Advertisement

ಒಂದು ವರ್ಷದ ಹಿಂದೆ ಕೊಲೆಯಾಗಿದ್ದಳು ಎನ್ನಲಾದ ಯುವತಿ ಪ್ರಿಯಕರನ ಜತೆ ಪತ್ತೆ!

12:12 PM Aug 09, 2020 | sudhir |

ಲಕ್ನೋ: ಒಂದೂವರೆ ವರ್ಷಗಳ ಹಿಂದೆ ಕೊಲೆ­ಯಾಗಿದ್ದಳು ಎಂದು ನಂಬಲಾಗಿದ್ದ ಯುವತಿ ಪ್ರಿಯಕರನ ಮನೆಯಲ್ಲಿ ಪತ್ತೆಯಾಗಿ­ದ್ದಾಳೆ. ಉತ್ತರ ಪ್ರದೇಶದ ಅನ್ರೋಹಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮಲಾಪುರ ಗ್ರಾಮದಲ್ಲಿ 2019ರ ಫೆ.6ರಂದು ಕಮಲೇಶ್‌ ಎಂಬ ಯುವತಿ ಕಾಣಿಯಾಗಿದ್ದಳು. ಈ ಕುರಿತು ಆಕೆಯ ಸಹೋದರ ರಾಹುಲ್‌ ಪೊಲೀಸರಿಗೆ ದೂರು ನೀಡಿದ್ದರು.

Advertisement

2019ರ ಫೆ.18ರಂದು ಯುವತಿಯೊಬ್ಬಳ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಕಮಲೇಶ್‌ಳ ತಂದೆ ಸುರೇಶ್‌ ಹಾಗೂ ಆಕೆಯ ಸಹೋದರ ರೂಪ್‌ ಕಿಶೋರ್‌ ಸೇರಿದಂತೆ ಮೂವರನ್ನು ಜೈಲಿಗೆ ಕಳುಹಿಸಲಾಗಿತ್ತು. ನಾಪತ್ತೆ­ಯಾ­ಗಿದ್ದ ಯುವತಿ ಪ್ರಿಯಕರನೊಂದಿಗೆ ಓಡಿ ಹೋಗಿ ಸಹ ಜೀವನ ನಡೆಸುತ್ತಿದ್ದಾಳೆ. ಈ ಜೋಡಿಗೆ ಮಗು ಕೂಡ ಇದೆ. ಯುವತಿಯ ತಂದೆ, ಸಹೋದರನನ್ನು ಜೈಲಿನಲ್ಲಿರಿಸಿರುವುದು ವಿವಾದಕ್ಕೆ ಗುರಿಯಾಗಿದೆ. ಈ ಕುರಿತು ತನಿಖೆ ನಡೆಸಿ ನಮಗೆ ನ್ಯಾಯ ಒದಗಿಸಬೇಕು ಎಂದು ಯುವತಿಯ ಪೋಷಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next