ಲಕ್ನೋ: ಚಲಿಸುತ್ತಿರುವ ಸ್ಕೂಟಿಯಲ್ಲೇ ಜೋಡಿಯೊಂದು ರೊಮ್ಯಾನ್ಸ್ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರು ಜೋಡಿಯ ಹುಡುಕಾಟಕ್ಕೆ ಮುಂದಾಗಿದೆ ಎಂದು ವರದಿ ತಿಳಿಸಿದೆ.
ಅತ್ತಿತ್ತ ಸಂಚರಿಸುತ್ತಿರುವ ವಾಹನಗಳ ನಡುವೆ ಸ್ಕೂಟಿಯಲ್ಲಿ ಹೋಗುತ್ತಿರುವ ಜೋಡಿಯೊಂದು ರೊಮ್ಯಾನ್ಸ್ ಮಾಡಿಕೊಂಡು ಹೋಗುತ್ತಿದೆ. ಹುಡುಗಿ ಸ್ಕೂಟಿ ಸವಾರನನ್ನು ಅಪ್ಪಿಕೊಂಡು ಕಿಸ್ಸಿಂಗ್ ಮಾಡುತ್ತಿದ್ದಾಳೆ. ಯಾರೋ ಇತರ ಸವಾರರು ಈ ದೃಶ್ಯವನ್ನು ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ತುಂಬಾ ವೈರಲ್ ಆಗಿದೆ.
ವಿಡಿಯೋ ಪರಿಶೀಲಿಸಿದ ಬಳಿಕ ಇದು ಲಕ್ನೋದ ಹಜರತ್‌ಗಂಜ್ ಪ್ರದೇಶದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಅಕ್ಕಪಕ್ಕದ ಸಿಸಿಟಿವಿಯನ್ನು ಪರಿಶೀಲಿಸಿ ವಾಹನ ನಿಯಮ ಉಲ್ಲಂಘಿಸಿದವರ ಪತ್ತೆಗೆ ಬಲೆ ಬೀಸಿದೆ.
ಮೋಟಾರ್ ಕಾಯಿದೆ ನಿಯಮ ಉಲ್ಲಂಘನೆ ಹಾಗೂ ಆಶ್ಲೀಲತೆ ಹರಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು, ಇದಕ್ಕಾಗಿ ತಂಡವನ್ನು ರಚಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
Related Articles