ಮೌಗಂಜ್ (ಮಧ್ಯಪ್ರದೇಶ): ಸಬ್ ಇನ್ಸ್‌ಪೆಕ್ಟರ್ ಒಬ್ಬರು ಠಾಣೆಯಲ್ಲಿ ಲುಂಗಿ ಧರಿಸಿ ಮಹಿಳೆಯೊಬ್ಬರನ್ನು ಅಮಾನುಷವಾಗಿ ನಡೆಸಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ಕುರಿತು ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸಬ್ ಇನ್ಸ್‌ಪೆಕ್ಟರ್ ನನ್ನು ಶಿಕ್ಷೆಯಾಗಿ ಫೀಲ್ಡ್ ಡ್ಯೂಟಿಯಿಂದ ತೆಗೆದುಹಾಕಲಾಗಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ(ಅ27) ತಿಳಿಸಿದ್ದಾರೆ.
ಔಟ್ ಪೋಸ್ಟ್ ಇನ್ ಚಾರ್ಜ್ ಸಬ್ ಇನ್ಸ್‌ಪೆಕ್ಟರ್ ಬೃಹಸ್ಪತಿ ಪಟೇಲ್ (50) ಅವರು ಕರ್ತವ್ಯದಲ್ಲಿರುವಾಗ ಲುಂಗಿಯನ್ನು ಧರಿಸಿದರು. ದೂರು ನೀಡಲು ಬಂದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವುದನ್ನು ವಿಡಿಯೋ ದಲ್ಲಿ ಕಾಣಬಹುದು.
ಅಧಿಕಾರಿಯನ್ನು ‘ಲೈನ್ ಅಟ್ಯಾಚ್’ ಮಾಡಲಾಗಿದೆ ಎಂದು ರೇವಾ ರೇಂಜ್ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಸಾಕೇತ್ ಹೇಳಿದ್ದಾರೆ. ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ಔಟ್‌ಪೋಸ್ಟ್‌ನಲ್ಲಿ ನಡೆದ ಘಟನೆಯ ಕುರಿತು ಉನ್ನತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಮಹಿಳೆಯ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಬೃಹಸ್ಪತಿ ಪಟೇಲ್ ಮಹಿಳೆಯ ಮೇಲೆ ಕೂಗಾಡುವುದನ್ನು ಕಾಣಬಹುದು, ಹೊರಠಾಣೆಯಲ್ಲಿಇನ್ನೊಬ್ಬ ಮಹಿಳೆ ನೆಲದ ಮೇಲೆ ಕುಳಿತಿರುವುದನ್ನು ಕಾಣಬಹುದಾಗಿದೆ.