Advertisement

ನಾಯಿಗೆ ಡ್ರೋನ್‌ ಲಿಫ್ಟ್ : ಶ್ವಾನ ಮರಿ ರಕ್ಷಣೆಗೆ AI ಬಳಕೆ

08:45 AM May 04, 2018 | Team Udayavani |

ಲಕ್ನೋ: ಮುದ್ದು ಮುದ್ದಾದ ನಾಯಿ ಮರಿಗಳೆಂದರೆ ಯಾರಿಗೆ ಇಷ್ಟವಾಗೋದಿಲ್ಲ ಹೇಳಿ? ಅವುಗಳ ಆಟ ನೋಡುವುದೇ ಚೆಂದ. ಲಕ್ನೋದಲ್ಲಿ ನಾಯಿಮರಿಗಳನ್ನು ಪ್ರೀತಿಸುವ ಯುವಕನೊಬ್ಬ ಮೋರಿಯೊಳಗೆ ಬಿದ್ದಿದ್ದ ನಾಯಿ ಮರಿಯೊಂದನ್ನು ತಾನೇ ತಯಾರಿಸಿದ ಡ್ರೋನ್‌ ಮೂಲಕ ಮೇಲೆತ್ತಿ ಸುದ್ದಿಯಾಗಿದ್ದಾನೆ.

Advertisement

ಇತ್ತೀಚೆಗೆ, ಎಂದಿನಂತೆ ಮುಂಜಾನೆಯ ವಾಕಿಂಗ್‌ಗಾಗಿ ತೆರಳಿದ್ದ ಮಿಲಿಂದ್‌ ರಾಜ್‌ (27) ಅವರಿಗೆ ಹತ್ತಿರದ ಚರಂಡಿಯಿಂದ ನಾಯಿ ಮರಿಯ ಚೀತ್ಕಾರ ಕೇಳಿದೆ. ಹೋಗಿ ನೋಡಿದಾಗ, ಭಾರೀ ಕೊಚ್ಚೆ ತುಂಬಿದ್ದ ಆ ಚರಂಡಿಯೊಳಕ್ಕೆ ಅದು ಬಿದ್ದಿದ್ದು ಕಂಡಿದೆ. ಚರಂಡಿ ಆಳವಾಗಿದ್ದು, ಕೆಳಗಿಳಿದರೆ ತಾವೇ ಮುಳುಗುವ ಸಂಭವ ಇದ್ದಿದ್ದರಿಂದ ಇದಕ್ಕೆ ಬೇರೊಂದು ಉಪಾಯ ಮಾಡಿದ್ದಾರೆ.

ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದಲ್ಲಿ ತೀವ್ರ ಆಸಕ್ತಿ ಹೊಂದಿರುವ ಅವರು ಈಗಾಗಲೇ ಹಲವಾರು ಪುಟ್ಟ ರೋಬೋ ಗಳನ್ನು, ಡ್ರೋನ್‌ಗಳನ್ನು ತಯಾರಿಸಿದ್ದಾರೆ. ಈ ಅನುಭವದ ಆಧಾರದ ಮೇಲೆ ನಾಯಿಯನ್ನು ಮೇಲೆತ್ತಲು ಆರೇ ಗಂಟೆಯ ಅವಧಿಯಲ್ಲಿ ವಿಶೇಷ ಡ್ರೋನ್‌ ತಯಾರಿಸಿದ್ದಾರೆ. ನಂತರ, ಡ್ರೋನ್‌ ಪ್ರಯೋಗಿಸಿ ನಾಯಿ ಮರಿ ಮೇಲೆತ್ತಿದ್ದಾರೆ. ನಾಯಿಮರಿಯನ್ನು ನಯವಾಗಿ ಹಿಡಿಯುವಂಥ ರೋಬೋ ಕೈಗಳು ಹಾಗೂ ಆ ಕೈಗಳಲ್ಲಿನ ನಾಯಿ ಮರಿ ಎದೆಬಡಿತ ದಾಖಲಿಸುವ ಸೆನ್ಸರ್‌ ಅಳವಡಿಸಿದ್ದು ಡ್ರೋನ್‌ ನ ವಿಶೇಷವಾಗಿತ್ತಂತೆ.

Advertisement

Udayavani is now on Telegram. Click here to join our channel and stay updated with the latest news.

Next