Advertisement

ಧರ್ಮ ವಿಭಜನೆ ಕಿಚ್ಚು ನಡುವೆ ಹಣಾಹಣಿ

06:20 AM May 07, 2018 | |

ಶಾಶ್ವತ ಬರದ ಹಣೆಪಟ್ಟಿ ಹೊತ್ತ ವಿಜಯಪುರ ಜಿಲ್ಲೆಯಲ್ಲೀಗ ಜೀವಜಲ ಸದ್ದು ಮಾಡತೊಡಗಿದೆ. ಬಬಲೇಶ್ವರ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಬಬಲೇಶ್ವರ ಕ್ಷೇತ್ರದಲ್ಲಿ ಜೀವಜಲ ಚುನಾವಣೆಯ ಮೊದಲ ವಿಷಯವಾಗಿದ್ದರೆ, ಲಿಂಗಾಯತ- ವೀರಶೈವ ವಿವಾದ ಎರಡನೇ ಸ್ಥಾನ ಪಡೆದಿದೆ. 

Advertisement

ಲಿಂಗಾಯತ ಪ್ರತ್ಯೇಕ ಹೋರಾಟದಲ್ಲಿ ಎಂ.ಬಿ. ಪಾಟೀಲ ಮುಂಚೂಣಿ ನಾಯಕರಾಗಿದ್ದರಿಂದಾಗಿ ಅವರು ಸ್ಪರ್ಧಿಸಿರುವ ಬಬಲೇಶ್ವರ ಕ್ಷೇತ್ರ ರಾಜ್ಯದ ಕೆಲವೇ ಕೆಲವು ಹೈವೋಲ್ಟೆàಜ್‌ ಕ್ಷೇತ್ರದ ರೂಪ ಪಡೆದಿದೆ. ಕಾಂಗ್ರೆಸ್‌ ಅಭ್ಯರ್ಥಿ ಸಚಿವ ಎಂ.ಬಿ. ಪಾಟೀಲರಿಗೆ ಬಿಜೆಪಿಯಿಂದ ವಿಜುಗೌಡ ಪಾಟೀಲ ತೀವ್ರ ಪೈಪೋಟಿ ನೀಡುತ್ತಿದ್ದಾರೆ. 

ಜೀವಜಲದ ಕಳೆ: ಬಬಲೇಶ್ವರ ಕ್ಷೇತ್ರ 
ವ್ಯಾಪ್ತಿಯ ಅನೇಕ ಕಡೆ ಕೆರೆ, ಕಾಲುವೆ ರೂಪದಲ್ಲಿ ಜೀವಜಲ ಹರಿದಾಡಿದ್ದು, ಸಹಜವಾಗಿಯೇ ರೈತರು ಹಾಗೂ ಜನರ ಮೊಗದಲ್ಲಿ ಕಳೆ ಮೂಡಿಸಿದೆ ಎಂಬುದು ಅಲ್ಲಿನ ಜನರ ಮಾತುಗಳಿಂದ ವ್ಯಕ್ತವಾಗುತ್ತಿದೆ. ಇದರ ಜತೆಯಲ್ಲಿಯೇ ನೀರು ಇಲ್ಲದ ಕಡೆ ಹಾಗೂ ನೀರು ನೀಡಿದ್ದರೂ ಸಮರ್ಪಕ ವಿತರಣೆ ವ್ಯವಸ್ಥೆ ಇಲ್ಲದ ಕಡೆ ಆಕ್ರೋಶವೂ ವ್ಯಕ್ತವಾಗುತ್ತಿದೆ.

ಅವಿಭಜಿತ ವಿಜಯಪುರ ಜಿಲ್ಲೆ ಐದು ನದಿಗಳನ್ನು ಹೊಂದಿದ್ದು, ವಿಶ್ವಕ್ಕೆ ಮಾದರಿ ನೀರು ಸರಬರಾಜು ವ್ಯವಸ್ಥೆ, ನೂರಾರು ಕೆರೆಗಳನ್ನು ಹೊಂದಿದ್ದರೂ ನೀರಿಗಾಗಿ ಪರದಾಡುವ, ಶಾಶ್ವತ ಬರ ಪ್ರದೇಶವೆಂಬ ಹಣೆಪಟ್ಟಿ ಹೊತ್ತಿತ್ತು. ಕಳೆದೆರಡು ದಶಕಗಳಿಂದ ಕೆರೆಗೆ ನೀರು ತುಂಬಿಸುವ, ಆಲಮಟ್ಟಿ ಜಲಾಶಯ, ಕೃಷ್ಣಾ ಇನ್ನಿತರ ನದಿಗಳ ನೀರು ಬಳಸಿ ನೀರಾವರಿ ವ್ಯವಸ್ಥೆ ಕಲ್ಪಿಸುವ ಹೇಳಿಕೆ, ಘೋಷಣೆಗಳು ಭಾಷಣ, ಕಡತಗಳಿಗೆ ಸೀಮಿತವಾಗಿ ಜನರಲ್ಲೂ ಆಕ್ರೋಶ- ನಿರಾಸೆ ಛಾಯೆ ಮೂಡಿಸಿದ್ದವು. 

ಇದೀಗ ಅನೇಕ ಕೆರೆಗಳಲ್ಲಿ ಜೀವಜಲ ಮೈದಳೆದಿದೆ. ಬಬಲೇಶ್ವರ ಕೆರೆ, ಮಮದಾಪುರ ಕೆರೆ, ನಿಡೋಣಿ, ಸಂಗಾಪುರ, ತಿಕೋಟಾ ಸೇರಿ ಕ್ಷೇತ್ರ ವ್ಯಾಪ್ತಿಯ ಅನೇಕ ಕೆರೆಗಳಿಗೆ ನೀರು ಹರಿಸಲಾಗಿದ್ದು, ಅನೇಕ ಕಡೆ ಕಾಲುವೆಗಳ ನಿರ್ಮಾಣ ಕೈಗೊಂಡು ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ. 20 ವರ್ಷಗಳಿಂದ ಕೊಳವೆ ಬಾವಿಗೆ ನೀರಿಲ್ಲದೆ, ಕೊಳವೆ ಬಾವಿ ಕೊರೆಸಲು ಹಾಗೂ ನಷ್ಟಕ್ಕೆ 10 ಎಕರೆ ಹೊಲ ಕಳೆದುಕೊಂಡಿದ್ದೆ. ಇದೀಗ ಕೆರೆ ತುಂಬಿದ್ದರಿಂದ ಕೊಳವೆ ಬಾವಿ ಮರು ಪೂರಣಗೊಂಡಿದೆ ಎಂಬುದು ಬಬಲೇಶ್ವರದ ರೈತರಾದ ಮಲ್ಲಪ್ಪ ಶಿರೋಳ, ಶಿವಾಜಿ ಶಿರೋಳ ಅವರ ಅನಿಸಿಕೆ.

Advertisement

ಕಳೆದೆರಡು ವರ್ಷಗಳಿಂದ ಆಗಿರುವ ಅಭಿವೃದ್ಧಿ ಗಮನಾರ್ಹವಾಗಿದೆ. ರಸ್ತೆ, ಸಮುದಾಯ ಭವನ, ಮುಖ್ಯವಾಗಿ ರೈತರ ಹೊಲಗಳಿಗೆ ನೀರು ಕಾಣುವ ಖುಷಿ ಇದೆ ಎಂಬುದು ಕಾಖಂಡಕಿಯ ನರಸಪ್ಪ ಶಿಗರಡ್ಡಿ, ಸೋಮಪ್ಪ ಸಿದ್ದರಡ್ಡಿ ಅವರ ಅಭಿಪ್ರಾಯ.

ನೀರಿಲ್ಲದ ಆಕ್ರೋಶ: ಬಬಲೇಶ್ವರ ಕ್ಷೇತ್ರದಲ್ಲಿ ಅನೇಕ ಗ್ರಾಮಗಳಲ್ಲಿ ನೀರು ದೊರಕಿದ ಸಂತಸ ಇದ್ದರೆ ಇನ್ನಷ್ಟು ಹಳ್ಳಿಗಳಲ್ಲಿ ನೀರು ದೊರಕದಿರುವ, ನೀರಿದ್ದರೂ ಅದನ್ನು ಸಮರ್ಪಕವಾಗಿ ವಿತರಣೆ ವ್ಯವಸ್ಥೆ ಇಲ್ಲದೆ, ಕೆಲವೇ ಕೆಲವರ ಪಾಲಾಗುತ್ತಿರುವ ಆಕ್ರೋಶವೂ ವ್ಯಕ್ತವಾಗುತ್ತಿದೆ. ಬಿಜ್ಜರಗಿ ಗ್ರಾಮದಲ್ಲಿ ಕುಡಿಯುವ ನೀರಿಗೆ ಇಂದಿಗೂ ಸಂಕಷ್ಟ ಪಡಬೇಕಾಗಿದೆ. 10 ವರ್ಷಗಳಿಂದ ನಮ್ಮ ಗೋಳು ಕೇಳ್ಳೋರು ಯಾರೂ ಇಲ್ಲ. ಸಚಿವ ಎಂ.ಬಿ.ಪಾಟೀಲ ಮುಖ ತೋರಿಸಿಲ್ಲ ಎಂಬ ಆಕ್ರೋಶ ಬಿಜ್ಜರಗಿ ಗ್ರಾಮಸ್ಥರದು.

10 ರೂ.ಗೆ ಒಂದು ಕೊಡ: ತಿಕೋಟಾದಲ್ಲಿ ಕೆರೆ ತುಂಬಿದ್ದರೂ ನೀರಿನ ಸಮಸ್ಯೆ ಸಂಪೂರ್ಣವಾಗಿ ನೀಗಿಲ್ಲ. ನೀರು ತುಂಬಿದ್ದರೂ ಅದನ್ನು ಸರಬರಾಜು ಮಾಡುವ ವ್ಯವಸ್ಥೆ ಇಲ್ಲವಾಗಿದೆ. ಕೆರೆಯ ನೀರು ತರಬೇಕೆಂದರೆ ಕೆಲವರು 10 ರೂ.ಗೆ ಒಂದು ಕೊಡದಂತೆ ಮಾರಾಟ ಮಾಡುತ್ತಾರೆ ಎಂಬುದು ತಿಕೋಟಾದ ಬಸವೇಶ್ವರ ವೃತ್ತದಲ್ಲಿನ ಬಂಡಿ ವ್ಯಾಪಾರಿಯೊಬ್ಬರ ಅಳಲು.

ನೀರು ಕೊಡದಿದ್ರ ಎಲ್ಯಾರ ಯಾಕ್‌ ಹೋಗÌಲ್ಲಾಕ್‌
ಕಾಲುವೆ ಮಾಡಿದ್ದಾರೆ. ನೀರು ಬರುವ ವಿಶ್ವಾಸವಿದೆ. ಕಾಲುವೆಗಾಗಿ ನಮ್ಮ ಹೊಲ, 70-80 ನಿಂಬೆ ಗಿಡ ಹೋಗಿವೆ. ಪರಿಹಾರ ಬಂದಿಲ್ಲ. ಕಾಲುವೆಯಿಂದ ನೀರು ಸಿಗುವ ವಿಶ್ವಾಸವಿದೆ. ನೀರು ನೀಡಿದ್ದಕ್ಕೆ ಅಭಿನಂದನೆಯೂ ಇದೆ. ಒಂದು ವೇಳೆ ನೀರು ಹರಿಸದಿದ್ದರೆ ಎಂ.ಬಿ.ಪಾಟೀಲ ಎಲ್ಯಾರ ಯಾಕ್‌ ಹೋಗÌಲ್ಲಾಕ್‌ ನಮಗೇನು ಎಂಬುದು ಸಾವಳಗಿ ಕುಟುಂಬ ಮಹಿಳೆಯಬ್ಬರ ಅನಿಸಿಕೆ.

– ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next