Advertisement
ಇದೊಂದು ಸರಳ ಲೆಕ್ಕಾಚಾ ರದ ಮುಖಾಮುಖೀ. 13 ಪಂದ್ಯಗ ಳಿಂದ 15 ಅಂಕ ಹೊಂದಿರುವ ಲಕ್ನೋ ತೃತೀಯ ಸ್ಥಾನದಲ್ಲಿದೆ. ಕೋಲ್ಕತಾವನ್ನು ಮಣಿಸಿದರೆ ಪ್ಲೇ ಆಫ್ ಖಾತ್ರಿಯಾಗಲಿದೆ. ಅಕಸ್ಮಾತ್ ಸೋತರೂ ಉಳಿದ ಪಂದ್ಯಗಳ ಫಲಿತಾಂಶ ಲಕ್ನೋಗೆ ಲಾಭವಾಗಿ ಪರಿಣಮಿಸುವ ಸಾಧ್ಯತೆ ಇದೆ.
ಕೋಲ್ಕತಾ ಅಂಗಳ ಬ್ಯಾಟಿಂಗ್‌ಗೆ ಭಾರೀ ನೆರವು ನೀಡುತ್ತಿದೆ. ಆದರೆ ಆತಿಥೇಯ ತಂಡಕ್ಕೆ ಇದರ ಲಾಭ ಎತ್ತಲಾಗದಿದ್ದುದೊಂದು ದುರಂತ. ಗುಜರಾತ್ ಮತ್ತು ರಾಜಸ್ಥಾನ್ ವಿರುದ್ಧ ಅದು ಮೊದಲು ಬ್ಯಾಟಿಂಗ್ ನಡೆಸಿಯೂ ಗಳಿಸಿದ್ದು 7ಕ್ಕೆ 179 ಹಾಗೂ 8ಕ್ಕೆ 149 ರನ್ ಮಾತ್ರ. ಇದಕ್ಕೆ ವ್ಯತಿರಿಕ್ತವೆಂಬಂತೆ ಚೆನ್ನೈ ಮತ್ತು ಹೈದರಾಬಾದ್ ಇನ್ನೂರರ ಗಡಿ ದಾಟಿದ್ದನ್ನು ಮರೆಯುವಂತಿಲ್ಲ. ಚೆನ್ನೈ 4ಕ್ಕೆ 235 ಹಾಗೂ ಹೈದರಾಬಾದ್ 4ಕ್ಕೆ 228 ರನ್ ಪೇರಿಸಿತ್ತು.
Related Articles
Advertisement
ಕೆಕೆಆರ್‌ಗೆ ಹೋಲಿಸಿದರೆ ಲಕ್ನೋ ಸಾಮರ್ಥ್ಯ ಉನ್ನತ ಮಟ್ಟದಲ್ಲಿದೆ. ನಾಯಕ ಕೆ.ಎಲ್. ರಾಹುಲ್ ಗೈರಲ್ಲೂ ಅದು ಚೇತೋಹಾರಿ ಪ್ರದರ್ಶನ ಕಾಯ್ದುಕೊಂಡು ಬಂದಿದೆ. ದೀಪಕ್ ಹೂಡಾ ಹೊರತುಪಡಿಸಿ ಉಳಿದವರೆಲ್ಲ ಬ್ಯಾಟಿಂಗ್ ವಿಭಾಗದಲ್ಲಿ ಮಿಂಚು ಹರಿಸುತ್ತಿದ್ದಾರೆ. ಸ್ಟೋಯಿನಿಸ್, ಡಿ ಕಾಕ್, ಪೂರಣ್, ಮಂಕಡ್, ಬದೋನಿ ಇವರಲ್ಲಿ ಪ್ರಮುಖರು.
ಆದರೆ ಬೌಲಿಂಗ್ ವಿಭಾಗ ಅಷ್ಟೇನೂ ಘಾತಕವಲ್ಲ. ಮೊಹ್ಸಿನ್ ಖಾನ್, ರವಿ ಬಿಷ್ಣೋಯಿ, ಯಶ್ ಠಾಕೂರ್, ನವೀನ್ ಉಲ್ ಹಕ್, ಕೃಣಾಲ್ ಪಾಂಡ್ಯ ಮೇಲೆ ಹೆಚ್ಚು ಒತ್ತಡವಿದೆ.