Advertisement
10 ಪಂದ್ಯಗಳಿಂದ ಕೇವಲ 8 ಅಂಕ ಹೊಂದಿರುವ ಹೈದರಾಬಾದ್‌ಗೆ ಪ್ಲೇ ಆಫ್ ಬಾಗಿಲು ಬಹುತೇಕ ಮುಚ್ಚಿದೆಯಾದರೂ ಲಕ್ನೋಗೆ ಮೇಲೇರಲು ಇಲ್ಲಿನ ಫಲಿತಾಂಶ ಅತ್ಯಂತ ಮಹತ್ವದ್ದಾಗಿದೆ. ಆದರೆ ಪಂದ್ಯ ನಡೆಯುವುದು ಹೈದರಾಬಾದ್‌ನಲ್ಲಿ ಎಂಬುದು ಐಡನ್ ಮಾರ್ಕ್‌ರಮ್ ಪಡೆಗೆ ಪ್ಲಸ್ ಪಾಯಿಂಟ್.
ಈವರೆಗೆ ಹೈದರಾಬಾದ್ ವಿರುದ್ಧ ಆಡಿದ ಎರಡೂ ಪಂದ್ಯಗಳನ್ನು ಲಕ್ನೋ ಜಯಿಸಿದೆ. ಇದರಲ್ಲಿ ಪ್ರಸಕ್ತ ಋತುವಿನ ಮೊದಲ ಸುತ್ತಿನ ಮುಖಾಮುಖೀಯೂ ಸೇರಿದೆ. ಲಕ್ನೋದಲ್ಲಿ ನಡೆದ ಸಣ್ಣ ಮೊತ್ತದ ಈ ಪಂದ್ಯದಲ್ಲಿ ರಾಹುಲ್ ಪಡೆ 5 ವಿಕೆಟ್‌ಗಳಿಂದ ಗೆದ್ದು ಬಂದಿತ್ತು. ಹೈದರಾಬಾದ್ 8 ವಿಕೆಟಿಗೆ ಕೇವಲ 121 ರನ್ ಗಳಿಸಿದರೆ, ಲಕ್ನೋ 16 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ ಗುರಿ ಮುಟ್ಟಿತ್ತು. ಕೃಣಾಲ್ ಪಾಂಡ್ಯ ಅವರ ಆಲ್‌ರೌಂಡ್ ಶೋ ಈ ಪಂದ್ಯದ ಆಕರ್ಷಣೆಯಾಗಿತ್ತು. 18ಕ್ಕೆ 3 ವಿಕೆಟ್ ಕಿತ್ತ ಪಾಂಡ್ಯ, ರನ್ ಚೇಸಿಂಗ್ ವೇಳೆ 34 ರನ್ ಕೊಡುಗೆ ಸಲ್ಲಿಸಿದ್ದರು. ಆದರೆ ಈ ಪಂದ್ಯದ ಬಳಿಕ ಕೃಣಾಲ್ ಅಷ್ಟೇನೂ ಕ್ಲಿಕ್ ಆಗಿಲ್ಲ ಎಂಬದನ್ನು ಗಮನಿಸಬೇಕು. ಈಗ ಹ್ಯಾಟ್ರಿಕ್ ಸೋಲು
ನಾಯಕ ಕೆ.ಎಲ್. ರಾಹುಲ್ ಹೊರಬಿದ್ದ ಬಳಿಕ ಲಕ್ನೋಗೆ ಅದೃಷ್ಟ ಕೈಕೊಡಲಾರಂಭಿಸಿದೆ. ಅದು ಕೊನೆಯ ಸತತ 3 ಪಂದ್ಯಗಳಲ್ಲಿ ಎಡವಿದೆ. ಆದರೆ “ಪ್ಲೇ ಆಫ್ ಮಿಕ್ಸ್’ನಲ್ಲಿದೆ. ಗೆಲುವು ಅನಿವಾರ್ಯ ಎಂಬ ಸ್ಥಿತಿ ಕೃಣಾಲ್ ಪಾಂಡ್ಯ ಪಡೆಯದ್ದು. ರನ್‌ರೇಟ್ ಪ್ಲಸ್‌ನಲ್ಲಿರುವುದು ಲಕ್ನೋಗೊಂದು ಲಾಭ.
Related Articles
Advertisement
ಲಕ್ನೋ ಬ್ಯಾಟಿಂಗ್ ಲೈನ್‌ಅಪ್ ಬಲಿಷ್ಠವಾಗಿಯೇ ಇದೆ. ಕೈಲ್ ಮೇಯರ್, ವಿಳಂಬವಾಗಿ ತಂಡವನ್ನು ಸೇರಿಕೊಂಡ ಕ್ವಿಂಟನ್ ಡಿ ಕಾಕ್, ಮಾರ್ಕಸ್ ಸ್ಟೋಯಿನಿಸ್, ನಿಕೋಲಸ್ ಪೂರಣ್, ಆಯುಷ್ ಬದೋನಿ ಮೊದಲಾದ ಬಿಗ್ ಹಿಟ್ಟರ್ ಸಾಲಾಗಿ ನಿಂತಿದ್ದಾರೆ.
“ಆರೇಂಜ್ ಆರ್ಮಿ” ಹೈದರಾಬಾದ್ ಕಾಗದದಲ್ಲಿ ಬಲಿಷ್ಠ ತಂಡ. ವಿದೇಶಿ ಬ್ಯಾಟರ್‌ಗಳನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ. ನಾಯಕ ಐಡನ್ ಮಾರ್ಕ್‌ರಮ್, ಹೆನ್ರಿಚ್ ಕ್ಲಾಸೆನ್ ಮತ್ತು ನ್ಯೂ ಎಂಟ್ರಿ ಆಗಿರುವ ಗ್ಲೆನ್ ಫಿಲಿಪ್ಸ್ ಇಲ್ಲಿನ ಪ್ರಮುಖರು. ಶತಕ ಬಾರಿಸಿದ ಬಳಿಕ ಚಾರ್ಮ್ ಕಳೆದುಕೊಂಡ ಹ್ಯಾರಿ ಬ್ರೂಕ್ ಸ್ಥಾನವೀಗ ಫಿಲಿಪ್ಸ್ ಪಾಲಾಗಿದೆ.
ಭಾರತದ ಆಟಗಾರರಲ್ಲಿ ಅಭಿಷೇಕ್ ಶರ್ಮ ಪರ್ವಾಗಿಲ್ಲ. ಆದರೆ ಮಾಯಾಂಕ್ ಅಗರ್ವಾಲ್ (9 ಪಂದ್ಯ, 187 ರನ್), ರಾಹುಲ್ ತ್ರಿಪಾಠಿ 10 ಪಂದ್ಯ, 237 ರನ್) ಮಂಕಾಗಿದ್ದಾರೆ. ಸ್ಪಿನ್ ವಿಷಯಕ್ಕೆ ಬಂದಾಗ ಮಾಯಾಂಕ್ ಮಾರ್ಕಂಡೆ ಮಾತ್ರ ಗೋಚರಿಸುತ್ತಾರೆ. ವೇಗದ ವಿಭಾಗದಲ್ಲಿ ಭುವನೇಶ್ವರ್ ಕುಮಾರ್, ಟಿ. ನಟರಾಜನ್ ಉತ್ತಮ ಲಯದಲ್ಲಿದ್ದಾರೆ.