ಶಿವಮೊಗ್ಗ: ನಾವು ರಾಜ್ಯದಲ್ಲಿ ಸ್ವಂತ ಶಕ್ತಿಯ ಮೇಲೆ ಅಧಿಕಾರದಲ್ಲಿದ್ದೇವೆ. ಬಿಜೆಪಿಗೆ ಜೆಡಿಎಸ್ ಅನಿವಾರ್ಯವಲ್ಲ. ಅದರೆ ಜೆಡಿಎಸ್ ಗೆ ಯಾವ ಅನಿವಾರ್ಯತೆ ಇದೆಯೋ ನನಗೆ ಗೊತ್ತಿಲ್ಲ. ನಾವಂತೂ ಸ್ವತಂತ್ರವಾಗಿ ಸ್ಫರ್ಧೆ ಮಾಡುತ್ತೇವೆ ಹಾಗೂ ಗೇಲ್ಲುತ್ತೇವೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ರಾಷ್ಟ್ರಮಟ್ಟದಲ್ಲಿ ಮೋದಿಯವರ ವರ್ಚಸ್ಸು ಹಾಗೂ ಕಾರ್ಯಕರ್ತರ ಶ್ರಮವಿದೆ. ರಾಜ್ಯದಲ್ಲಿ ಬಿ ಎಸ್ ಯಡಿಯೂರಪ್ಪ ಸರ್ಕಾರ ಹಾಗೂ ನಾಯಕರುಗಳು ಕೆಲಸ ಮಾಡುತ್ತಿದ್ದಾರೆ. ಗ್ರಾಮ ಪಂಚಾಯತ್ ಚುನಾವಣೆ ಸೇರಿದಂತೆ ತಾ.ಪಂ ಹಾಗೂ ಜಿ.ಪಂನಲ್ಲಿ ಹೆಚ್ಚಿನ ಸ್ಥಾನ ಗೇಲ್ಲುತ್ತೇವೆ. 2023 ರಲ್ಲಿ ಬಿಜೆಪಿ ಮತ್ತೋಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದರು.
ಸಚಿವ ಸಂಪುಟ ಪುನಾರಚನೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವಾಣಿಜ್ಯ ನಗರ ದಾವಣಗೆರೆ ಇತಿಹಾಸ ಹೊಂದಿದ್ದು, ಒಂದು ಅವಕಾಶ ಕೊಡಿ ಎಂದಿದ್ದೇವೆ. ಈ ಬಗ್ಗೆ ದಾರಿಯಲ್ಲಿ, ಬೀದಿಯಲ್ಲಿ ಮಾತನಾಡಿದರೆ ಸರಿಯಾಗಲ್ಲ. ಈ ಬಗ್ಗೆ ಸಿಎಂ ಹಾಗೂ ಕೇಂದ್ರದ ನಾಯಕರು ತೀರ್ಮಾನ ಮಾಡುತ್ತಾರೆ. ಅದಕ್ಕೆ ನಾನು ಬದ್ಧ ಎಂದರು.
ಇದನ್ನೂ ಓದಿ:ಕಾಂಗ್ರೆಸ್, ಮುಸ್ಲಿಂ ಲೀಗ್ ಬಿಟ್ಟು ಯಾರೇ ಬೆಂಬಲ ನೀಡಿದರೂ ಅಭ್ಯಂತರವಿಲ್ಲ: ಈಶ್ವರಪ್ಪ
ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಕಿಡಿಕಾರಿದ ರೇಣುಕಾಚಾರ್ಯ, ಒಂದು ಸಂಘಟನೆಗಳು ಬೇರೆಯವರಿಗೆ ಆದರ್ಶವಾಗಿರಬೇಕು. ಅದರ ಹೆಸರಿನಲ್ಲಿ ವಂಚನೆ, ಬ್ಲಾಕ್ ಮೇಲ್ ಮಾಡೋದು ಸರಿಯಲ್ಲ. ರೈತರಿಗೆ ಹಣ ಕೊಡಿಸುವುದಾಗಿ ಕೋಡಿಹಳ್ಳಿ ವಂಚನೆ ಮಾಡಿ, ಲೂಟಿ ಹೊಡೆದಿದ್ದಾರೆ. ರೈತರ ಜೊತೆಗೆ ಈಗ ಕೆಎಸ್ಆರ್ಟಿಸಿ ನೌಕರರಿಗೂ ವಂಚನೆ ಮಾಡಿದ್ದಾರೆ. ಹುಚ್ಚುಚ್ಚಾಗಿ ಹಾಗೂ ಹತಾಶ ಭಾವನೆಯಿಂದ ಮಾತಾನಾಡುತ್ತಿದ್ದಾರೆ. ದಲ್ಲಾಳಿ ಮುಖ್ಯಸ್ಥರ ಜೊತೆ ರೈತರು ಬರಬೇಡಿ. ನಿಮ್ಮ ಸಮಸ್ಯೆ ಇದ್ದರೇ ನೇರವಾಗಿ ಹೇಳಿಕೊಳ್ಳಿ ಎಂದು ಹೇಳಿದರು.