ್ ತಪ್ಪಿಸಿದಾಗ ಸೌಜನ್ಯಕ್ಕೆ ಒಂದು ಮಾತೂ ಹೇಳಲಿಲ್ಲ.. ನಾನು ಅದನ್ನು ನಿರೀಕ್ಷೆ ಮಾಡಿಯೂ ಇರಲಿಲ್ಲ. ಆದರೆ ಅವರ ಈ ವರ್ತನೆ ಎಷ್ಟು ಸರಿ ? ಈ ಸಮಯದಲ್ಲಿ ನನ್ನ ರೀತಿ ಅನೇಕರನ್ನು ನಡೆಸಿಕೊಂಡಿದ್ದಾರೆ. ಪಕ್ಷದ ಚುಕ್ಕಾಣಿ ಹಿಡಿದವರು ಮನುಷ್ಯತ್ವ, ಮಾನವೀಯತೆ ಇಟ್ಟು ನಡೆಯಬೇಕಾಗುತ್ತದೆ. ನಾನು ಕೈಗೊಳ್ಖುವ ತೀರ್ಮಾನಕ್ಕೆ ಬೆಂಬಲಿಗರು ಜೊತೆ ನಿಲ್ಲಲಿದ್ದಾರೆ ಎಂಬ ವಿಶ್ವಾಸವಿದೆ. ಮುಂದಿನ ತಿಂಗಳು ದೊಡ್ಡ ಸಮಾವೇಶ ಮಾಡಲಾಗುತ್ತದೆ. ಐತಿಹಾಸಿಕ ನಿರ್ಣಯ ಕೈಗೊಳ್ಳುವ ದಾರಿಯಲ್ಲಿದ್ದೇನೆ. ಅವರು ಈಗ ಭ್ರಮೆಯಲ್ಲಿರಬಹುದು. ಅವರಿಗೆ ಮುಂದೆ ಅರಿವಿಗೆ ಬರಲಿದೆ ಎಂದು ಡಿ.ಕೆ ಶಿವಕುಮಾರ್ ಹೆಸರು ಪ್ರಸ್ತಾಪಿಸದೆ ಸೀತಾರಾಂ ಆಕ್ರೋಶ ವ್ಯಕ್ತಪಡಿಸಿದರು.