Advertisement
ಮೊದಲು ಬ್ಯಾಟಿಂಗ್ ಮಾಡಿದ್ದ ಲಕ್ನೋ, ಕೋಲ್ಕತಾ ತಂಡದ ಸಂಘಟಿತ ದಾಳಿಯ ಹೊರತಾಗಿಯೂ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತ್ತು. ಇದನ್ನು ಬೆನ್ನತ್ತಿದ ಕೋಲ್ಕತಾ ನೈಟ್ ರೈಡರ್ಸ್ ತಂಡ 14.4 ಓವರ್‌ಗಳಲ್ಲಿ 101 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಲಕ್ನೋ 75 ರನ್‌ಗಳ ಗೆಲುವು ಸಾಧಿಸಿತು. ಅಲ್ಲದೇ 14 ಓವರ್ ಎಸೆದ ಹೋಲ್ಡರ್ ಹ್ಯಾಟ್ರಿಕ್ ಮೂಲಕ ಭರ್ಜರಿ ಜಯ ಒದಗಿಸಿದರು.
ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಮತ್ತು ದೀಪಕ್ ಹೂಡಾ ಅವರ ಉತ್ತಮ ಆಟದಿಂದಾಗಿ ಲಕ್ನೋ ಸೂಪರ್ ಜೈಂಟ್ಸ್ 20 ಓವರ್‌ಗಳಲ್ಲಿ 7 ವಿಕೆಟಿಗೆ 176 ರನ್ನುಗಳ ಉತ್ತಮ ಮೊತ್ತ ಪೇರಿಸಿತ್ತು. ಲಕ್ನೋದ ಬ್ಯಾಟಿಂಗ್ ತಾರೆ, ನಾಯಕ ರಾಹುಲ್ ಮೊದಲ ಓವರ್ ವೇಳೆ ದುರದೃಷ್ಟವಶಾತ್ ರನೌಟ್ ಆದರು. ಇದರಿಂದ ತಂಡದ ಬ್ಯಾಟಿಂಗ್‌ಗೆ ಬಲವಾದ ಹೊಡೆತ ಬಿತ್ತು. ಆದರೆ ಕಾಕ್ ಮತ್ತು ಹೂಡಾ ಈ ಆಘಾತದಿಂದ ತಂಡವನ್ನು ಮೇಲಕ್ಕೆ ಎತ್ತುವಲ್ಲಿ ಯಶಸ್ವಿಯಾದರು. ಈ ಹಿಂದಿನ ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಕಾಕ್ ಮತ್ತು ಹೂಡಾ ಅಮೋಘವಾಗಿ ಆಡಿ ಉತ್ತಮ ಇನಿಂಗ್ಸ್ ಕಟ್ಟಿದರು. ದ್ವಿತೀಯ ವಿಕೆಟಿಗೆ 71 ರನ್ನುಗಳ ಜತೆಯಾಟ ನಡೆಸಿ ತಂಡವನ್ನು ಆಧರಿಸಿದರು.
Related Articles
Advertisement
ಕೊನೆ ಹಂತದಲ್ಲಿ ಸ್ಟಾಯಿನಿಸ್ ಮತ್ತು ಹೋಲ್ಡರ್ ಬಿರುಸಿನ ಆಟ ಆಡಿದ್ದರಿಂದ ತಂಡದ ಮೊತ್ತ 170ರ ಗಡಿ ದಾಟುವಂತಾಯಿತು. ಸ್ಟಾಯಿನಿಸ್ 14 ಎಸೆತಗಳಿಂದ 1 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 28 ರನ್ ಗಳಿಸಿದರೆ ಹೋಲ್ಡರ್ ಕೇವಲ 4 ಎಸೆತಗಳಿಂದ 2 ಸಿಕ್ಸರ್ ಸಹಿತ 13 ರನ್ ಹೊಡೆದರು. ಬಿಗು ದಾಳಿ ಸಂಘಟಿಸಿದ ಆ್ಯಂಡ್ರೆ ರಸೆಲ್ ತನ್ನ 3 ಓವರ್‌ಗಳ ದಾಳಿಯಲ್ಲಿ 22 ರನ್ನಿಗೆ 2 ವಿಕೆಟ್ ಕಿತ್ತರು. ಟಿಮ್ ಸೌದಿ, ಶಿವಂ ಮಾವಿ, ಸುನೀಲ್ ನಾರಾಯಣ್ ತಲಾ 1 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್: ಲಕ್ನೋ ಜೈಂಟ್ಸ್ 20 ಓವರ್, 176/7 (ಡಿ ಕಾಕ್ 50, ದೀಪಕ್ ಹೂಡಾ 41, ಆಂಡ್ರೆ ರಸೆಲ್ 22ಕ್ಕೆ 2). ಕೋಲ್ಕತಾ 14.3 ಓವರ್, 101/10(ರಸೆಲ್ 45, ನಾರಾಯಣ್ 22).