Advertisement

ಕೆಪಿಸಿಸಿ ಸಾರಥ್ಯ ವಿಚಾರ ಹೈಕಮಾಂಡ್ ಅಂಗಳದಲ್ಲಿ: ಎಂ.ಬಿ.ಪಾಟೀಲ್

10:09 AM Jan 27, 2020 | keerthan |

ವಿಜಯಪುರ: ಕೆಪಿಸಿಸಿ ಅಧ್ಯಕ್ಷರ ನೇಮಕ ಸಂದರ್ಭದಲ್ಲಿ ಉತ್ತರ ಕರ್ನಾಟಕಕ್ಕೆ ಆದ್ಯತೆ ನೀಡಬೇಕು ಎಂಬ ಆಗ್ರಹ‌ ಮಾಡಲಿದ್ದೇನೆಯೇ ಹೊರತು ನನ್ನನ್ನೇ‌ ಮಾಡಿ ಎಂದು ಲಾಬಿ ಮಾಡುವುದಿಲ್ಲ.  ಸದ್ಯ ವಿಷಯ ಹೈಕಮಾಂಡ್ ಅಂಗಳದಲ್ಲಿದೆ ಮಾಜಿ ಸಚಿವ ಎಂ.ಬಿ. ಪಾಟೀಲ್ ಹೇಳಿದರು.

Advertisement

ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಅನುಸರಿಸ‌ ಬೇಕಿರುವ ಕ್ರಮಗಳ ಕುರಿತು ಪಕ್ಷದ ವರಿಷ್ಠ ನಾಯಕಿ ಸೋನಿಯಾ ಗಾಂಧಿ ಸೇರಿದಂತೆ ಹೈಕಮಾಂಡ್ ಗಮನಕ್ಕೆ ತಂದಿದ್ದೇನೆ. ಕಾರ್ಯಾಧ್ಯಕ್ಷರ ಸಂಖ್ಯೆ ಹೆಚ್ಚಿಸಬೇಕು ಎಂಬುದು ಸಿದ್ದರಾಮಯ್ಯ ಅವರ ನಿಲುವಲ್ಲ. ಬದಲಾಗಿ ಇದು ಮಾಧ್ಯಮಗಳ ಸೃಷ್ಟಿ ಎಂದರು.

ಪ್ರತಿಪಕ್ಷದ ಸ್ಥಾನದಲ್ಲಿ ದಕ್ಷಿಣ ಕರ್ನಾಟಕದವರಿದ್ದಾರೆ ಈ ಹಿನ್ನೆಲೆ ಅಧ್ಯಕ್ಷ ಸ್ಥಾನವನ್ನು ಉತ್ತರ ಕರ್ನಾಟಕದವರಿಗೆ ನೀಡಬೇಕು ಎಂಬುದು ಎಲ್ಲರ ಬಯಕೆ. ಯಾವ ಜಾತಿ, ಸಮುದಾಯಕ್ಕೆ ಆದ್ಯತೆ ನೀಡಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ.

ಉತ್ತರ ಕರ್ನಾಟಕಕ್ಕೆ ಅಧ್ಯಕ್ಷ ಸ್ಥಾನ ನೀಡಬೇಕು ಸೇರಿದಂತೆ ನಾನಾ ಸಮೀಕರಣ ನಡೆಸಿ ಸಿದ್ಧರಾಮಯ್ಯ ನನ್ನ ಹೆಸರು ಶಿಫಾರಸು ಮಾಡಿದ್ದಾರೆ ಎಂದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ ನಿಭಾಯಿಸುವ ಸಾಮರ್ಥ್ಯ ನನಗಿದೆ. ಪ್ರತಿಪಕ್ಷದ ನಾಯಕನ ಸ್ಥಾನದ ಆಕಾಂಕ್ಷಿ ನಾನಲ್ಲ. ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಸಿದ್ಧರಾಮಯ್ಯ ಅವರೇ ಸೂಕ್ತ ಎಂಬುದು ನಾನು ಸೇರಿದಂತೆ ಎಲ್ಲರ ಬಯಕೆಯಾಗಿದೆ ಎಂದರು.

Advertisement

ಸರ್ಕಾರ ಅಸ್ಥಿರಗೊಳಿಸಲು ಕಾಂಗ್ರೆಸ್ ಪ್ರಯತ್ನಿಸಲ್ಲ. ತಾನಾಗಿಯೇ ಉರುಳುದರೆ ಏನೂ ಮಾಡಲು ಸಾಧ್ಯವಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next