Advertisement

ಚಂದ್ರಗ್ರಹಣ: ಪೂಜೆ, ಸೇವೆ, ಅನ್ನಸಂತರ್ಪಣೆ ವ್ಯತ್ಯಯ

10:58 AM Jul 27, 2018 | Team Udayavani |

ಬೆಳ್ತಂಗಡಿ: ಶುಕ್ರವಾರ ರಾತ್ರಿಯಿಂದ ಶನಿವಾರ ಮುಂಜಾನೆ ವರೆಗೆ ಸಂಭವಿಸುವ ಈ ಶತಮಾನದ ಅತಿದೀರ್ಘ‌ ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ಕರಾವಳಿಯ ವಿವಿಧ ದೇವಸ್ಥಾನಗಳಲ್ಲಿ ಪೂಜೆ, ಸೇವೆ, ಅನ್ನಸಂತರ್ಪಣೆ ವ್ಯತ್ಯಯಗೊಳ್ಳಲಿದೆ.

Advertisement

ಧರ್ಮಸ್ಥಳ: ಶ್ರೀಕ್ಷೇತ್ರ ಧರ್ಮಸ್ಥಳ ದಲ್ಲಿ ದೇವರ ದರ್ಶನ, ಪೂಜೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಅನ್ನ ಪೂರ್ಣ ಛತ್ರದಲ್ಲಿ ಸಂಜೆ 6.30ರಿಂದ 8ರ ವರೆಗೆ ಅನ್ನದಾನ ನಡೆಯಲಿದೆ.

ಕಟೀಲು: ಕಟೀಲು ದೇವಸ್ಥಾನದಲ್ಲಿ ಅಪರಾಹ್ನ  2.50ರ ಅನಂತರ ಯಾವುದೇ ಸೇವೆ ಇರುವುದಿಲ್ಲ. ರಾತ್ರಿ ಪೂಜೆ ಮತ್ತು ಅನ್ನಪ್ರಸಾದ ಇರುವುದಿಲ್ಲ. ಆದರೆ ದೇವಸ್ಥಾನ ತೆರೆದಿದ್ದು, ಭಕ್ತರು ಭೇಟಿ ಕೊಡಬಹುದಾಗಿದೆ. ರಾತ್ರಿಯಿಂದ ಬೆಳಗ್ಗಿನ ತನಕ ಭಜನೆ ನಡೆಯಲಿದೆ. ಗ್ರಹಣ ಕಾಲದಲ್ಲಿ ದುರ್ಗೆಗೆ ಅಭಿಷೇಕ ನಡೆಯಲಿದೆ.

ಕುಂದಾಪುರ: ಕೊಲ್ಲೂರು, ಆನೆಗುಡ್ಡೆ, ಮಾರಣಕಟ್ಟೆ ದೇವಸ್ಥಾನಗಳಲ್ಲಿ ಜು. ಬೆಳಗ್ಗೆ, ಮಧ್ಯಾಹ್ನದವರೆಗೆ ಯಥಾ ಪ್ರಕಾರ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿಯ ಪೂಜೆಯಲ್ಲಿ ವ್ಯತ್ಯಾಸ ಮಾಡಲಾಗಿದೆ. 
ಕೊಲ್ಲೂರಿನಲ್ಲಿ ಪೂಜೆ ಎಂದಿನಂತೆ ಇರುತ್ತದೆ. ರಾತ್ರಿಯ ಅನ್ನಸಂತರ್ಪಣೆ ಇರುವುದಿಲ್ಲ. ಗ್ರಹಣ ಬಿಡುವಿನ ಬಳಿಕ ದೇವಿಗೆ ವಿಶೇಷ ಪೂಜೆ ನಡೆಯಲಿದೆ.  ಆನೆಗುಡ್ಡೆ ದೇವಸ್ಥಾನದಲ್ಲಿ ಮಧ್ಯಾಹ್ನ 12.30ರ ಮಹಾಪೂಜೆ 11.30ಕ್ಕೆ, 2.30ರ ವರೆಗಿನ ಅನ್ನ ಪ್ರಸಾದ ಸೇವೆ 1 ಗಂಟೆಯ ವರೆಗೆ ಮಾತ್ರ ನಡೆಯಲಿದೆ. ದರ್ಶನವಿದ್ದರೂ, ಯಾವುದೇ ಸೇವೆ ಇರುವುದಿಲ್ಲ. ರಾತ್ರಿಯ ಪೂಜೆ ಸಂಜೆ 6ಕ್ಕೆ ನೆರವೇರಲಿದೆ.
ಕಮಲಶಿಲೆಯಲ್ಲಿ ಎಂದಿನಂತೆ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಲಿದೆ. ಗ್ರಹಣ ಬಿಡುವಿನ ಬಳಿಕ ವಿಶೇಷ ಪೂಜೆ ಇರಲಿದೆ. ಮಾರಣಕಟ್ಟೆಯಲ್ಲಿ ಮಧ್ಯಾಹ್ನವರೆಗೆ ನಿತ್ಯ ಪೂಜಾ ವಿಧಿ ಅನ್ನಸಂತರ್ಪಣೆ ನಡೆಯಲಿದೆ. 1.30ರ ಅನಂತರ ದೇವರ ದರ್ಶನವಿದ್ದು, ಪೂಜೆ, ಸೇವೆ ಇರುವುದಿಲ್ಲ. ಹಟ್ಟಿಯಂಗಡಿಯಲ್ಲಿ ಎಂದಿನಂತೆ ಪೂಜಾ ಕೈಂಕರ್ಯ, ಅನ್ನದಾನ ಸೇವೆ ನೆರವೇರಲಿವೆ.

Advertisement

Udayavani is now on Telegram. Click here to join our channel and stay updated with the latest news.

Next