Advertisement

ನೆಟ್ಟಿಗರ ಕುತೂಹಲಕ್ಕೆ ಕಾರಣವಾಗಿತ್ತು ಪ್ರಧಾನಿ ಮೋದಿ ಕೈಯಲ್ಲಿದ್ದ ವಸ್ತು..! ಏನದು ?

10:06 AM Oct 14, 2019 | Mithun PG |

ಚೆನ್ನೈ: ಮಹಾಬಲಿಪುರಂ ಸಾಗರ ತೀರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೆಕ್ಕುವ ಮೂಲಕ ಪ್ರಧಾನಿ ಮೋದಿ ದೇಶದ ಜನರ ಮೆಚ್ಚುಗೆಗೆ ಪಾತ್ರವಾಗಿದ್ದರು. ಆ ವೇಳೆಯಲ್ಲಿ ಪ್ರಧಾನಿ ಮೋದಿ ಕೈಯಲ್ಲಿದ್ದ ವಸ್ತುವೊಂದು ನೆಟ್ಟಿಗರ ಕುತೂಹಲಕ್ಕೆ ಗುರಿಯಾಗಿತ್ತು. ಇದೀಗ ಪ್ರಧಾನಿ ಆ ವಸ್ತುವಿನ  ಬಗ್ಗೆ ತಮ್ಮ  ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Advertisement

ಭಾರತ ಮತ್ತು ಚೀನಾ ದೇಶದ ಮಹಾ ನಾಯಕರಾದ ಪ್ರಧಾನಿ ಮೋದಿ ಮತ್ತು ಕ್ಸಿ ಜಿನ್ ಪಿಂಗ್ ಅವರ ಸ್ನೇಹ ಸಮ್ಮೀಲನಕ್ಕೆ ತಮಿಳುನಾಡಿನ ಮಹಾಬಲಿಪುರಂ ಸಾಕ್ಷಿಯಾಗಿತ್ತು. ಶನಿವಾರ ಮುಂಜಾವ ಪ್ರಧಾನಿ ಮೋದಿ ಅವರು ಬೀಚ್‌ನಲ್ಲಿ ವಾಕಿಂಗ್ ಮಾಡುತ್ತಿದ್ದ ವೇಳೆ  ಅಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಕವರ್ ಮತ್ತು ಬಾಟಲಿಗಳನ್ನು ಹೆಕ್ಕಿ ತೆಗೆದಿದ್ದಾರೆ. ಈ ವಿಡಿಯೋ ವನ್ನು ತಮ್ಮ ಟ್ಟಿಟ್ಟರ್ ಖಾತೆಯಲ್ಲೂ ಹಂಚಿಕೊಂಡಿದ್ದರು.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಆ ವೇಳೆ ಪ್ರಧಾನಿ ಮೋದಿ ಕೈಯಲ್ಲಿದ್ದ ವಸ್ತುವೊಂದು ನೆಟ್ಟಿಗರ ಆಕರ್ಷಣೆಗೆ ಗುರಿಯಾಗಿ ಅದರ ಕುರಿತು ವಿಚಾರಿಸಿದ್ದರು. ಸಾಮಾಜಿಕ ಜಾಲಾತಾಣಿಗರ ಕೂತೂಲವನ್ನು ತಣಿಸಿದ  ಮೋದಿ ಅದರ ಕುರಿತು ಮಾಹಿತಿ ನೀಡಿದ್ದಾರೆ.

ಅದೊಂದು ಆಕ್ಯುಪ್ರೆಶರ್ ರೋಲರ್ ಆಗಿದ್ದು  ಶಾಖ ನೀಡುತ್ತಾ ರಕ್ತಪರಿಚಲನೆಯನ್ನು ಸುಗಮವಾಗಿಸುವುದರ ಜೊತೆಗೆ ಒತ್ತಡ ಮತ್ತು ಉದ್ವೇಗವನ್ನು ನಿವಾರಿಸುವ ಕೆಲಸ ಮಾಡುತ್ತದೆ, ಕೈ ಮತ್ತು ಕಾಲುಗಳಲ್ಲಿನ ಸಾವಿರಾರು ನರಗಳನ್ನು ಉತ್ತೇಜಿಸುವ ಮೂಲಕ ದೇಹದಲ್ಲಿನ ರಕ್ತದ ಹರಿವು ಹೆಚ್ಚಾಗುವಂತೆ ಮಾಡುತ್ತದೆ ಎಂದು ತಿಳಿಸಿದ್ದಾರೆ.

Since yesterday, many of you have been asking – what is it that I was carrying in my hands when I went plogging at a beach in Mamallapuram.

Advertisement

It is an acupressure roller that I often use. I have found it to be very helpful. pic.twitter.com/NdL3rR7Bna

— Narendra Modi (@narendramodi) October 13, 2019

Advertisement

Udayavani is now on Telegram. Click here to join our channel and stay updated with the latest news.

Next