ಲಕ್ನೋ : ನಿವೃತ್ತ ಪೊಲೀಸ್ ಒಬ್ಬರ ಪುತ್ರಿಯನ್ನು ನಾಲ್ವರು ಕಾಮಾಂಧರು ಚಲಿಸುತ್ತಿರುವ ಕಾರಿನಲ್ಲಿ ಗ್ಯಾಂಗ್ ರೇಪ್ ಎಸಗಿ ಇಲ್ಲಿನ ತೇಲಿಬಾಗ್ ರಸ್ತೆಯಲ್ಲಿ ಎಸೆದು ಹೋದ ಅತ್ಯಂತ ಅಮಾನುಷ ಘಟನೆ ಲಕ್ನೋದ ಶಹೀದ್ ಪಥ ಪ್ರದೇಶದಲ್ಲಿ ನಡೆದಿದೆ.
ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು ಪೊಲೀಸರು ಪ್ರಕರಣದ ಬಗ್ಗೆ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ರೇಪ್ ಸಂತ್ರಸ್ತೆಯು ತನ್ನ ಮೇಲೆ ಅತ್ಯಾಚಾರ ಗೈದ ಆರೋಪಿಗಳನ್ನು ಬಬ್ಲೂ , ಕಾಶೀರಾಮ್, ಜೆಪಿ ಗುಪ್ತಾ ಮತ್ತು ಹರೀಶ್ ಎಂದು ಹೆಸರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಚಲಿಸುತ್ತಿದ್ದ ಕಾರಿನಲ್ಲಿ ಈ ನಾಲ್ವರು ಅತ್ಯಾಚಾರಿಗಳು ಸರದಿ ಪ್ರಕಾರ ತನ್ನ ಮೇಲೆ ಸುಮಾರು ಒಂದು ತಾಸಿನ ಅವಧಿಯಲ್ಲಿ ರೇಪ್ ನಡೆಸಿದರು ಎಂದು ಮಹಿಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಿದ್ದಾಳೆ.
ಮಹಿಳೆಯು ಮಲೀಹಾಬಾದ್ ನಿವಾಸಿಯಾಗಿದ್ದು ಆಕೆಯ ತಂದೆ 2013ರಲ್ಲಿ ಪೊಲೀಸ್ ಇಲಾಖೆಯಿಂದ ನಿವೃತ್ತರಾಗಿದ್ದರು.