Advertisement

ಅಗ್ನಿ ದುರಂತದಲ್ಲಿ ನಾಲ್ವರ ಬಲಿ ಪಡೆದ ಲೆವನಾ ಹೋಟೆಲ್ ನೆಲಸಮಕ್ಕೆ ಮುಂದಾದ ಪಾಲಿಕೆ

10:18 AM Sep 06, 2022 | Team Udayavani |

ಲಕ್ನೋ: ಅಗ್ನಿ ದುರಂತದಲ್ಲಿ ನಾಲ್ವರು ಸಾವನ್ನಪ್ಪಿದ ಮತ್ತು ಕನಿಷ್ಠ 10 ಮಂದಿ ಗಾಯಗೊಂಡ ಲಕ್ನೋದ ಲೆವಾನಾ ಸೂಟ್ಸ್ ಹೋಟೆಲನ್ನು ನೆಲಸಮ ಮಾಡಲಾಗುವುದು ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

Advertisement

ಹೋಟೆಲ್‌ ನ ಇಬ್ಬರು ಮಾಲೀಕರು ಮತ್ತು ಅದರ ಜನರಲ್ ಮ್ಯಾನೇಜರ್‌ ಗಳನ್ನು ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಲ್ಕು ಅಂತಸ್ತಿನ ಕಟ್ಟಡವನ್ನು ಮಂಗಳವಾರ ಸೀಲ್ ಮಾಡಲಾಗುವುದು ಎಂದು ಲಕ್ನೋ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ಇಂದ್ರಮಣಿ ತ್ರಿಪಾಠಿ ಹೇಳಿದ್ದಾರೆ.

ಲಕ್ನೋದ ವಾಣಿಜ್ಯ ಕೇಂದ್ರವಾದ ಹಜರತ್‌ ಗಂಜ್‌ ನಲ್ಲಿರುವ ಮದನ್ ಮೋಹನ್ ಮಾಳವಿಯಾ ಮಾರ್ಗದಲ್ಲಿರುವ ಲೆವಾನಾ ಸೂಟ್ಸ್‌ ನ ಬೆಂಕಿ ನಂದಿಸಲು ಆರು ಗಂಟೆಗೂ ಹೆಚ್ಚು ಸಮಯ ತೆಗೆದುಕೊಂಡಿದ್ದು, ಮೃತಪಟ್ಟವರಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರಂಭದಲ್ಲಿ 10 ಜನರನ್ನು ಶ್ಯಾಮ ಪ್ರಸಾದ್ ಮುಖರ್ಜಿ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಯಿತು. ಈ ಪೈಕಿ ಇಬ್ಬರು ಮೃತಪಟ್ಟಿದ್ದು, ಏಳು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡವರಲ್ಲಿ ಒಬ್ಬನನ್ನು ಬಿಡುಗಡೆ ಮಾಡಲಾಗಿದೆ, ಬಳಿಕ ಮತ್ತಿಬ್ಬರು ಜನರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಮಾಲಿಕರಾದ ರಾಹುಲ್ ಅಗರ್ವಾಲ್, ರೋಹಿತ್ ಅಗರ್ವಾಲ್, ಪವನ್ ಅಗರ್ವಾಲ್ ಮತ್ತು ಹೋಟೆಲ್ ಜನರಲ್ ಮ್ಯಾನೇಜರ್ ಸಾಗರ್ ಶ್ರೀವಾಸ್ತವ ವಿರುದ್ಧ ಐಪಿಸಿ ಸೆಕ್ಷನ್ 304 ಮತ್ತು 308 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಪಿಯೂಷ್ ಮೊರ್ಡಿಯಾ ಪಿಟಿಐಗೆ ತಿಳಿಸಿದ್ದಾರೆ.

Advertisement

ಮೇ 7 ರಂದು ವಲಯ ಅಧಿಕಾರಿ ಹೋಟೆಲ್‌ ಗೆ ನೋಟಿಸ್ ಕಳುಹಿಸಿದ್ದಾರೆ, ಅದಕ್ಕೆ ಅವರು ಮೇ 12 ರಂದು ಉತ್ತರಿಸಲಾಗಿದೆ. ಅಲ್ಲದೆ ಅವರು 2021 ರಿಂದ 2024 ರವರೆಗೆ ಅಗ್ನಿಶಾಮಕ ಎನ್‌ಒಸಿ (ನಿರಾಕ್ಷೇಪಣಾ ಪ್ರಮಾಣಪತ್ರ) ನವೀಕರಣ ಪತ್ರವನ್ನು ಪ್ರಸ್ತುತಪಡಿಸಿದ್ದರು ಎಂದು ಲಕ್ನೋ ವಿಭಾಗೀಯ ಆಯುಕ್ತ ರೋಶನ್ ಜೇಕಬ್ ಹೇಳಿದ್ದಾರೆ.

ಇದನ್ನೂ ಓದಿ:ಕಾಕ್ ಪಿಟ್ ನಲ್ಲಿ ಶಿಳ್ಳೆ ಸದ್ದು: ಮುಂಬೈಗೆ ಹೊರಟಿದ್ದ ವಿಸ್ತಾರ ವಿಮಾನ ದೆಹಲಿಗೆ ವಾಪಾಸ್

“ಆದರೆ ಅಗ್ನಿಶಾಮಕ ನಿರ್ವಹಣಾ ವ್ಯವಸ್ಥೆಯ ಕೊರತೆ ಮತ್ತು ಮುಂಭಾಗದಲ್ಲಿ ಕಬ್ಬಿಣದ ಗ್ರಿಲ್‌ ಗಳ ಹೊರತಾಗಿಯೂ ಅಗ್ನಿಶಾಮಕ ಎನ್‌ಒಸಿ ಹೇಗೆ ನೀಡಲಾಯಿತು ಎಂಬುದು ತನಿಖೆಯ ವಿಷಯವಾಗಿದೆ” ಎಂದು ಲಕ್ನೋ ಅಭಿವೃದ್ಧಿ ಪ್ರಾಧಿಕಾರದ (ಎಲ್‌ ಡಿಎ) ಅಧ್ಯಕ್ಷರೂ ಆಗಿರುವ ಜಾಕೋಬ್ ಹೇಳಿದರು.

“ಹೋಟೆಲ್ ಎಂದು ಅನುಮೋದಿಸಲಾದ ಕಟ್ಟಡದ ನಕ್ಷೆಯನ್ನು ಮಾಲೀಕರು ಎಲ್‌ ಡಿಎಗೆ ನೀಡಿಲ್ಲ, ಮೇ 26 ರಂದು ವಲಯ ಅಧಿಕಾರಿಯಿಂದ ನೋಟಿಸ್ ಜಾರಿ ಮಾಡಲಾಗಿದ್ದು, ಯಾವುದೇ ಉತ್ತರ ನೀಡದ ಕಾರಣ ಆಗಸ್ಟ್ 28 ರಂದು ಮತ್ತೊಂದು ನೋಟಿಸ್ ಜಾರಿ ಮಾಡಿದೆ. ಕಾನೂನಿನ ಪ್ರಕಾರ ಸೀಲ್ ಮಾಡಿ ನಂತರ ಕೆಡವಲಾಗುವುದು” ಎಂದು ಜಾಕೋಬ್ ಆದೇಶದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next