Advertisement
ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟ್ವಿಟ್ಟರ್‌ನಲ್ಲಿ ವಾಗ್ಧಾಳಿ ನಡೆಸಿದ್ದರಸಂಬಂಧ ನಗರದ ಕಾಂಗ್ರೆಸ್‌ಕಚೇರಿಯಲ್ಲಿ ಭಾನುವಾರ ಮಧ್ಯಾಹ್ನ ಸುದ್ದಿಗೋಷ್ಠಿನಡೆಸಿ ಮಾತನಾಡಿದ ಅವರು, ಇಡೀ ದೇಶದಲ್ಲಿ ಇದೇ ಮೊದಲಿಗೆ ವಿರೋಧ ಪಕ್ಷವೊಂದನ್ನು ಮತ್ತೂಂದು ವಿರೋಧ ಪಕ್ಷ ಟೀಕಿಸುವ, ಆರೋಪ ಮಾಡುತ್ತಿರುವುದು ರಾಜ್ಯದಲ್ಲಿ ನಡೆಯುತ್ತಿದೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಆಡಳಿತಪಕ್ಷದ ಜನ ವಿರೋಧಿ ನೀತಿ ವಿರೋಧಿಸುವ ಬದಲು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿ ಅಸಂಸದೀಯ ಪದ ಬಳಕೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
Related Articles
Advertisement
ಫ್ಯಾಮಿಲಿ ಟ್ರಸ್ಟ್ ಎಂಬುದು ಸ್ಪಷ್ಟವಾಗಿದೆ :
ಕುಮಾರಸ್ವಾಮಿ ಅವರು ಒಕ್ಕಲಿಗರನ್ನು ಗುತ್ತಿಗೆ ತೆಗೆದುಕೊಂಡಿಲ್ಲ. ಒಕ್ಕಲಿಗರಿಗೆ ಜೆಡಿಎಸ್ ಫ್ಯಾಮಿಲಿಟ್ರಸ್ಟ್ ಎಂಬುದು ಸ್ಪಷ್ಟವಾಗಿದೆ. ರಾಮನಗರ,ಚನ್ನಪಟ್ಟಣ ಕ್ಷೇತ್ರದಲ್ಲಿ ನಿಮ್ಮ ಕುಟುಂಬದವರ ಬದಲಿಗೆಒಕ್ಕಲಿಗ ಸಮುದಾಯ ಮುಖಂಡರಿಗೆ ಟಿಕೆಟ್ ನೀಡಿಎಂದು ಸವಾಲು ಹಾಕಿದ ಅವರು, ಜೆಡಿಎಸ್‌ನಲ್ಲಿ ನಿಮ್ಮಮುಂದೆ ಮತ್ತೂಬ್ಬ ಒಕ್ಕಲಿಗ ನಾಯಕನನ್ನು ಬೆಳೆಯಲುಬಿಟ್ಟಿಲ್ಲ. ಕಂತ್ರಿ ರಾಜಕಾರಣ ಮಾಡುತ್ತಿರುವವರುಯಾರು ಎಂಬುದು ಜನರಿಗೆ ಗೊತ್ತಿದೆ. ಹೀಗಾಗಿಶೇ.80 ಮಂದಿ ಒಕ್ಕಲಿಗ ಸಮುದಾಯ ಜೆಡಿಎಸ್‌ನಿಂದ ದೂರವಾಗಿದೆ ಎಂದು ಲಕ್ಷ್ಮಣ್ ದೂರಿದರು.
ಬಿಜೆಪಿಗೆ ಕನ್ನಡ ಭಾಷೆ ಮೇಲೆಅಸಡ್ಡೆ. 2008ರಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನನೀಡಿತ್ತು. ಆದರೆ ಇಲ್ಲಿಯವರೆಗೆ ಸ್ವಂತಕಟ್ಟಡ ಸಿಕ್ಕಿಲ್ಲ. ಸಂಸ್ಕೃತ ಭಾಷೆಗೆ 1200 ಕೋಟಿ, ತೆಲುಗು ಭಾಷೆಗೆ 75ಕೋಟಿ, ತಮಿಳು ಭಾಷೆಗೆ 50ನೀಡಿರುವ ಕೇಂದ್ರ ಸರ್ಕಾರ, ಕನ್ನಡಭಾಷೆಗೆ ಕೇವಲ 08 ಕೋಟಿ ನೀಡುವಮೂಲಕ ಕರ್ನಾಟಕವನ್ನು ಕಡೆಗಣಿಸುತ್ತಲೇ ಬಂದಿದೆ. – ಎಂ.ಲಕ್ಷ್ಮಣ್, ಕೆಪಿಸಿಸಿ ವಕ್ತಾರ