ಲೂಪಸ್ ನೆಫ್ರೈಟಿಸ್‌ಗೆ ಚಿಕಿತ್ಸೆಯು ಉರಿಯೂತವನ್ನು ಕಡಿಮೆ ಮಾಡುವುದು, ಲಕ್ಷಣಗಳನ್ನು ನಿಯಂತ್ರಿಸುವುದು ಮತ್ತು ಮೂತ್ರಪಿಂಡಗಳ ಕಾರ್ಯಕ್ಷಮತೆಯನ್ನು ಸಂರಕ್ಷಿಸುವ ಗುರಿಯನ್ನು ಹೊಂದಿರುತ್ತದೆ. ಕಳೆದ 10 ವರ್ಷಗಳಲ್ಲಿ ಆಗಿರುವ ಅತ್ಯಾಧುನಿಕ ಬೆಳವಣಿಗೆಗಳು ಲೂಪಸ್ ನೆಫ್ರೈಟಿಸ್‌ಗೆ ಚಿಕಿತ್ಸೆಯ ಫಲಿತಾಂಶ ಸಾಕಷ್ಟು ಉತ್ತಮವಾಗುವುದಕ್ಕೆ ಕಾರಣವಾಗಿವೆ. ರುಮಟಾಲಜಿ ಸ್ಪೆಶಲಿಸ್ಟ್ ಜತೆಗೆ ಕ್ಲಪ್ತ ಕಾಲದಲ್ಲಿ ಸಮಾಲೋಚನೆ ನಡೆಸಿ ಚಿಕಿತ್ಸೆಯನ್ನು ಪಡೆದುಕೊಳ್ಳುವುದರಿಂದ ಸಹಜಕ್ಕೆ ನಿಕಟ ಜೀವನವನ್ನು ನಡೆಸುವುದಕ್ಕೆ ಸಾಧ್ಯವಿದೆ.
ಔಷಧಗಳು
Advertisement
– ಕಾರ್ಟಿಕೊಸ್ಟಿರಾಯ್ಡಗಳು: ಮೂತ್ರಪಿಂಡಗಳಲ್ಲಿ ಉರಿಯೂತವನ್ನು ತತ್‌ಕ್ಷಣ ನಿಯಂತ್ರಣಕ್ಕೆ ತರಲು ಈ ಔಷಧಗಳನ್ನು ಉಪಯೋಗಿಸಲಾಗುತ್ತದೆ. ಇದನ್ನು 6ರಿಂದ 9 ತಿಂಗಳುಗಳ ನಿರ್ದಿಷ್ಟ ಅವಧಿಗೆ ರುಮಟಾಲಜಿಸ್ಟ್ ಅವರ ವಿವೇಚನೆಯನ್ನು ಆಧರಿಸಿ ನೀಡಲಾಗುತ್ತದೆ. ಸ್ಟಿರಾಯ್ಡಗಳು ಜೀವಸಂರಕ್ಷಕ ಔಷಧಗಳಾದರೂ ಅವುಗಳ ದೀರ್ಘಕಾಲೀನ ಬಳಕೆಯಿಂದ ಸಮಸ್ಯೆಗಳು ಉಂಟಾಗಬಹುದಾಗಿದೆ.-ಇಮ್ಯುನೊಸಪ್ರಸೆಂಟ್‌ಗಳು: ದೀರ್ಘಕಾಲೀನ ನಿರ್ವಹಣೆಗಾಗಿ ಮೈಕೊಫಿನಲೇಟ್, ಅಝಾತಿಯೊಪ್ರಿನ್, ರಿಟುಕ್ಸಿಮಾಬ್ ಮತ್ತು ಸೈಕ್ಲೊಫಾಸ್ಮೊಮೈಡ್‌ಗಳನ್ನು ಉಪಯೋಗಿಸಬಹುದಾಗಿದೆ.
– ಆ್ಯಂಟಿಮಲೇರಿಯಲ್ ಔಷಧಗಳು: ಎಚ್‌ಸಿಕ್ಯು ಎಂಬುದು ಲೂಪಸ್ ನೆಫ್ರೈಟಿಸ್‌ಗೆ ತಳಪಾಯ ಔಷಧವಾಗಿದೆ. ಇದು ರೋಗಲಕ್ಷಣಗಳು ಆಗಾಗ ಉಲ್ಬಣಿಸುವುದನ್ನು ತಡೆಯುತ್ತದೆ ಮತ್ತು ಒಟ್ಟಾರೆ ಜೀವ ರಕ್ಷಣೆಯನ್ನು ಸುಧಾರಿಸುತ್ತದೆ.
ಜೀವನಶೈಲಿ ಬದಲಾವಣೆಗಳು
– ಆಹಾರಾಭ್ಯಾಸ: ಕಡಿಮೆ ಉಪ್ಪಿನಂಶ, ಹಣ್ಣು, ತರಕಾರಿಗಳು, ಇಡೀ ಧಾನ್ಯಗಳು ಹೆಚ್ಚು ಇರುವ ಆಹಾರ ಕ್ರಮವು ಮೂತ್ರಪಿಂಡಗಳ ಆರೋಗ್ಯಕ್ಕೆ ನೆರವಾಗುತ್ತದೆ. ಸಂಸ್ಕರಿತ ಸಕ್ಕರೆ, ಅತಿಯಾಗಿ ಕರಿದ ಆಹಾರವಸ್ತುಗಳು ಮತ್ತು ಕೆಂಪು ಮಾಂಸ ಸೇವನೆಯನ್ನು ವರ್ಜಿಸುವುದು ಅತ್ಯಗತ್ಯವಾಗಿದೆ.
– ನಿಯಮಿತವಾದ ವ್ಯಾಯಾಮ: ಇದು ದೇಹತೂಕ ಮತ್ತು ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
– ದ್ರವಾಂಶ: ದೇಹದಲ್ಲಿ ಸಾಕಷ್ಟು ದ್ರವಾಂಶ ಕಾಪಾಡಿಕೊಳ್ಳುವುದು ಮೂತ್ರಪಿಂಡಗಳ ಕಾರ್ಯನಿರ್ವಹಣೆಗೆ ನೆರವಾಗುತ್ತದೆ.
ಲೂಪಸ್ ನೆಫ್ರೈಟಿಸ್‌ಗೆ ಚಿಕಿತ್ಸೆಯು ಉತ್ತಮ ಫಲಿತಾಂಶ ಪಡೆಯುವುದಕ್ಕೆ ಶೀಘ್ರ ಪತ್ತೆ ಮತ್ತು ಕ್ಲಪ್ತ ಕಾಲದಲ್ಲಿ ಚಿಕಿತ್ಸೆ ಮುಖ್ಯವಾಗಿದೆ. ಬಹುತೇಕ ರೋಗಿಗಳಲ್ಲಿ ಲಕ್ಷಣಗಳು ಪ್ರಕಟವಾಗದೆ ಇರುವಾಗಲೇ ಲೂಪಸ್ ನೆಫ್ರೈಟಿಸ್ ಆರಂಭವಾಗಿರುತ್ತದೆ. ಆದ್ದರಿಂದ ರುಮಟಾಲಜಿಸ್ಟ್ ಬಳಿ ನಿಯಮಿತವಾಗಿ ತಪಾಸಣೆಗೆ ಒಳಗಾಗುವುದು ರೋಗವನ್ನು ಆರಂಭಿಕ ಹಂತಗಳಲ್ಲಿ ಪತ್ತೆಹಚ್ಚುವುದಕ್ಕೆ ಸಹಾಯವಾಗುತ್ತದೆ. ಪ್ರಸ್ತುತ ಕಾಲದಲ್ಲಿ ಇನ್ನಷ್ಟು ಉತ್ತಮ ಆಯ್ಕೆಗಳು ಲಭ್ಯವಿರುವುದರಿಂದ ದೀರ್ಘಕಾಲೀನ ಸ್ಟಿರಾಯ್ಡ ಚಿಕಿತ್ಸೆ ಉತ್ತಮವಲ್ಲ. ಆದರೂ ತಿಳಿವಳಿಕೆಯ ಕೊರತೆಯಿಂದಾಗಿ ಅನೇಕ ರೋಗಿಗಳು ಸೂಕ್ತವಾದ ಚಿಕಿತ್ಸೆಯಿಂದ ವಂಚಿತರಾಗುತ್ತಾರೆ ಮತ್ತು ರೋಗ ಸಾಕಷ್ಟು ಉಲ್ಬಣಗೊಂಡ ಬಳಿಕ ರುಮಟಾಲಜಿಸ್ಟ್‌ರನ್ನು ಸಂಪರ್ಕಿಸುತ್ತಾರೆ. ಗರ್ಭಧಾರಣೆ ಮತ್ತು ಲೂಪಸ್ ನೆಫ್ರೈಟಿಸ್
ಲೂಪಸ್ ನೆಫ್ರೈಟಿಸ್‌ಗೆ ತುತ್ತಾದವರು ಕೂಡ ಗರ್ಭಧಾರಣೆಯನ್ನು ಯೋಜಿಸಿಕೊಳ್ಳಬಹುದು ಮತ್ತು ಯಶಸ್ವಿ ಫಲಿತಾಂಶವನ್ನು ಪಡೆಯಬಹುದು. ಆದರೆ ರೋಗಕ್ಕೆ ಸಮರ್ಪಕವಾಗಿ ಚಿಕಿತ್ಸೆಯನ್ನು ಒದಗಿಸುತ್ತಿರಬೇಕು ಮತ್ತು ಕನಿಷ್ಠ 2 ವರ್ಷಗಳಿಂದ ಅದು ನಿಯಂತ್ರಣದಲ್ಲಿ ಇರಬೇಕು. ಗರ್ಭಧಾರಣೆಯ ಅವಧಿಯಲ್ಲಿ ಔಷಧವನ್ನು ನಿಲ್ಲಿಸಬಾರದು, ಆದರೆ ಗರ್ಭಧಾರಣೆಗೆ ಸುರಕ್ಷಿತ ಔಷಧಗಳಿಗೆ ಬದಲಾಯಿಸಿಕೊಳ್ಳಬೇಕು. ಯೋಜಿತ ಗರ್ಭಧಾರಣೆಗೆ ಕನಿಷ್ಠ 3 ತಿಂಗಳು ಮುನ್ನ ಈ ಬದಲಾವಣೆಯನ್ನು ಮಾಡಿಕೊಳ್ಳಬೇಕು. ಎಲ್ಲ ಲೂಪಸ್ ರೋಗಿಗಳು ಗರ್ಭಧಾರಣೆಗೆ ಯೋಜಿಸುವ ಮುನ್ನ ಎಪಿಎಲ್‌ಎ ಆ್ಯಂಟಿಬಾಡಿ ಪರೀಕ್ಷೆಗೆ ಒಳಗಾಗಬೇಕು.
Related Articles
Advertisement
ಲೂಪಸ್ ನೆಫ್ರೈಟಿಸ್‌ಗೆ ಚಿಕಿತ್ಸೆಯು ಉರಿಯೂತವನ್ನು ಕಡಿಮೆ ಮಾಡುವುದು, ಲಕ್ಷಣಗಳನ್ನು ನಿಯಂತ್ರಿಸುವುದು ಮತ್ತು ಮೂತ್ರಪಿಂಡಗಳ ಕಾರ್ಯಕ್ಷಮತೆಯನ್ನು ಸಂರಕ್ಷಿಸುವ ಗುರಿಯನ್ನು ಹೊಂದಿರುತ್ತದೆ. ಕಳೆದ 10 ವರ್ಷಗಳಲ್ಲಿ ಆಗಿರುವ ಅತ್ಯಾಧುನಿಕ ಬೆಳವಣಿಗೆಗಳು ಲೂಪಸ್ ನೆಫ್ರೈಟಿಸ್‌ಗೆ ಚಿಕಿತ್ಸೆಯ ಫಲಿತಾಂಶ ಸಾಕಷ್ಟು ಉತ್ತಮವಾಗುವುದಕ್ಕೆ ಕಾರಣವಾಗಿವೆ. ರುಮಟಾಲಜಿ ಸ್ಪೆಶಲಿಸ್ಟ್ ಜತೆಗೆ ಕ್ಲಪ್ತ ಕಾಲದಲ್ಲಿ ಸಮಾಲೋಚನೆ ನಡೆಸಿ ಚಿಕಿತ್ಸೆಯನ್ನು ಪಡೆದುಕೊಳ್ಳುವುದರಿಂದ ಸಹಜಕ್ಕೆ ನಿಕಟ ಜೀವನವನ್ನು ನಡೆಸುವುದಕ್ಕೆ ಸಾಧ್ಯವಿದೆ.
ಔಷಧಗಳು
ಕಾರ್ಟಿಕೊಸ್ಟಿರಾಯ್ಡಗಳು: ಮೂತ್ರಪಿಂಡಗಳಲ್ಲಿ ಉರಿಯೂತವನ್ನು ತತ್ ಕ್ಷಣ ನಿಯಂತ್ರಣಕ್ಕೆ ತರಲು ಈ ಔಷಧಗಳನ್ನು ಉಪಯೋಗಿಸಲಾಗುತ್ತದೆ. ಇದನ್ನು 6ರಿಂದ 9 ತಿಂಗಳುಗಳ ನಿರ್ದಿಷ್ಟ ಅವಧಿಗೆ ರುಮಟಾಲಜಿಸ್ಟ್ ಅವರ ವಿವೇಚನೆಯನ್ನು ಆಧರಿಸಿ ನೀಡಲಾಗುತ್ತದೆ. ಸ್ಟಿರಾಯ್ಡಗಳು ಜೀವಸಂರಕ್ಷಕ ಔಷಧಗಳಾದರೂ ಅವುಗಳ ದೀರ್ಘಕಾಲೀನ ಬಳಕೆಯಿಂದ ಸಮಸ್ಯೆಗಳು ಉಂಟಾಗಬಹುದಾಗಿದೆ.
ಇಮ್ಯುನೊಸಪ್ರಸೆಂಟ್‌ಗಳು: ದೀರ್ಘಕಾಲೀನ ನಿರ್ವಹಣೆಗಾಗಿ ಮೈಕೊಫಿನಲೇಟ್, ಅಝಾತಿಯೊಪ್ರಿನ್, ರಿಟುಕ್ಸಿಮಾಬ್ ಮತ್ತು ಸೈಕ್ಲೊಫಾಸ್ಫೊಮೈಡ್ ಗಳನ್ನು ಉಪಯೋಗಿಸಬಹುದಾಗಿದೆ.
ಆ್ಯಂಟಿಮಲೇರಿಯಲ್ ಔಷಧಗಳು: ಎಚ್‌ಸಿಕ್ಯು ಎಂಬುದು ಲೂಪಸ್ ನೆಫ್ರೈಟಿಸ್ ಗೆ ತಳಪಾಯ ಔಷಧವಾಗಿದೆ. ಇದು ರೋಗಲಕ್ಷಣಗಳು ಆಗಾಗ ಉಲ್ಬಣಿಸುವುದನ್ನು ತಡೆಯುತ್ತದೆ ಮತ್ತು ಒಟ್ಟಾರೆ ಜೀವ ರಕ್ಷಣೆಯನ್ನು ಸುಧಾರಿಸುತ್ತದೆ.
ಜೀವನಶೈಲಿ ಬದಲಾವಣೆಗಳು
ಆಹಾರಾಭ್ಯಾಸ: ಕಡಿಮೆ ಉಪ್ಪಿನಂಶ, ಹಣ್ಣು, ತರಕಾರಿಗಳು, ಇಡೀ ಧಾನ್ಯಗಳು ಹೆಚ್ಚು ಇರುವ ಆಹಾರ ಕ್ರಮವು ಮೂತ್ರಪಿಂಡಗಳ ಆರೋಗ್ಯಕ್ಕೆ ನೆರವಾಗುತ್ತದೆ. ಸಂಸ್ಕರಿತ ಸಕ್ಕರೆ, ಅತಿಯಾಗಿ ಕರಿದ ಆಹಾರವಸ್ತುಗಳು ಮತ್ತು ಕೆಂಪು ಮಾಂಸ ಸೇವನೆಯನ್ನು ವರ್ಜಿಸುವುದು ಅತ್ಯಗತ್ಯವಾಗಿದೆ.
ನಿಯಮಿತವಾದ ವ್ಯಾಯಾಮ: ಇದು ದೇಹತೂಕ ಮತ್ತು ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ದ್ರವಾಂಶ: ದೇಹದಲ್ಲಿ ಸಾಕಷ್ಟು ದ್ರವಾಂಶ ಕಾಪಾಡಿಕೊಳ್ಳುವುದು ಮೂತ್ರಪಿಂಡಗಳ ಕಾರ್ಯನಿರ್ವಹಣೆಗೆ ನೆರವಾಗುತ್ತದೆ.
ದೀರ್ಘಕಾಲೀನ ಫಲಿತಾಂಶಗಳು ಲೂಪಸ್ ನೆಫ್ರೈಟಿಸ್‌ಗೆ ಚಿಕಿತ್ಸೆಯು ಉತ್ತಮ ಫಲಿತಾಂಶ ಪಡೆಯುವುದಕ್ಕೆ ಶೀಘ್ರ ಪತ್ತೆ ಮತ್ತು ಕ್ಲಪ್ತ ಕಾಲದಲ್ಲಿ ಚಿಕಿತ್ಸೆ ಮುಖ್ಯವಾಗಿದೆ. ಬಹುತೇಕ ರೋಗಿಗಳಲ್ಲಿ ಲಕ್ಷಣಗಳು ಪ್ರಕಟವಾಗದೆ ಇರುವಾಗಲೇ ಲೂಪಸ್ ನೆಫ್ರೈಟಿಸ್ ಆರಂಭವಾಗಿರುತ್ತದೆ. ಆದ್ದರಿಂದ ರುಮಟಾಲಜಿಸ್ಟ್ ಬಳಿ ನಿಯಮಿತವಾಗಿ ತಪಾಸಣೆಗೆ ಒಳಗಾಗುವುದು ರೋಗವನ್ನು ಆರಂಭಿಕ ಹಂತಗಳಲ್ಲಿ ಪತ್ತೆಹಚ್ಚುವುದಕ್ಕೆ ಸಹಾಯವಾಗುತ್ತದೆ. ಪ್ರಸ್ತುತ ಕಾಲದಲ್ಲಿ ಇನ್ನಷ್ಟು ಉತ್ತಮ ಆಯ್ಕೆಗಳು ಲಭ್ಯವಿರುವುದರಿಂದ ದೀರ್ಘಕಾಲೀನ ಸ್ಟಿರಾಯ್ಡ ಚಿಕಿತ್ಸೆ ಉತ್ತಮವಲ್ಲ. ಆದರೂ ತಿಳಿವಳಿಕೆಯ ಕೊರತೆಯಿಂದಾಗಿ ಅನೇಕ ರೋಗಿಗಳು ಸೂಕ್ತವಾದ ಚಿಕಿತ್ಸೆಯಿಂದ ವಂಚಿತರಾಗುತ್ತಾರೆ ಮತ್ತು ರೋಗ ಸಾಕಷ್ಟು ಉಲ್ಬಣಗೊಂಡ ಬಳಿಕ ರುಮಟಾಲಜಿಸ್ಟ್‌ರನ್ನು ಸಂಪರ್ಕಿಸುತ್ತಾರೆ.
ಗರ್ಭಧಾರಣೆ ಮತ್ತು ಲೂಪಸ್ ನೆಫ್ರೈಟಿಸ್ ಲೂಪಸ್ ನೆಫ್ರೈಟಿಸ್‌ಗೆ ತುತ್ತಾದವರು ಕೂಡ ಗರ್ಭಧಾರಣೆಯನ್ನು ಯೋಜಿಸಿಕೊಳ್ಳಬಹುದು ಮತ್ತು ಯಶಸ್ವಿ ಫಲಿತಾಂಶವನ್ನು ಪಡೆಯಬಹುದು. ಆದರೆ ರೋಗಕ್ಕೆ ಸಮರ್ಪಕವಾಗಿ ಚಿಕಿತ್ಸೆಯನ್ನು ಒದಗಿಸುತ್ತಿರಬೇಕು ಮತ್ತು ಕನಿಷ್ಠ 2 ವರ್ಷಗಳಿಂದ ಅದು ನಿಯಂತ್ರಣದಲ್ಲಿ ಇರಬೇಕು. ಗರ್ಭಧಾರಣೆಯ ಅವಧಿಯಲ್ಲಿ ಔಷಧವನ್ನು ನಿಲ್ಲಿಸಬಾರದು, ಆದರೆ ಗರ್ಭಧಾರಣೆಗೆ ಸುರಕ್ಷಿತ ಔಷಧಗಳಿಗೆ ಬದಲಾಯಿಸಿಕೊಳ್ಳಬೇಕು. ಯೋಜಿತ ಗರ್ಭಧಾರಣೆಗೆ ಕನಿಷ್ಠ 3 ತಿಂಗಳು ಮುನ್ನ ಈ ಬದಲಾವಣೆಯನ್ನು ಮಾಡಿಕೊಳ್ಳಬೇಕು. ಎಲ್ಲ ಲೂಪಸ್ ರೋಗಿಗಳು ಗರ್ಭಧಾರಣೆಗೆ ಯೋಜಿಸುವ ಮುನ್ನ ಎಪಿಎಲ್‌ಎ ಆ್ಯಂಟಿಬಾಡಿ ಪರೀಕ್ಷೆಗೆ ಒಳಗಾಗಬೇಕು.