Advertisement

ಕಾಶ್ಮೀರದಲ್ಲಿ ಇಬ್ಬರು ಲಷ್ಕರ್‌ ಉಗ್ರರು ಖತಂ

03:45 AM Mar 10, 2017 | |

ಶ್ರೀನಗರ: ಲಕ್ನೋ ಉಗ್ರರ ದಾಳಿ ಪ್ರಕರಣ ನಡೆದು 48 ಗಂಟೆ ಕಳೆಯುವಷ್ಟರಲ್ಲಿ ಕಾಶ್ಮೀರದ ಗಡಿಯಲ್ಲಿ ಒಳನುಸುಳಿಬಂದ ಇಬ್ಬರು ಲಷ್ಕರ್‌ ಭಯೋತ್ಪಾದಕರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ. ಪುಲ್ವಾಮದ ಅವಂತಿಪೊರದಲ್ಲಿ ಗುರುವಾರ ನಿರಂತರ 9 ಗಂಟೆಗಳ ಗುಂಡಿನ ಚಕಮಕಿಯಲ್ಲಿ ಇಬ್ಬರು ನಾಗರಿಕರೂ ಸಾವನ್ನಪ್ಪಿದ್ದಾರೆ.

Advertisement

ಖಚಿತ ಮಾಹಿತಿಯನ್ನಾಧರಿಸಿ ಪದ್ಗಂಪೊರ ಗ್ರಾಮಕ್ಕಾಗಮಿಸಿದ ಭದ್ರತಾ ಪಡೆ ತಡರಾತ್ರಿ 2.30ರ ಸುಮಾರಿಗೆ ಕಾರ್ಯಾಚರಣೆ ಆರಂಭಿಸಿತು. ಒಂದಕ್ಕೊಂದು ತಾಗಿಕೊಂಡಿವ ಎರಡು ಕಟ್ಟಡಗಳಲ್ಲಿ ಅಡಗಿದ್ದ ಉಗ್ರರು ಬೆಳಗಿನಜಾವ 4.40ರ ಸುಮಾರಿಗೆ ಬಹಿರಂಗವಾಗಿ ಗುಂಡಿನ ದಾಳಿ ನಡೆಸಲಾರಂಭಿಸಿದರು. 

ಇದಕ್ಕೆ ಪ್ರತ್ಯುತ್ತರವಾಗಿ ಭದ್ರತಾ ಪಡೆ ಗುಂಡಿನ ದಾಳಿ ನಡೆಸಿ ಹೊಡೆದುರುಳಿಸಿದೆ. ಇಬ್ಬರೂ ಉಗ್ರರು ಲಷ್ಕರ್‌ ಇ-ತೊಯ್ಬಾ (ಎಲ್‌ಇಟಿ) ಸಂಘಟನೆಗೆ ಸೇರಿದವರಾಗಿದ್ದಾರೆ.  ಇನ್ನೂ ಕೆಲ ನಾಗರಿಕರಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next