ಲಕ್ನೋ/ತಿರುವನಂತಪುರ: ಜಿಎಸ್‌ಟಿ ಮಂಡಳಿಯ 45ನೇ ಸಭೆ ಶುಕ್ರವಾರ ಲಕ್ನೋದಲ್ಲಿ ನಡೆಯಲಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಎಲ್ಲ ರಾಜ್ಯಗಳ ವಿತ್ತ ಸಚಿವರು ಪಾಲ್ಗೊಳ್ಳಲಿದ್ದಾರೆ.
ಪೆಟ್ರೋಲ್, ಡೀಸೆಲ್‌ನ್ನು ಜಿಎಸ್‌ಟಿ ವ್ಯಾಪ್ತಿಗೆ ಸೇರಿಸುವುದು, ಝೊಮ್ಯಾಟೋ, ಸ್ವಿಗ್ಲಿ, ಫುಡ್‌ಪಂಡಾ ಆಹಾರ ಡೆಲಿವರಿ ಆ್ಯಪ್‌ಗಳಿಗೆ ರೆಸ್ಟಾರೆಂಟ್‌ಗಳೆಂದು ಪರಿಗಣನೆ, ಜಿಎಸ್‌ಟಿ ಇ-ಪೋರ್ಟಲ್ ನಿರ್ಮಾಣ ಸೇರಿ ಹಲವು ವಿಚಾರಗಳ ಬಗ್ಗೆ ಸಭೆ ಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ .
ಇದನ್ನೂ ಓದಿ:ರಕ್ಷಣಾ ಕಚೇರಿಗಳ ವಿಚಾರದಲ್ಲಿ ಮೌನವೇಕೆ? ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ಪ್ರಶ್ನೆ
ಇದೇ ವೇಳೆ, ಕೊಬ್ಬರಿ ಎಣ್ಣೆ ಮೇಲಿನ ತೆರಿಗೆಯನ್ನು ಶೇ.5ರಿಂದ ಶೇ. 18ಕ್ಕೆ ಏರಿಕೆ ಮಾಡುವ ನಿರ್ಧಾರವನ್ನೂ ಸಭೆಯಲ್ಲಿ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಅದಕ್ಕೆ ಆಕ್ಷೇಪಿಸುವುದಾಗಿ ಕೇರಳ ವಿತ್ತ ಸಚಿವ ಕೆ.ಎನ್. ಬಾಲಗೋಪಾಲ್ ತಿಳಿಸಿದ್ದಾರೆ.