Advertisement

ಮಾಲ್ ನಲ್ಲಿ ನಮಾಜ್ ಗೆ ಪ್ರತಿಯಾಗಿ ಸುಂದರಕಾಂಡ : ಲಕ್ನೋದಲ್ಲಿ ಮೂವರ ಬಂಧನ

03:03 PM Jul 16, 2022 | Team Udayavani |

ಲಕ್ನೋ : ಮಾಲ್ ಆವರಣದೊಳಗೆ ಸುಂದರಕಾಂಡ ಪಠಿಸಲು ಯತ್ನಿಸಿದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು ಶುಕ್ರವಾರ ಲಕ್ನೋದ ಲುಲು ಮಾಲ್‌ನಲ್ಲಿ ಮೂವರನ್ನು ಬಂಧಿಸಿದ್ದಾರೆ. ಪೊಲೀಸ್ ಅಧಿಕಾರಿಗಳ ಪ್ರಕಾರ, ಬಂಧಿತ ಮೂವರು ಹಿಂದೂ ಸಮಾಜ ಪಕ್ಷಕ್ಕೆ ಸೇರಿದವರಾಗಿದ್ದು, ಅವರನ್ನು ಮಾಲ್‌ನ ಪ್ರವೇಶ ದ್ವಾರದಲ್ಲಿ ಬಂಧಿಸಲಾಗಿದೆ.

Advertisement

ಜುಲೈ 10 ರಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಾಲ್ ಅನ್ನು ಉದ್ಘಾಟಿಸಿದರು.ಅದಾದ ಬಳಿಕ ಮಾಲ್ ಒಳಗೆ ಕೆಲವರು ನಮಾಜ್ ಮಾಡುವ ವಿಡಿಯೋ ವೈರಲ್ ಆಗಿತ್ತು. ಅದಕ್ಕೆ ಪ್ರತಿಯಾಗಿ ಸುಂದರಕಾಂಡ ಪಠಿಸಲು ಯತ್ನಿಸಲಾಗಿದೆ.

ಎಎನ್‌ಐ ಜೊತೆ ಮಾತನಾಡಿದ ಲಕ್ನೋದ ದಕ್ಷಿಣದ ಎಡಿಸಿಪಿ ರಾಜೇಶ್ ಶ್ರೀವಾಸ್ತವ, ಪ್ರಸ್ತುತ, ಶಾಂತಿಯುತ ಪರಿಸ್ಥಿತಿ ಇದೆ ಎಂದು ಹೇಳಿದ್ದಾರೆ. ನಮಾಜ್‌ನ ಗದ್ದಲದ ನಡುವೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಅಖಿಲ ಭಾರತ ಹಿಂದೂ ಮಹಾಸಭಾದ ಶಿಶಿರ್ ಚತುರ್ವೇದಿ ಅವರ ದೂರಿನ ಮೇರೆಗೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ವಿಭಾಗದ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಇದನ್ನೂ ಓದಿ : Presidential Polls 2022: ಯಶವಂತ್ ಸಿನ್ಹಾಗೆ ಆಮ್ ಆದ್ಮಿ ಪಕ್ಷದ ಬೆಂಬಲ; ಸಂಸದ ಸಿಂಗ್

Advertisement

Udayavani is now on Telegram. Click here to join our channel and stay updated with the latest news.

Next