Advertisement

ನೈಜ ಘಟನೆ ಸುತ್ತ ಕುಥಸ್ಥ

08:26 AM Nov 02, 2019 | Team Udayavani |

ಸಿನಿಮಾ ಅನೇಕರಿಗೆ ಪ್ರೇರಣೆ ನಿಜ. ಅದು ಒಳ್ಳೆಯ ರೀತಿಯಲ್ಲಿ ಅಥವಾ ಕೆಟ್ಟ ರೀತಿಯಲ್ಲಾದರೂ ಆಗಿರಬಹುದು. ಸಿನಿಮಾದ ಒಳ್ಳೆಯ ಅಂಶಗಳನ್ನು ಸ್ಫೂರ್ತಿಯನ್ನಾಗಿಸಿ, ಒಳ್ಳೆಯವರಾದ ಅನೇಕರು ನಮ್ಮ ನಡುವೆ ಇದ್ದಾರೆ. ಜೊತೆಗೆ ಕೆಟ್ಟದನ್ನು ನೋಡಿ, ಅದೇ ಹಾದಿ ಹಿಡಿದವರು ಇದ್ದಾರೆ. ಅದೆಷ್ಟೋ ಮಂದಿ ಕ್ರಿಮಿನಲ್‌ಗ‌ಳನ್ನು ಸೆರೆ ಹಿಡಿದಾಗ ತಮ್ಮ ಕೃತ್ಯಕ್ಕೆ ಸಿನಿಮಾಗಳೇ ಸ್ಫೂರ್ತಿ ಎಂದು ಹೇಳುತ್ತಾರಂತೆ – ಈ ಮಾತನ್ನು ಹೇಳಿದವರು ಬೇರೆ ಯಾರೂ ಅಲ್ಲ, ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌. “ಕುಥಸ್ಥ’ ಎಂಬ ಹೊಸಬರ ಸಿನಿಮಾದ ಆಡಿಯೋ ಬಿಡುಗಡೆಗೆ ಅತಿಥಿಯಾಗಿ ಬಂದಿದ್ದ ಆಯುಕ್ತರು, ಸಿನಿಮಾಗಳು ಸಮಾಜದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಆದ ಕಾರಣ ಒಳ್ಳೆಯ ಅಂಶಗಳಿಗೆ ಮೊದಲ ಆದ್ಯತೆ ಕೊಡಿ ಎಂದು ಕಿವಿ ಮಾತು ಹೇಳಿದರು.

Advertisement

ಚಿತ್ರದ ತಾರಾಗಣದಲ್ಲಿ ನವೀನ್‌, ಖುಷಿ ಚಂದ್ರಶೇಖರ್‌, ಪ್ರಿಯಾಪಾಂಡೆ ಮುಂತಾದವರು ನಟಿಸಿದ್ದಾರೆ. ಕವಿರಾಜ್‌, ಶಬರೀಷ್‌ ಅಯ್ಯರ್‌, ಶಂಕರ್‌ ಮೂರ್ತಿ ರಚಿಸಿರುವ ಮತ್ತು ಕನಕದಾಸ ಕೀರ್ತನೆಯನ್ನು ಬಳಸಿಕೊಂಡು ರವಿಶಂಕಣ್‌, ಕಿರಣ್‌ ವರ್ಷಿತ್‌, ಪ್ರಣವ್‌ ಅಯ್ಯಂಗಾರ್‌ ಐದು ಗೀತೆಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಮಂಗಳೂರು, ವಿರಾಜಪೇಟೆಯಲ್ಲಿ ಚಿತ್ರೀಕರಣ ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next